Secular TV a news channel from Secular Media House. Secular TV aims at providing unbiased news, obeying all the journalistic code of conduct and ethics.
Secular TV – ಇದು ಜಾತ್ಯಾತೀತತೆಯ ಪ್ರತಿಬಿಂಬ ಅಬ್ಬರಗಳ ನಡುವೆ.. ಸತ್ಯಗಳ ಅನಾವರಣ!
ಜಾತ್ಯಾತೀತತೆಯ ಅಳಿವು-ಉಳಿವಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗ “ಜಾತ್ಯಾತೀತತೆ” ಈ ದೇಶದ ಹೃದಯವೆಂದು ಗಟ್ಟಿ ಧ್ವನಿಯಲ್ಲಿ ಉಚ್ಚರಿಸುವುದಕ್ಕಾಗಿ ಅದೇ ಹೆಸರಿನ ಮಾಧ್ಯಮವನ್ನು ಜನರ ಮುಂದಿಟ್ಟಿದ್ದೇವೆ.
ನಾವು ಕಿರುಚಾಡುವುದಿಲ್ಲ. ಸುಳ್ಳನ್ನೇ ಅಬ್ಬರಿಸಿ ದಿಕ್ಕು ತಪ್ಪಿಸುವುದಿಲ್ಲ. ನಮ್ಮಲ್ಲೇ ಮೊದಲು ಎಂಬ ಪೈಪೋಟಿಯಿಲ್ಲ. ಸ್ಪೋಟಕ ಸುದ್ದಿಯೆಂಬ ತಲೆಬರಹ ನೀಡಿ ನಿಮ್ಮನ್ನು ಸೆಳೆಯುವ ಅಜೆಂಡಾನೂ ಇಲ್ಲ. ಶಿಖರವನ್ನೇರುತ್ತೇವೆ ಎಂಬ ಕನಸೂ ಇಲ್ಲ. ಒಂದಷ್ಟು ಸತ್ಯವನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತೇವೆ. ಘಟನೆಗಳನ್ನು ಘಟನೆಯಾಗಿಯೇ ತೋರ್ಪಡಿಸುವುದಕ್ಕಾಗಿ ಸಮಯ, ಬೆವರ ಹನಿಗಳನ್ನು ನೀಡುತ್ತೇವೆ. ಸುಳ್ಳುಗಳೇ ರಾರಾಜಿಸುವ ವೇಳೆ ಸತ್ಯವನ್ನು ಹೆಗಲ ಮೇಲೆ ಹೊತ್ತು ನಡೆಯುವ ಕನಸಷ್ಟೇ “ಸೆಕ್ಯೂಲರ್ ಟಿವಿ” ಯದ್ದು.
ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವ, ಪತ್ರಿಕಾ ಧರ್ಮವನ್ನು ಉಳಿಸಿ ಬೆಳೆಸುವ ಕನಸುಗಳೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಜಾತ್ಯಾತೀತತೆಯನ್ನು ವಿಸ್ತರಿಸುವುದಕ್ಕಾಗಿ “ಸೆಕ್ಯೂಲರ್ ಟಿವಿ” ನಿಮ್ಮ ಮುಂದಿದೆ.
ಹೆಚ್ಚಾಗಿ ಜನರ ಧ್ವನಿಗಳು, ಜನರ ಸಮಸ್ಯೆಗಳೇ ಇಲ್ಲಿ ಕಾಣಿಸಿಕೊಳ್ಳಲಿದೆ. ಜೊತೆಯಾಗಿ ಜಾತ್ಯಾತೀತತೆಯ ಪ್ರಬಲ ದನಿಯಾಗೋಣ. #SecularTV #SecularTVKannada