Secular TV
Saturday, May 27, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

siddaramaiah:ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

Secular TVbySecular TV
A A
Reading Time: 1 min read
Web Story : Dk Shivakumar : ರಾಜ್ಯದಲ್ಲಿ ಕಾಂಗ್ರೆಸ್ ಬಂದ್ರೆ ಡಬಲ್ ಬೆಡ್ ರೂಮ್ ಮನೆ : ಡಿಕೆಶಿ ಭರವಸೆ
0
SHARES
Share to WhatsappShare on FacebookShare on Twitter

ಬೆಂಗಳೂರು: ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿ ಮಾಡಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಸಮಾಜ ವಿಭಜನೆ ಮಾಡುವ, ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನವನ್ನು ಮಾಡಿದೆ. ಮೀಸಲಾತಿಯ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರರು ನೀಡಿರುವ ಸಂವಿಧಾನದ ಉದ್ದೇಶ ಯಾವುದೇ ಜಾತಿ, ದರ್ಮ, ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡದೆ ಸಮಾನ ರಕ್ಷಣೆ ನೀಡಬೇಕು ಎಂಬುದು. ಇದನ್ನೇ ಸಂವಿಧಾನದ 14ನೇ ಪರಿಚ್ಛೇದ ಹೇಳುವುದು. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಆ ಜನರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎಂಬುದು ಇದರ ಉದ್ದೇಶ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಇರುವವರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಸಮಸಮಾಜ ಸ್ಥಾಪನೆಯ ಕಡೆಗೆ ಹೋಗಲು ಸಾಧ್ಯವಾಗುತ್ತದೆ. ಇದನ್ನು ಸಂವಿಧಾನ ಸ್ಟಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ನೀಡುತ್ತ ಬಂದಿವೆ.

ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತಿ ವ್ಯವಸ್ಥೆ ಇರುವುದರಿಂದಲೇ ಅಸಮಾನತೆ ನಿರ್ಮಾಣವಾಗಿರುವುದು. 1949ರ ನವೆಂಬರ್‌ 25ರಂದು ಅಂಬೇಡ್ಕರರು ಮಾಡಿದ ಭಾಷಣದಲ್ಲಿ, 1950ರ ಜನವರಿ 26ರಿಂದ ನಾವು ವೈರುದ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ಮಾಡದೆ ಹೋದರೆ ನಮಗೆ ಸ್ವಾತಂತ್ರ್ಯ ಬಂದಿದ್ದಕ್ಕೆ ಅರ್ಥವಿರುವುದಿಲ್ಲ. ನಾವು ಈ ಅಸಮಾನತೆಯನ್ನು ಹೋಗಲಾಡಿಸದೆ ಹಾಗೆಯೇ ಮುಂದುವರೆಸಿಕೊಂಡು ಹೋದರೆ ಯಾರು ಅಸಮಾನತೆ, ಅನ್ಯಾಯಕ್ಕೆ ಒಳಗಾಗಿದ್ದಾರೆ ಆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂಬ ಎಚ್ಚರಿಕೆ ನೀಡಿದ್ದರು.

ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನ ಹೇಳಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುದು ಆರಂಭದಲ್ಲಿ ಸಂವಿಧಾನದಲ್ಲಿ ಇಲ್ಲದಿದ್ದರು 1951ರಲ್ಲಿ ಮೊದಲನೇ ತಿದ್ದುಪಡಿ ತಂದು ಸೇರಿಸಲಾಗಿದೆ. ರಾಜ್ಯದಲ್ಲಿ ನಾಗನಗೌಡ ಆಯೋಗ, ಎಲ್.ಜಿ ಹಾವನೂರು, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಅವರ ಸಮಿತಿ ಹೀಗೆ 4 ಸಮಿತಿಗಳು ರಚನೆಯಾಗಿ ವರದಿ ನೀಡಿವೆ, ಕೇಂದ್ರದಲ್ಲಿ ಮಂಡಲ್‌ ಕಮಿಷನ್‌ ರಚನೆಯಾಗಿ ವರದಿ ನೀಡಿದೆ. ಇದರ ಆಧಾರದ ಮೇಲೆ ಮೀಸಲಾತಿ ನಿಗದಿಯಾಗಿದೆ.

ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈ ವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಂಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಇದರಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಮುಸ್ಲಿಂಮರಿಗೆ 4% ಮೀಸಲಾತಿ ಹಿಂದಿನಿಂದ ಇದೆ, ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ ಎಂಬುದು ನಿಜ.

ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು, ವೀರಶೈವ ಲಿಂಗಾಯತರು 15% ಮೀಸಲಾತಿ ಮತ್ತು ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮೀಸಲಾತಿ 50% ಮೀರಬಾರದು ಎಂದು ಹೇಳಿತ್ತು, ರಾಜ್ಯದಲ್ಲಿ ಈಗ ಮೀಸಲಾತಿ 50% ಇದೆ, ನ್ಯಾಯಾಲಯದ ಈ ತೀರ್ಪನ್ನು ಬದಲಾವಣೆ ಮಾಡಬೇಕಾಗಿರುವುದು ಸಂಸತ್ತು. ಬದಲಾವಣೆ ಮಾಡಿರುವುದು ಊರ್ಜಿತವಾಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸಬೇಕು. ಇವರು ಇದ್ಯಾವುದನ್ನಾದರೂ ಮಾಡಿದ್ದಾರ?

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ-ವಿಪಕ್ಷ ನಾಯಕ ಸಿದ್ದರಾಮಯ್ಯ

ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಪ್ರಕಾರ ಪ್ರತೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಬೇಕು ಮತ್ತು 10 ವರ್ಷಕ್ಕೊಮ್ಮೆ ಅದರ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ. ಯಾವುದನ್ನೇ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಬೇಕಾದರೆ ಅಥವಾ ಸೇರಿಸಬೇಕಾದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸು ಬೇಕು. ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ತೆಗೆದುಹಾಕಿ ಎಂದು ರಿಪೋರ್ಟ್‌ ಎಲ್ಲಿದೆ? ಇದು ಅಲ್ಪಸಂಖ್ಯಾತರಿಗೆ ಮಾಡುತ್ತಿರುವ ಅನ್ಯಾಯ ಅಲ್ಲವಾ? 1995ರಿಂದ ಈ ವರೆಗೆ ನೀಡುತ್ತಿದ್ದ ಮೀಸಲಾತಿಯನ್ನು ಈಗ ತೆಗೆದುಹಾಕಲು ಕಾರಣವೇನು? ಅವರನ್ನು ಇ.ಡಬ್ಲ್ಯು.ಎಸ್‌ ಗೆ ಸೇರಿಸಿ ಎಂದು ಯಾರಾದರೂ ಕೇಳಿದ್ದರಾ ಅಥವಾ ಯಾವುದಾದರೂ ವರದಿ ಇದೆಯಾ?

ಎಸ್‌,ಸಿ ಮತ್ತು ಎಸ್‌,ಟಿ ಗೆ ಮೀಸಲಾತಿ ಏರಿಕೆ ಮಾಡಲಾಗಿದೆ. ಇದು ನಮ್ಮ ಬೇಡಿಕೆಯೂ ಆಗಿತ್ತು. 2019ರಲ್ಲಿ ರಚನೆಯಾಗಿದ್ದ ನ್ಯಾ. ನಾಗಮೋಹನ್‌ ದಾಸ್‌ ಅವರ ಸಮಿತಿ 2020ರಲ್ಲಿ ವರದಿ ನೀಡಿತ್ತು, ವರದಿ ಬಂದು 3 ವರ್ಷ ಕಳೆದರೂ ಸರ್ಕಾರ ನಿದ್ದೆ ಮಾಡುತ್ತಿತ್ತು. ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಮಾಡಿದರು, ಸದನದಲ್ಲಿ ನಮ್ಮ ಎಸ್‌,ಸಿ ಹಾಗೂ ಎಸ್‌,ಟಿ ಮತ್ತು ಹಿಂದುಳಿದ ಜಾತಿಗಳ ಶಾಸಕರು ಪ್ರತಿಭಟನೆ ಮಾಡಿದರು, ಪ್ರತೀ ಬಾರಿ ಸರ್ಕಾರ ನೆಪಗಳನ್ನು ಹೇಳಿ ಮುಂದಕ್ಕೆ ಹಾಕಿತ್ತು, ಆಗ ಯಾವುದೇ ತೀರ್ಮಾನ ಕೈಗೊಳ್ಳದೆ ಕೊನೆಗೆ ವಿಧಿಯಿಲ್ಲದೆ ಸರ್ವಪಕ್ಷ ಸಭೆಯನ್ನು ಕರೆದರು. ಈ ಸಭೆಯಲ್ಲಿ ನಾವು ಸರ್ಕಾರಕ್ಕೆ “ಮೀಸಲಾತಿ ಪ್ರಮಾಣ 56% ಆಗುತ್ತಿದೆ, ಇದು ಸಂವಿಧಾನ ಮತ್ತು ಇಂದಿರಾ ಸಹಾನಿ ಪ್ರಕರಣದ ತೀರ್ಪಿಗೆ ವಿರುದ್ಧವಾಗುತ್ತದೆ ಹೀಗಾಗಿ ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡಬೇಕು ಮತ್ತು ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸಬೇಕು” ಎಂದು ನಾವು ಸ್ಪಷ್ಟವಾಗಿ ಹೇಳಿದ್ದೆವು.

ಇದಾದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು, ಆ ನಂತರ ರಾಜ್ಯಪಾಲರು ಅದಕ್ಕೆ ಸಹಿ ಮಾಡಿದರು. 2022ರಲ್ಲಿ ಸರ್ಕಾರ ಕಾಯ್ದೆ ತಂದಿತು, ಆ ನಂತರ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒಂದು ಪತ್ರ ಬರೆದಿದೆಯಾ? ಎರಡು ಲೋಕಸಭಾ ಅಧಿವೇಶನಗಳು ನಡೆದವು, ಅಲ್ಲಿ ಚರ್ಚೆಗೆ ಬಂತಾ? ಕೇಂದ್ರ ಸರ್ಕಾರಕ್ಕೆ ಇದನ್ನು 9ನೇ ಶೆಡ್ಯೂಲ್‌ ಗೆ ಸೇರಿಸುವಂತೆ ಒತ್ತಾಯ ಮಾಡಿದೆಯಾ? ನಾವು ಪ್ರತಿಭಟನೆ ಮಾಡುತ್ತೇವೆ ಎಂಬುದು ಗೊತ್ತಾದ ಮೇಲೆ ಮೊನ್ನೆ 23ನೇ ತಾರೀಖಿನ ಸಂಜೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಚುನಾವಣೆ ಇನ್ನೇನು ಎರಡ್ಮೂರು ದಿನದೊಳಗೆ ಘೋಷಣೆ ಆಗುತ್ತದೆ ಎಂಬುದು ಗೊತ್ತಿದ್ದರೂ 24ರ ಸಂಜೆ ಈ ಮೀಸಲಾತಿ ಪರಿಷ್ಕರಣೆ ನೀತಿ ತಂದಿರುವುದರ ಹಿಂದಿನ ಉದ್ದೇಶ ಏನು? ಇದು ರಾಜಕೀಯ ಗಿಮಿಕ್‌ ಅಲ್ಲವೇ? ಯಾರಿಗೂ ನ್ಯಾಯ ಕೊಡಬೇಕು ಎಂಬುದು ಸರ್ಕಾರಕ್ಕೆ ಇಲ್ಲ.

ಬಿಜೆಪಿಯವರು ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಮಂಡಲ್‌ ಕಮಿಷನ್‌ ವರದಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದು ಬಿಜೆಪಿಯವರೇ. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದಾಗ ಅದನ್ನು ವಿರೋಧಿಸಿ ರಾಮಾ ಜೋಯಿಸ್‌ ಅವರು ಸುಪ್ರೀಂ ಕೋರ್ಟ್‌ ಗೆ ಹೋಗಿದ್ದರು. ಈ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದಾಗ ಅದನ್ನು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿ ಸ್ವತಃ ರಾಮಾ ಜೋಯಿಸ್‌ ಅವರೇ ವಾದ ಮಾಡಿದ್ದರು, ಅದೃಷ್ಟವಶಾತ್‌ ಸುಪ್ರೀಂ ಕೋರ್ಟ್‌ ನಲ್ಲಿ ಅವರ ಮನವಿ ತಿರಸ್ಕಾರಗೊಂಡಿತು. ಆಗ ಯಡಿಯೂರಪ್ಪ, ಈಶ್ವರಪ್ಪ ಎಲ್ಲಿದ್ದರು? ಈ ರಾಮಾಜೋಯಿಸ್‌ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರಲಿಲ್ವಾ? ಎಂದು ಪ್ರಶ್ನಿಸಿದರು.

ನಾನು ಅನರ್ಹಗೊಂಡ ಸಂಸದ : ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

ಇಂದು ರಾಜ್ಯದ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಇದು ನಾಡಿನ ಜನರಿಗೆ ಮಾಡಿರುವ ದ್ರೋಹ ಮಾತ್ರವಲ್ಲ ಸಂವಿಧಾನಕ್ಕೆ ತೋರಿರುವ ಅಗೌರವವೂ ಹೌದು. ಜನರನ್ನು ದಡ್ಡರು ಎಂದು ತಿಳಿದುಕೊಂಡಿದ್ದಾರೆ. ಚಿಂತನಾ ಗಂಗಾ, ಆರ್ಗನೈಸರ್‌ ಪತ್ರಿಕೆಗಳು ಸಂವಿಧಾನ ಜಾರಿಗೆ ಬಂದಾಗ ಏನನ್ನು ಪ್ರಕಟಿಸಿದ್ದವು ಎಂಬುದನ್ನು ನೋಡಿ, ಸಂವಿಧಾನದ ಬಗ್ಗೆ ಗೋಲ್ವಾಲ್ಕರ್‌, ಸಾವರ್ಕರ್‌ ಅವರ ಅಭಿಪ್ರಾಯವನ್ನು ಓದಿ, ಬಿಜೆಪಿಯವರು ಯಾವತ್ತೂ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದವರಲ್ಲ.

ಇಡೀ ಸಾಮಾಜಿಕ ನ್ಯಾಯವನ್ನು ಛಿದ್ರಗೊಳಿಸಿ ಜನರಿಗೆ ನ್ಯಾಯ ಸಿಗಬಾರದು ಎಂದು ಈ ರೀತಿ ಮಾಡಿದ್ದಾರೆ. ಮೀಸಲಾತಿ ಪರಿಷ್ಕರಣೆ ಮಾಡಲು ಈ ಸರ್ಕಾರದ ಬಳಿ ಯಾವ ನಂಬಿಕಾರ್ಹ ಮಾಹಿತಿ ಇದೆ? ವರದಿ ಇದೆ? ಮಹಾರಾಷ್ಟ್ರ, ಹರಿಯಾಣ ಹೀಗೆ ಹಲವು ರಾಜ್ಯಗಳಲ್ಲಿ ನಂಬಲಾರ್ಹ ಮಾಹಿತಿ ಮತ್ತು ಸಂವಿಧಾನಬದ್ಧವಾಗಿ ರಚನೆಯಾದ ಸಮಿತಿ ನೀಡಿರುವ ವರದಿ ಇಲ್ಲದೆ ಮೀಸಲಾತಿ ಬದಲಾವಣೆಗೆ ಕೈಹಾಕಬಾರದು ಎಂದು ನ್ಯಾಯಾಲಯ ಹೇಳಿದೆ. ಹೀಗಿದ್ದರೂ ನಮ್ಮಲ್ಲಿ ರಾಜ್ಯ ಸರ್ಕಾರ ರಾಜಕೀಯ ಗಿಮಿಕ್‌ ಮಾಡಲು ಹೊರಟಿದೆ, ಇದನ್ನು ಜನ ಒಪ್ಪಬೇಕ?

ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರ ಇದೆ, ನಾವು ಯಾವುದೇ ಜಾತಿ, ಧರ್ಮ, ಲಿಂಗದ ಜನರಿಗೆ ತಾರತಮ್ಯ ಮಾಡದೆ ರಕ್ಷಣೆ ಸಿಗಬೇಕು ಎಂದು ಪ್ರತಿಪಾದಿಸುವವರು. ಎಲ್ಲಾ ಕಾಲದಲ್ಲೂ ಮೀಸಲಾತಿ ನೀಡಿದವರು ಕಾಂಗ್ರೆಸ್‌ ನವರೇ, ಎಲ್ಲಾ ಕಾಲದಲ್ಲೂ ಅವಕಾಶವಂಚಿತರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಿದವರು ಕಾಂಗ್ರೆಸ್‌ ನವರೇ. ಬಿಜೆಪಿ ಮಾಡಿರುವ ಏಕೈಕ ತಿದ್ದುಪಡಿ ಎಂದರೆ ಆರ್ಥಿಕವಾಗಿ ದುರ್ಬಲರಾದ ಸಾಮಾನ್ಯ ವರ್ಗದ ಜನರಿಗೆ ಮೀಸಲಾತಿ ನೀಡಲು ತಿದ್ದುಪಡಿ ತಂದಿದ್ದು. ಬಿಜೆಪಿ ಒಮ್ಮೆಯಾದರೂ ಸಾಮಾಜಿಕ ನ್ಯಾಯದ ಪರ ಮಾತನಾಡಿರುವ ಒಂದೇ ಒಂದು ವಾಕ್ಯ ಇದ್ದರೆ ತೋರಿಸಲಿ ನೋಡೋಣ. ಕಾಂಗ್ರೆಸ್‌ ಪಕ್ಷ ಮಾತ್ರ ಹಿಂದಿನಿಂದಲೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಗೌರವಿಸಿಕೊಂಡು ಬಂದು, ಅದರ ಆಶಯದಂತೆ ನಡೆಯುತ್ತಿದೆ.

ಸಮಿತಿಯ ಶಿಫಾರಸಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸುತ್ತೇನೆ. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಈ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಮುಂದುವರೆಯುವ ಹಕ್ಕು ಇಲ್ಲ.

RECOMMENDED

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • ಅಭಿವೃದ್ಧಿಯ ಹರಿಕಾರ ಸರ್ ಮಿರ್ಜಾ ಇಸ್ಮಾಯಿಲ್ ಜೀವನ ಕಥನ

    0 shares
    Share 0 Tweet 0

Related Posts

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ
Just-In

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?
Politics

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ
Karnataka

ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ

April 16, 2023
ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?
Crime

ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?

April 16, 2023
Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ
Crime

Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ

April 15, 2023
Ex CM Jagadish Shettar: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆಗೆ ಬೂಸ್ಟರ್..!
Just-In

Jagadish Shettar Resign: ಬಿಜೆಪಿಯ ಮತ್ತೊಂದು ವಿಕೆಟ್‌ ಪನತ; ಕಮಲಕ್ಕೆ ಗುಡ್‌ ಬೈ ಹೇಳಿದ ಜಗದೀಶ್‌ ಶೆಟ್ಟರ್

April 15, 2023
Top Stories : ದೇಶದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠ |ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಗಮನ
Just-In

Karnataka Assembly Elections 2023: ಕಾಂಗ್ರೆಸ್‌ ಮೂರನೇ ಪಟ್ಟಿ ರಿಲೀಸ್‌: ಕೋಲಾರಿದಿಂದ ಕೊತ್ತೂರು ಮಂಜುನಾಥ್‌, ಅಥಣಿಯಿಂದ ಸವದಿಗೆ ಟಿಕೆಟ್‌

April 15, 2023
Rajiv Gandhi Assassination Case : ರಾಜೀವ್ ಗಾಂಧಿ ಹತ್ಯೆ ಪ್ರಕರಣ : ಸುಪ್ರೀಂಕೋರ್ಟ್‌ನಿಂದ ಕೇಂದ್ರ-ತಮಿಳುನಾಡು ಸರ್ಕಾರಕ್ಕೆ  ನೋಟಿಸ್​
Just-In

Karnataka Muslim Reservation: ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಕೋರ್ಟ್ ಹೇಳಿದ್ದೇನು? ಇಲ್ಲಿದೆ ನೋಡಿ ವಾದ-ಪ್ರತಿವಾದದ ಡಿಟೇಲ್ಸ್‌

April 13, 2023
Next Post
Mekedatu Padayathra: ನಾಳೆಯಿಂದ ಮೇಕೆದಾಟು  ​ಪಾದಯಾತ್ರೆ ಆರಂಭ! ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಸಮ್ಮತಿ

ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆ-DK Shivkumar

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

DK Shivkumar-CT Ravi: ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿ.ಕೆ. ಶಿವಕುಮಾರ್

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist