ಬೆಂಗಳೂರು: ರಂಜಾನ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಪವಿತ್ರ ತಿಂಗಳು. ರಾಜ್ಯ ಹಾಗೂ ದೇಶಾದ್ಯಂತ ನಾಳೆಯಿಂದ ಮುಸ್ಲಿಮರ ಪವಿತ್ರ ರಂಜಾನ್ (Ramadan) ಉಪವಾಸ ಆರಂಭವಾಗಲಿದೆ. ಇಂದು ರಂಜಾನ್ ಮಾಸದ ಚಂದ್ರದರ್ಶನವಾದ ಹಿನ್ನೆಲೆ ನಾಳೆಯಿಂದ ಮುಸ್ಲಿಂ ಸಮುದಾಯವರು ಉಪವಾಸ ವ್ರತ ಆಚರಣೆ ಮಾಡಲಿದ್ದಾರೆ. ಇಂದು ರಾಜ್ಯದ ಕರಾವಳಿ ಸೇರಿದಂತೆ ಸೌದಿಯಲ್ಲಿ ಮೊದಲ ಉಪವಾಸ ಪ್ರಾರಂಭವಾಗಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಾದ ರಂಜಾನ್ ಅನ್ನು ಪ್ರಪಂಚದಾದ್ಯಂತದ ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ, ಉಪವಾಸವನ್ನು ಆಚರಿಸುತ್ತಾರೆ. ಚಂದ್ರನ ಚಲನೆಯ ಆಧಾರದ ಮೇಲೆ ಇಸ್ಲಾಮಿಕ್ ಕ್ಯಾಲೆಂಡರನ್ನು ಪರಿಗಣಿಸಲಾಗುತ್ತೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ ಸುಮಾರು 10 ದಿನಗಳ ಮುಂಚಿತವಾಗಿ ಪವಿತ್ರ ರಂಜಾನ್ ತಿಂಗಳು ಬರುತ್ತದೆ. ಪ್ರತಿ ವರ್ಷ ರಂಜಾನ್ ಹಬ್ಬದ ದಿನಾಂಕ, ತಿಂಗಳು ಬದಲಾಗುತ್ತಿರುತ್ತದೆ. ಈ ವರ್ಷ, ರಂಜಾನ್ ಮಾರ್ಚ್ 24 ರ ಶುಕ್ರವಾರ ಆರಂಭವಾಗಿದೆ.

ಈ ತಿಂಗಳಿನಲ್ಲಿ ಮಾರಣಾಂತಿಕ ಅಥವಾ ದೀರ್ಘಕಾಲದ ಅನಾರೋಗ್ಯ, ಪ್ರಯಾಣ, ವಯಸ್ಸಾದವರು, ಸ್ತನ್ಯಪಾನ, ಮಧುಮೇಹ ಅಥವಾ ಋತುಚಕ್ರದ ಎಲ್ಲಾ ವಯಸ್ಕ ಮಹಿಳೆಯರು ಹೊರತುಪಡಿಸಿದಂತೆ ಎಲ್ಲಾರಿಗೂಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಕಡ್ಡಾಯವಾಗಿದೆ.
ಉಪವಾದ ವೇಳೆ ಬಳಸಲಾಗುವ ಎರಡು ಪದಗಳು ಅಂದರೆ, ಸುಹೂರ್, ಇದು ಬೆಳಗಿನ ಮುಂಚೆ ಸೇವಿಸುವ ಊಟವನ್ನು ಸೂಚಿಸುತ್ತದೆ ಮತ್ತು ಇಫ್ತಾರ್, ಇದು ಸೂರ್ಯಾಸ್ತದ ಸಮಯದಲ್ಲಿ ಉಪವಾಸವನ್ನು ಮುರಿಯಲು ಸೇವಿಸುವ ಊಟವನ್ನು ಸೂಚಿಸುತ್ತದೆ.

ಮುಸ್ಲಿಮರಿಗೆ ಈ ತಿಂಗಳು ತುಂಬಾ ಪವಿತ್ರ. ರಂಜಾನ್ ಮುಸ್ಲಿಮರಿಗೆ ನಂಬಲಾಗದ ಶಕ್ತಿಯ ತಿಂಗಳು. ರಂಜಾನ್‌ನಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ, ಕುರಾನ್ ಪಠಣೆ, ಪ್ರಾರ್ಥನೆ ಮಾಡುವುದು, ಬಹಳಷ್ಟು ದಾನ ಮಾಡುವುದು ಈ ತಿಂಗಳಲ್ಲಿ ಕರ್ತವ್ಯವಾಗಿದೆ.