ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಬೇಟಿಯಾದ ಟಾಲಿವುಡ್ ನ ನಟರಾದ ನಟ ಚಿರಂಜೀವಿ ಹಾಗೂ ಅವರ ಮಗ ನಟ ರಾಮ್ ಚರಣ್.
ನಟ ರಾಮ್ ಚರಣ್ ಹಾಗೂ ಅವರ ತಂದೆ ನಟ ಚಿರಂಜೀವಿ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಮಂತ್ರಿಯನ್ನು ಬೇಟಿಯಾಗಿದ್ದಾರೆ. ಅಮಿತ್ ಶಾ ಅವರಿಗೆ ಬೇಟಿಯಾಗಿ ನಟ ಚಿರಂಜೀವಿ ಹಾಗೂ ನಟ ರಾಮ್ ಚರಣ್ ರೇಶ್ಮೆ ಶಾಲು ಹೊದಿಸಿ, ಹೂವು ಗುಚ್ಚ ಕೊಟ್ಟು ಸನ್ಮಾನಿಸಿದ್ದಾರೆ. ಇದೇ ವೇಳೆ ಸಚಿವ ಅಮಿತ್ ಶಾ ಅವರು ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡಿಗೆ ಆಸ್ಕರ್ ದೊರಕಿದ್ದಕ್ಕೆ ಅಭಿನಂದಿಸಿ ಅವರ ಜೊತೆ ಮಾತನಾಡಿದ್ದಾರೆ.
ಟಾಲಿವುಡ್ ನ ನಟರಾದ ನಟ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಇಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ನಾಟು-ನಾಟು ಹಾಡಿಗೆ ಆಸ್ಕರ್ ಬಂದಾಗ ಅಮಿತ್ ಶಾ ಹಾಗೂ ಮೋದಿ ಅವರುಗಳು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ಆದುದ್ದರಿಂದ ರಾಮ್ ಚರಣ್ ಹಾಗೂ ಚಿರಂಜೀವಿ ಅವರು ಮೋದಿ ಹಾಗೂ ಶಾ ಅವರನ್ನು ಭೇಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್ಟಿಆರ್ ಅವರು ರಾಜಕೀಯ ಕಾರಣಗಳಿಗಾಗಿ ಈ ಭೇಟಿಯಿಂದ ದೂರ ಉಳಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡಿಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದು ಅಮಿತ್ ಶಾ, ‘ನಾಟು ನಾಟು’ ಹಾಡು ಇತಿಹಾಸವನ್ನು ಸೃಷ್ಟಿಸಿದೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಗ್ಗುರುತಿನ ದಿನ. ಈ ಹಾಡು ಭಾರತೀಯರು ಮಾತ್ರವೇ ಅಲ್ಲದೆ ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳ ಬಾಯಲ್ಲಿದೆ” ಎಂದಿದ್ದರು. ತಂದೆ ಮಗನ ಬೇಟಿಯ ಕುರಿತಾಗಿ ತೆಲುಗಿನಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ, ”ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ರಾಮ್ ಚರಣ್ ಹಾಗೂ ಚಿರಂಜೀವಿ ಅವರನ್ನು ಭೇಟಿಯಾಗಿದ್ದು ಬಹಳ ಸಂತಸ ತಂದಿದೆ. ತೆಲುಗು ಚಿತ್ರರಂಗವು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಆರ್ಥಿಕ ವ್ಯವಸ್ಥೆಗೆ ಯೋಗದಾನ ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ. ನಾಟು-ನಾಟು ಹಾಡಿಗೆ ಆಸ್ಕರ್ ಬಂದಿದ್ದರ ಕುರಿತು ಹಾಗೂ ಆರ್ಆರ್ಆರ್ ಸಿನಿಮಾದ ಅದ್ಭುತ ವಿಜಯ ಸಾಧಿಸಿದ್ದಕ್ಕೆ ರಾಮ್ ಚರಣ್ ಅವರನ್ನು ಅಭಿನಂದಿಸಿದ್ದೇನೆ” ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಟ್ವೀಟ್ ಮಾಡಿ ತಮ್ಮ ಕುಶಿಯನ್ನು ಹಂಚಿಕೊಂಡಿದ್ದಾರೆ.