ಪದುಚೇರಿ: ಸಾಮಾನ್ಯವಾಗಿ ಕೆಲವರು ಬರ್ತಡೇಯನ್ನು ಅನಾಥಾಶ್ರಮಗಳಲ್ಲಿ, ಸ್ಟಾರ್ ಹೋಟಲ್ಲಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ ಪದುಚೇರಿ ಮುದಲಿಯಾರ್‌ಪೇಟ್ ಕ್ಷೇತ್ರದ ಡಿಎಂಕೆ ಶಾಸಕ ಸಂಪತ್ ಅವರು ತಮ್ಮ ಹುಟ್ಟುಹಬ್ಬದಂದು ಸ್ಟಾರ್ ಹೋಟೆಲ್‌ನ ಸ್ವಚ್ಛತಾ ಕಾರ್ಯಕರ್ತರೊಂದಿಗೆ ಆಚರಿಸಿಕೊಂಡಿದ್ದಾರೆ ಹಾಗೂ ಅವರಿಗೆ ಭರ್ಜರಿ ಪಾರ್ಟಿ ನೀಡಿದ್ದಾರೆ.
ಸಂಪತ್ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವರಾಗಿದ್ದರು. ಅವರು ಪುದುಚೇರಿಯ ಮುದಲಿಯಾರ್ ಪೇಟ್ ಕ್ಷೇತ್ರದ ಡಿಎಂಕೆ ಶಾಸಕರಾಗಿದ್ದಾರೆ, ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಸಂಪತ್, ಅವರ ಕ್ಷೇತ್ರದಲ್ಲಿ ಹೆಚ್ಚು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವರಾಗಿದ್ದರಿಂದ ಅವರು ತಮ್ಮ ಕ್ಷೇತ್ರದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಸ್ಪೆಷಲ್ ಪಾರ್ಟಿಯನ್ನು ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಿದ್ದರು. ಈ ಪಾರ್ಟಿಯು ಸ್ಟಾರ್ ಹೋಟೆಲ್ ಆದ ಬನ ಶೈಲಿಯಲ್ಲಿ ಆಯೋಜಿಸಲಾಗಿತ್ತು.

ಸ್ಟಾರ್ ಹೋಟೆಲ್ಲ ಪಾರ್ಟಿಯಲ್ಲಿ ಅವರಿಗೆ ಬೇಕಾದ ಯಾವ ಪದಾರ್ಥವನ್ನಾದರು ಸೇವಿಸಬಹುದಾಗಿತ್ತು. ಪಾರ್ಟಿ ಊಟ ಮಾತ್ರವಲ್ಲದೆ ಸ್ವಚ್ಛತಾ ಮಹಿಳಾ ಕಾರ್ಯಕರ್ತೆಯರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಸೀರೆಯನ್ನು ನೀಡಿದ್ದಾರೆ. ಹಾಗೂ ಊಟದ ಮೆನುವಿನಲ್ಲಿ ಬಿರಿಯಾನಿ, ಪನ್ನೀರ್ ಬಟರ್ ಮಸಾಲಾ, ಇತ್ಯಾದಿ ಸೇರಿದಂತೆ ವಿವಿಧ ರೀತಿಯ ಸಸ್ಯಾಹಾರ ಮತ್ತು ಮಾಂಸಹಾರಿ ಎರಡು ನೀಡಲಾಗಿತ್ತು. ಸಂಪತ್ ಅವರು ತಮ್ಮ ಕೈಯಾರೆ ಎಲ್ಲರಿಗೂ ಊಟ ಬಡಿಸಿ ಅವರ ಜತೆಗೆ ಕುಳಿತು ಊಟ ಮಾಡಿದ್ದಾರೆ ಈ ಫೋಟೋಗಳು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಸಂಪತ್ ಅವರ ಈ ಕಾರ್ಯದ ಬಗ್ಗೆ ಪಕ್ಷದ ಕಾರ್ಯಕರ್ತರು ಕುಶಿಯನ್ನು ವ್ಯಕ್ತಪಡಿಸಿದ್ದಾರೆ.