ಬೆಂಗಳೂರು: ಕೆನಡಾದ (Canada) ಮಿಸಿಸೌಗಾದಲ್ಲಿರುವ (Mississauga) ರಾಮಮಂದಿರದಲ್ಲಿ (Ram Mandir) ದುಷ್ಕರ್ಮಿಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರೋಧಿ ಬರಹಗಳನ್ನು ಬರೆದಿರುವ ಘಟನೆ ನಡೆದಿದೆ.

ರಾಮಮಂದಿರದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ ಎಂದು ಟೊರೊಂಟೊದಲ್ಲಿರುವ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಸದ್ಯ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಭಾರತದ ರಾಯಭಾರ ಕಚೇರಿ ಆಗ್ರಹ ಮಾಡಿದೆ.
ಇದನ್ನೂ ಓದಿ: Narendra Modi: ‘ಎಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ..’ : ತಂತ್ರಜ್ಞಾನ ಶೃಂಗದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲೇ ಮಾತು..!
ಈ ಘಟನೆ ಸಂಬಂಧ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ರಾಮಮಂದಿರದಲ್ಲಿ ಭಾರತ ವಿರೋಧಿ ಗೀಚುಬರಹಗಳ ಮೂಲಕ ವಿರೂಪಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. ಈ ಸಂಬಂಧ ತನಿಖೆ ನಡೆಸಬೇಕು. ಕೃತ್ಯ ಎಸಗಿರುವ ದುಷ್ಕರ್ಮಿಗಳ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ ಎಂದು ಉಲ್ಲೇಖಿಸಿದೆ.
ಪ್ರಧಾನಿ ಮೋದಿ ವಿರುದ್ಧ ಘೋಷಣೆ
ರಾಮ ಮಂದಿರದಲ್ಲಿ ದುಷ್ಕರ್ಮಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಯ ಬರಹಗಳನ್ನು ಬರೆದಿದ್ದಾರೆ. ಬ್ರಾಂಪ್ಟನ್‌ನ ಮೇಯರ್ ಪ್ಯಾಟ್ರಿಕ್ ಬ್ರೌನ್ ಇದನ್ನು ಅಪರಾಧ ಎಂದು ಕರೆದಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
We strongly condemn the defacing of Ram Mandir in Missisauga with anti-India graffiti. We have requested Canadian authorities to investigate the incident and take prompt action on perpetrators.
— IndiainToronto (@IndiainToronto) February 14, 2023
ಇದನ್ನೂ ಓದಿ:
ಕೆನಡಾದಲ್ಲಿನ ಹಿಂದೂ ದೇವಾಲಯಗಳಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದಿರುವುದು ಇದು ಮೊದಲ ಘಟನೆಯಲ್ಲ. ಈ ಹಿಂದೆ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಭಾರತ ವಿರೋಧಿ ಘೋಷಣೆಗಳ ಬರಹಗಳನ್ನು ಬರೆಯಲಾಗಿತ್ತು. ಇದಕ್ಕೂ ಸಹ ಆಕ್ರೋಶಕ್ಕೆ ವ್ಯಕ್ತವಾಗಿತ್ತು.