ಬೆಂಗಳೂರು( 27): ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಿನಿಮಾಗಳದ್ದೇ ಕಾರುಬಾರು. ಹೊಸ ಹೊಸ ಕಥೆಗಳುಳ್ಳ ವಿಭಿನ್ನ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಈ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಕೂಡ ಅದ್ಧೂರಿಯಾಗಿ ಬಿಡುಗಡೆ ಕಂಡಿತು. ದರ್ಶನ್ ಅವರ ರಾಬರ್ಟ್ ಸಿನಿಮಾ ಬಳಿಕ ಬಿಡುಗಡೆಯಾದ ಅದ್ಧೂರಿ ಬಿಡುಗಡೆಗೊಂಡ ಸಿನಿಮಾ ಇದಾಗಿದ್ದು, ಕನ್ನಡಿಗರ ಮನಸ್ಸಿಗೆ ನಾಟುವಂತೆ ಈ ಕಥೆಯನ್ನು ಹೆಣೆಯಲಾಗಿದೆ. ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ದಚ್ಚು ಅಭಿಮಾನಿಗಳಿಗೆ ಸಂತಸ ನೀಡುತ್ತಿದೆ.
ಅಭಿಮಾನಿಗಳು ಬೆಳಂಬೆಳಗ್ಗೆ ಸಿನಿಮಾ ನೋಡಿ, ಚಿತ್ರಮಂದಿರದಿಂದ ಹೊರ ಬಂದ ಸಿನಿಪ್ರಿಯರು ಡಿ ಬಾಸ್ ಅವರ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಇನ್ನು ‘ಕ್ರಾಂತಿ’ ಚಿತ್ರವನ್ನು ಮೀಡಿಯಾ ಹೌಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ. ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹರಿಕೃಷ್ಣ ಅವರದ್ದೇ ಸಂಗೀತ ಇದೆ. ರವಿಚಂದ್ರನ್ ಹಾಗೂ ಸುಮಲತಾ ಕೂಡಾ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪುಷ್ಪವತಿ ಹಾಡಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ರೀಲ್ಸ್ ಗಳನ್ನು ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ಕ್ರಾಂತಿ ಸಿನಿಮಾದಲ್ಲಿ ಏನಿದೆ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಅಂದ್ರೆ ಜನರಿಗೆ ಖಂಡಿತ ಇಷ್ಟವಾಗಿಯೇ ಆಗುತ್ತೆ. ಇಡೀ ಕರುನಾಡಿನ ಜನತೆ ದರ್ಶನ್ ಅವರ ಅಭಿನಯವನ್ನು ಹೊಗಳಿ ಕೊಂಡಾಡುತ್ತಾರೆ. ಜೊತೆಗೆ ಇವರದ್ದೇ ಆದ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ತನ್ನ ನಟನೆ, ಸರಳತೆಯಿಂದಲೇ ಜನರ ಮನ ಗೆದ್ದಿರುವ ಈ ಅದ್ಭುತ ನಟ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರೋದು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ವಿಚಾರ. ಇನ್ನು ಈ ಕ್ರಾಂತಿ ಸಿನಿಮಾ ಅಂತೂ ವಿಭಿನ್ನ ಕಥೆಯುಳ್ಳ ಮನಮುಟ್ಟುವ ಕಥೆಯಾಗಿದೆ. ಈ ಸಿನಿಮಾದಲ್ಲಿ ಡಿ ಬಾಸ್ ಅವರು ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಮ್ಮ ನೆಲ, ಭಾಷೆ, ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದ ಕಥೆ ಹೆಣೆಯಲಾಗಿದ್ದು ಒಂದು ಉತ್ತಮ ಸಂದೇಶ ಸಾರುತ್ತಿದೆ ಈ ಸಿನಿಮಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈಗಾಗಲೇ ಕ್ರಾಂತಿ ಸಿನಿಮಾ ನೋಡಲು ಜನ ಥಿಯೇಟರ್ ಗಳಿಗೆ ತೆರಳುತ್ತಿದ್ದು, ಈ ಸಿನಿಮಾ ನೂರು ದಿನ ಪಕ್ಕಾ ಓಡುತ್ತೆ ಅಂತ ಪ್ರೇಕ್ಷಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಬ್ಯೂಟಿಫುಲ್ ಮದುವೆ ಫೋಟೋಗಳು…!