ಬೆಂಗಳೂರು : ಕನ್ನಡ ಚಿತ್ರರಂಗದ ಸ್ಟಾರ್ ನಟ, ಅದಕ್ಕಿಂತ ಹೆಚ್ಚಾಗಿ ಸ್ಯಾಂಡಲ್ ವುಡ್ (Sandalwood) ನಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ದರ್ಶನ್ ತೂಗುದೀಪ (Darshan) ಅವರ ಮೇಲೆ ಕಿಡಿಗೇಡಿಯೊಬ್ಬರು ಶೂ ಎಸೆದಿದ್ದಾರೆ. ಆದ್ರೆ, ಸೆಲೆಬ್ರಿಟಿಗಳ ಯಜಮಾನ ದರ್ಶನ್ ಅವರು ತುಂಬಾ ಸಮಾಧಾನ ಹಾಗೂ ಶಾಂತ ರೀತಿಯಿಂದಲೇ ಈ ಘಟನೆಯನ್ನು ತೆಗೆದುಕೊಂಡಿದ್ದಾರೆ. ದರ್ಶನ್ ಅವರ ಆ ಒಂದು ಮಾತಿಗೆ ಅಭಿಮಾನಿಗಳು ಶರಣಾಗಿದ್ದಾರೆ.
ಹೌದು, ಡಿ ಬಾಸ್ ಮೇಲೆ ಶೂ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ದರ್ಶನ್ ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ. ಇತ್ತ, ದರ್ಶನ್ ತಮ್ಮ ಫ್ಯಾನ್ಸ್ ಗೆ ಸಮಾಧಾನ ಮಾಡಿದ್ದಾರೆ.
ಇಷ್ಟೆಲ್ಲ ಘಟನೆಯಗಳ ನಡುವೆ ದರ್ಶನ್ ಅವರ ಅಭಿಮಾನಿಗಳು ಕೆಂಡಾಮಂಡಲರಾದರು. ಆದರೆ, ದರ್ಶನ್ ಇದನ್ನು ನಗುತ್ತಲೇ ಸ್ವೀಕರಿಸಿದ್ದಾರೆ. “ಪರವಾಗಿಲ್ಲ ಚಿನ್ನ.. ಈ ತರ ಎಷ್ಟೋ ನೋಡಿದ್ದೀನಿ… ಬಿಡ್ರೋ..” ಅಂತ ಸುಮ್ಮನಾದರು. ಆದರೆ ಈ ಘಟನೆ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ದರ್ಶನ್ ಮೇಲೆ ಶೂ ಎಸೆದಿದ್ದು ಇದೇ ಕಾರಣಕ್ಕೆ!
‘ನಟ ಪುನೀತ್ ಅವರು ಸತ್ತ ಮೇಲೆ ಫ್ಯಾನ್ಸ್ ಅಪಾರ ಪ್ರೀತಿ ತೋರಿಸಿದ್ದಾರೆ. ಆದರೆ, ನಾನು ಜೀವಂತವಿರುವಾಗಲೇ ನನ್ನ ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ’ ಎಂದು ನಟ ದರ್ಶನ್ ಹೇಳಿಕೆ ನೀಡಿದ್ದರು.
ಈ ಮಾತಿನಿಂದ ಕೆರಳಿದ್ದ ಜನ ಅವರ ಮೇಲೆ ಶೂ ಎಸೆದಿದ್ದಾರೆ. ಈ ಹಿಂದೆ ಹೊಸಪೇಟೆಯಲ್ಲಿ ಚಿತ್ರ ಪ್ರಮೋಷನ್ ವೇಳೆ ಅಭಿಮಾನಿಯೊಬ್ಬರ ಕಾಲಿನ ಮೇಲೆ ಪ್ರಮೋಷನ್ ಲಾರಿ ಹರಿದಿತ್ತು. ಬಳಿಕ ಅದೇ ಲಾರಿಯನ್ನು ಆಯೋಜಕರು ವೇದಿಕೆಯಾಗಿ ಪರಿವರ್ತಿಸಿದ್ದರು. ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅಭಿಮಾನಿಯನ್ನು ನೋಡಲು ಹೋಗದ ದರ್ಶನ್ ವಿರುದ್ಧ ಇದೀಗ ಅಭಿಮಾನಿಗಳೇ ತಿರುಗಿಬಿದ್ದಿದ್ದಾರೆ.
ದರ್ಶನ್ ಮನಸ್ಸು ಮಗುವಿನಂತೆ ಎಂದ ಜಗ್ಗೇಶ್
ನಟ ದರ್ಶನ್ ಮೇಲೆ ಶೂ ಎಸೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.ದರ್ಶನ್ ಅವರ ಮೇಲೆ ನಿನ್ನೆ ನಡೆದ ಘಟನೆ ತಪ್ಪು ಮತ್ತು ಖಂಡನೀಯ ಎಂದು ಹೇಳಿದ್ದಾರೆ.
ದಯವಿಟ್ಟು ಕಲಾವಿದರನ್ನು ಹೀಗೆ ಅಪಮಾನ ಮಾಡದಿರಿ ಎಂದಿದ್ದಾರೆ. ‘ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು. ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ. ಇದು ನನ್ನ ವಿನಂತಿ. ದರ್ಶನ್ ಅವರದ್ದು ಸ್ವಲ್ಪ ನೇರ ನುಡಿ, ಆದರೆ, ದರ್ಶನ್ ಮನಸ್ಸು ಮಗುವಿನಂತೆ’ ಎಂದು ಟ್ವಿಟ್ ಮಾಡಿದ್ದಾರೆ.
ದರ್ಶನ್ ಘಟನೆ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಹೊಸಪೇಟೆಯಲ್ಲಿ ನಿನ್ನೆ ನಟ ದರ್ಶನ್ ಮೇಲೆ ಶೂ ಎಸೆದಿರುವ ಘಟನೆ ಸಂಬಂಧ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಹೌದು, ದರ್ಶನ್ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ನೀಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ, ದ್ವೇಷ ಅಗೌರವವನ್ನಲ್ಲ ಎಂದು ಹೇಳಿದ್ದಾರೆ.