ಬೆಂಗಳೂರು(ಡಿ.14): ಡಕಾಯಿತಿ, ರಾಬರಿ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಯನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಜೆ.ಸಿ.ನಗರ ಪೊಲೀಸ್ ಠಾಣೆ ರೌಡಿಶೀಟರ್ ಸುಹೈಲ್ ಬಂಧಿತ ರೌಡಿಶೀಟರ್ ಆಗಿದ್ದಾನೆ. ಶಿವಾಜಿನಗರ ನಿವಾಸಿಯಾಗಿರುವ ಸುಹೈಲ್ ವಿರುದ್ಧ ಡಕಾಯಿತಿ, ರಾಬರಿ, ಸುಲಿಗೆ ಹಾಗೂ ಹಲ್ಲೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿದ್ದವು. ಅಷ್ಟೇನೂ ಅಲ್ಲದೇ ಹಲವು ಬಾರಿ ಜೈಲಿಗೆ ಕೂಡ ಇತ ಹೋಗಿಬಂದಿದ್ದ.
ಸುಹೈಲ್ ಸದ್ಯ ಡ್ರಗ್ಸ್ ಕೇಸ್ ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಡ್ರಗ್ಸ್ ಸೇವಿಸಿ ಏರಿಯಾದ ವ್ಯಾಪಾರಿಗಳಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಬಲವಂತ ಹಣ ಪಡೆಯುತ್ತಿದ್ದ. ಹಣ ಕೊಡದಿದ್ದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದ. ತನ್ನ ಸಹಚರರನ್ನು ಕಟ್ಟಿಕೊಂಡು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆಟವಾಡಿಸುತ್ತಿದ್ದ. ಹಲವು ಬಾರಿ ಈತನ ವಿರುದ್ಧ ವಾರೆಂಟ್ ಹೊರಡಿಸಿದ್ದರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದು ಸದ್ಯ ಈತನನ್ನ ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.