ಬೆಂಗಳೂರು(ಡಿ.): ಮದ್ಯದ ಅಮಲಿನಲ್ಲಿ ಸ್ನೇಹಿತನನ್ನ ಕೊಲೆಗೈದಿದ್ದ ಆರೋಪಿಯನ್ನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಭಿಜಿತ್ ಬಂಧಿತ ಆರೋಪಿಯಾಗಿದ್ದಾನೆ. ಇದೇ ತಿಂಗಳ 6 ರಂದು ರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಬಸವರಾಜ್ ಎಂಬಾತನನ್ನ ಕತ್ತು ಸೀಳಿ ಕೊಲೆಗೈಯಲಾಗಿತ್ತು. ಕೊಲೆ ಮಾಡಿದ ಬಳಿ ಆರೋಪಿ ಅಭಿಜಿತ್ ತಲೆ ಮರೆಸಿಕೊಂಡಿದ್ದ.
ಆರೋಪಿ ಹಿನ್ನೆಲೆ
ಅಭಿಜಿತ್ ಮೂಲತಃ ಕನಕಪುರದವನಾಗಿರುವ 2 ವರ್ಷಗಳಿಂದ ಪ್ಲಂಬಿಂಗ್, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಗದಗ ಮೂಲದವನಾಗಿದ್ದ ಬಸವರಾಜ್ ಅಭಿಜಿತ್ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ. ಅಭಿಜಿತ್ ಹಾಗೂ ಆತನ ಪತ್ನಿಗೆ ಅವಾಚ್ಯ ಪದ ಬಳಸಿ ಬಸವರಾಜ ನಿಂದಿಸುತ್ತಿದ್ದ. ಘಟನಾ ದಿನವೂ ಕುಡಿದ ಮತ್ತಿನಲ್ಲಿ ಬಸವರಾಜ ಅಭಿಜಿತ್ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ಅಭಿಜಿತ್ ಮದ್ಯದ ಅಮಲಿನಲ್ಲಿ ಬಸವರಾಜ್ ನನ್ನ ಕೊಲೆಮಾಡಿ ಎಸ್ಕೇಪ್ ಆಗಿದ್ದ. ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಘಟನೆ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.