ಬೆಂಗಳೂರು(ಡಿ.9): ಹಳೇ ದ್ವೇಷದ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಹಾಗೂ ಬಿಲ್ಡರ್ ಮತ್ತು ಆತನ ಕಾರು ಚಾಲಕನ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿ ಕುರುಸೊಣ್ಣೇನಹಳ್ಳಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ, ಬಿಲ್ಡರ್ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಗೆ ಗುಂಡೇಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಆರ್.ಪುರ ಸಮೀಪದ ಕುರು ಸೋನ್ನೇನಹಳ್ಳಿ ಸಮೀಪ ತಾನು ಕಟ್ಟಿಸುತ್ತಿರುವ ಅಪಾರ್ಟ್‌ಮೆಂಟ್ ಕಟ್ಟಡ ಪರಿಶೀಲನೆಗೆ ಮಧ್ಯಾಹ್ನಬಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಬಂದಿದ್ದಾಗಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮದನಪಲ್ಲಿಯ ಶಿವಶಂಕರ್ ರೆಡ್ಡಿ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಕಳೆದ ಹತ್ತು ವರ್ಷಗಳಿಂದ ಪಾತಕ ಲೋಕದಲ್ಲಿ ಆತ ಆಕ್ಟೀವ್ ಆಗಿದ್ದ. ಮದನಪಲ್ಲಿಯಲ್ಲಿ ರೆಡ್ಡಿ ಮೇಲೆ ಕೊಲೆ, ಕೊಲೆ ಯತ್ನ ಹಾಗೂ ಸುಲಿಗೆ ಪ್ರಕರಣಗಳಿವೆ. ಹೀಗಾಗಿ ರೆಡ್ಡಿ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ.
ಇನ್ನೂ ನಿನ್ನೆಯ ಘಟನೆಯಲ್ಲಿ ರೆಡ್ಡಿ ಭುಜ ಹಾಗೂ ಕಾಲುಗಳಿಗೆ 4 ಗುಂಡುಗಳು ಬಿದ್ದಿದ್ದರೆ, ಆತನ ಚಾಲಕ ಅಶೋಕ್ ಕಾಲಿಗೆ ಒಂದು ಗುಂಡು ತಾಕಿದೆ. ಗುಂಡು ಬಿದ್ದಿದ್ದರೂ ಲೆಕ್ಕಿಸದೆ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿ ರೆಡ್ಡಿಯನ್ನು ಅಶೋಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.