ಬೆಂಗಳೂರು(ಡಿ.6): ಬೆಂಗಳೂರಿನ ಕಲ್ಕೆರೆ ಮುಖ್ಯರಸ್ತೆಯ ವೀರಾಂಜನೇಯ ದೇವಸ್ಥಾನದ ಹತ್ತಿರದ ಗೇಮ್ ಆನ್ ಪ್ರೋ ಸ್ಪೋರ್ಟ್ಸ್ ಟರ್ಫ್ ಮೈದಾನದಲ್ಲಿ APD’s ವತಿಯಿಂದ ವಿಕಲಚೇತನರಿಗೆ ಎರಡು ದಿನಗಳ ಕ್ರಿಕೆಟ್ ಲೀಗ್ ಆಯೋಜನೆ ಮಾಡಲಾಗಿತ್ತು. ಮೈಸೂರು ವಾರಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡು, ಗದಗ ರಾಯಲ್ ಚಾಲೆಂಚರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಗದಗ, ಹಾವೇರಿ, ತುಮಕೂರು, ಮೈಸೂರು ಹೀಗೆ ಹಲವೆಡೆಗಳಿಂದ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು, ಎರಡು ದಿನಗಳು ಪಂದ್ಯಾವಳಿ ನಡೆಯಿತು. ೧೯೫೯ ರಲ್ಲಿ ಸ್ಥಾಪನೆಗೊಂಡ ದಿ ಅಸೋಸಿಯೇಶನ್ ಆಫ್ ಪೀಪಲ್ ವಿಥ್ ಡಿಸೇಬಿಲಿಟಿ ಎಂಬ ಸಂಸ್ಥೆ ಈ ವಿನೂತನ ಕ್ರೀಡೆ ಆಯೋಜಿಸಿತ್ತು, ಕಳೆದ ವರ್ಷವೂ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಆಕ್ಟ್ ಆಫ್ ಲವ್ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಅದ್ದೂರಿಯಾಗೆ ಮುಕ್ತಾಯಗೊಂಡಿತು. ಬೆಂಗಳೂರು ಡಿಸಿಪಿ, ರಾಮಚಂದ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಗೆದ್ದ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಸಾಮಾನ್ಯವಾಗಿ ಕ್ರಿಕೆಟ್ ಕ್ರೇಜ್ ಅನ್ನೋದು ಯುವಜನತೆಗೆ ಇದ್ದೇ ಇರುತ್ತದೆ, ಆದರೆ ವಿಕಲಚೇತನರಿಗೆ ಕ್ರೀಡಾಕ್ಷೇತ್ರದಲ್ಲಿ ಉತ್ತೇಜನ ನೀಡುವುದು ಬಹುಮುಖ್ಯ. ಇಂದಿನ ದಿನಗಳಲ್ಲಿ ಎಲ್ಲರನ್ನೂ ಸಮಾನರಾಗಿ ಕಾಣುವ ಧ್ಯೇಯೆಯೊಂದಿಗೆ ಈ ವಿನೂತನ ಕ್ರಿಕೆಟ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ. ಸುಮಾರು ೮೦ ಕ್ಕೂ ಹೆಚ್ಚು ಮಂದಿ ಈ ಲೀಗ್ ನಲ್ಲಿ ಭಾಗವಹಿಸಿದ್ದು, ವಸತಿ ವ್ಯವಸ್ಥೆಯೊಂದಿಗೆ ಕ್ರಿಕೆಟ್ ಲೀಗ್ ನಲ್ಲಿ ವೈವಿಧ್ಯಮಯವಾಗಿ ಜರುಗಿತು.