ಬೆಂಗಳೂರು: ವಿಧಾನಸಭೆ ಸಮೀಪಿಸುತ್ತಿದ್ದು ರಾಜ್ಯದಲ್ಲಿ ಸವಾಲುಗಳ ಸುರಿಮಳೆ ಕೇಳಿಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ತಾವು ಸ್ಫರ್ಧಿಸುವ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಬೀಡು ಬಿಟ್ಟಿದ್ದಾರೆ. ಜೊತೆಗೆ, ತಮ್ಮ ಪ್ರತಿ ಸ್ಪರ್ಧಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಟಾಂಗ್ ಕೊಡುತ್ತಿದ್ದಾರೆ. ಅದರಂತೆಯೇ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಮಾಜಿ ಸಚಿವ ಹಾಗೂ ಸಿ.ಡಿ ಹಗರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ರಮೇಶ್ ಜಾರಕಿಹೊಳಿಗೆ (Ramesh Jarkiholi) ಟಾಂಗ್ ಕೊಟ್ಟಿದ್ದಾರೆ.

ಹೌದು, ‘ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ’ ಎಂಬ ಹೇಳಿಕೆ ನೀಡಿವ ಮೂಲಕ ತಾವು ಚುನಾವಣೆಯಲ್ಲಿ ನಿಮ್ಮನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
‘ಅಖಾಡ ತೆರೆದಿದೆ. ನಾವು ತಾಯಾರಿದ್ದೇವೆ. ನೀವು ಅಖಾಡಕ್ಕೆ ಧುಮುಕಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಸವಾಲು ಹಾಕಿದ್ದಾರೆ. ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದಾರೆ. ಈ ಸಂಬಂಧ ಮಾದ್ಯಮದವರು ಕೇಳಿದ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಲಕ್ಷ್ಮೀ ಸವಾಲು ಹೀಗಿತ್ತು?
‘ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ’ ಅಂದರೆ, ‘ಅಖಾಡ ತೆರೆದಿದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ’ ಎನ್ನುವ ಮೂಲಕ ಆಕ್ಟೀವ್ ಆಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಸವಾಲೆಸೆದಿದ್ದಾರೆ.
‘ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡ್ತಿರಲ್ಲ. ಚುನಾವಣೆ ಫಲಿತಾಂಶ ಬಂದ ಮೇಲೆ ಎಲ್ಲಾ ಗೊತ್ತಾಗುತ್ತದೆ. ಅಲ್ಲಿವಯವರೆಗೂ ಕಾಯಬೇಕಷ್ಟೇ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಚುನಾವಣೆಗೆ 90 ದಿನ ಇದೆ ಅಂತಾ ಸಿದ್ದತೆ ನಡೆಸ್ತಿಲ್ಲ..!
ಚುನಾವಣೆ ಗೆದ್ದ ಮಾರನೇ ದಿನದಿಂದ ನಾನು ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿದ್ದೇನೆ. ಈಗ 90 ದಿನ ಇದೆ ಅಂತಾ ತಯಾರಿ ನಡೆಸುತ್ತಿಲ್ಲ. ಈಗ ಬಂದು ನಾನು ಬಿಲ್ಲು, ಬಾಣ, ಬತ್ತಳಿಕೆ ಅಂತೆಲ್ಲಾ ಇಲ್ಲ. ಚುನಾವಣೆ ಗೆದ್ದ ಮಾರನೇ ದಿನವೇ ನನ್ನ ಹುಟ್ಟಿದ ದಿನಾಂಕವನ್ನು ಮತದಾರರಿಗೋಸ್ಕರ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಪುನರ್ಜನ್ಮ ಕೊಟ್ಟ ಕ್ಷೇತ್ರ
ಮುಂದುವರಿದು ಮಾತನಾಡಿರುವ ಅವರು, ನನಗೆ ಪುನರ್ಜನ್ಮ ಕೊಟ್ಟ ಕ್ಷೇತ್ರ ಎಂಬ ಕಾರಣಕ್ಕಾಗಿಯೇ ಚುನಾವಣೆಯನ್ನು ಯಾವ ರೀತಿ ಗೆಲ್ಲಬೇಕು, ಜನರ ಮನಸ್ಸು ಯಾವ ರೀತಿ ಗೆಲ್ಲಬೇಕು ಎಂಬುದರ ಬಗ್ಗೆ ಕಳೆದ ನಾಲ್ಕೂವರೆ ವರ್ಷಗಳಿಂದ ಶ್ರಮಿಸುತ್ತಲೇ ಬಂದಿದ್ದೇನೆ. ಇದು ಇಂದು, ನಿನ್ನೆಯ ತಯಾರಿಯಲ್ಲ ಎಂದು ಅಖಡ್ ಆಗಿಯೇ ಪ್ರತಿ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.