ಬೆಂಗಳೂರು (ನ.10): ಆರೋಗ್ಯವೇ ಭಾಗ್ಯ. ನಮ್ಮ ದೇಹಾರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಕಾಲಕ್ಕೆ ತಕ್ಕ ಹಾಗೆ ದೇಹದ ಕಾಳಜಿ ವಹಿಸುವುದು ನಾವು ನೆನಪಿನಲ್ಲಿಡಲೇಬೇಕಾದ ಸತ್ಯ. ಆಹಾರ ಪದಾರ್ಥಗಳಿಂದ ಹಿಡಿದು ದಿನನಿತ್ಯದ ಚಟುವಟಿಕೆಗಳಿಂದ ಬದಲಾವಣೆಯ ಅಗತ್ಯವಿದೆ. ಇದರಿಂದಾಗಿ ಈ ಚಳಿಗಾಲದ ಸಮಯದಲ್ಲಿ ಕೂದಲಿನ ಆರೈಕೆಯೂ ಬಹುಮುಖ್ಯ. ಇದರಿಂದ ಕೆಲವೊಂದು ಟಿಪ್ಸ್ (Tips)ಗಳನ್ನು ಫಾಲೋ ಮಾಡಲೇಬೇಕಾಗಿದೆ. ಮೈಕೊರೆಯುವ ಚಳಿಗೆ ಬಿಸಿ ಬಿಸಿ ಆಹಾರ ಸೇವಿಸುವ ಹಂಬಲ. ಮೋಡದ ವಾತಾವರಣದಿಂದ ಕೂಡಿದ ಪ್ರಕೃತಿ. ಮನೆಯಿಂದ ಹೊರಹೊರಟು ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಹೋಗಲೇ ಬೇಕಾದ ಅನಿವಾರ್ಯತೆ ಕಾಡುತ್ತದೆ.
ಆಹಾರದಲ್ಲಿ ಬದಲಾವಣೆ ಮಾಡಿ
ವಿಟಮಿನ್ ಬಿ, ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕೂದಲು ಮತ್ತು ನೆತ್ತಿಗೆ ಒಳ್ಳೆಯದು. ಇದಕ್ಕಾಗಿ ನೀವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆ, ಮೀನು, ಬಾಳೆಹಣ್ಣು ಮತ್ತು ಪಾಲಕ್ ಅನ್ನು ಸೇವಿಸಬಹುದು. ಯಾವಾಗಲೂ ನಿಮ್ಮ ಕೂದಲು ಮತ್ತು ನೆತ್ತಿಯನ್ನು ಸ್ವಚ್ಛವಾಗಿಡಿ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ನಿಮ್ಮ ತಲೆಯನ್ನು ಸ್ಕಾರ್ಫ್ ಟೋಪಿಯಿಂದ ಮುಚ್ಚಿಕೊಳ್ಳುವುದು ಸೂಕ್ತ.ಇನ್ನು ಕೆಲಸದ ಒತ್ತಡದಿಂದ ಕೂದಲು ಉದುರುವಿಕೆ ಹೆಚ್ಚಾಗಿ ಕಂಡುಬರುತ್ತದೆ. ತಲೆಹೊಟ್ಟು ಕಾಣಿಸಿಕೊಳ್ಳಲು ಶುರುವಾಗುತ್ತದೆ. ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಲಭ್ಯವಿದೆ, ಆದರೆ ಲಭ್ಯವಿರುವ ಉತ್ಪನ್ನಗಳಿಗಿಂತ ಮನೆಯಲ್ಲಿ ತಯಾರಿಸಿದ ವಸ್ತುಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ.
ತಲೆ ಸ್ನಾನ ಹೀಗಿರಲಿ
ಚಳಿಗಾಲದಲ್ಲಿ ನೆತ್ತಿಯ ಆರೈಕೆಗೆ ನಿರ್ದಿಷ್ಟ ಗಮನ ನೀಡಬೇಕು. ಬಿಸಿನೀರಿನ ಸ್ನಾನದಿಂದ ಕೂದಲು ಉದುರುತ್ತದೆ, ಇದು ಕೂದಲಿನ ತುದಿಗಳು ಬಿರುಕು ಬಿಡಲು ಕಾರಣವಾಗುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ವಾರದಲ್ಲಿ ಎರಡು ಬಾರಿ ಹರ್ಬಲ್ ಶಾಂಪೂ ಬಳಕೆ ಮಾಡಿದರೆ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ. ಅಲ್ಲದೇ ತೆಂಗಿನ ಹಾಲಿನಲ್ಲಿ ನಾಲ್ಕೈದು ಹನಿ ನಿಂಬೆ ರಸ ಸೇರಿಸಿ ಕೂದಲಿಗೆ ಹಚ್ಚಿ. ನಾಲ್ಕರಿಂದ ಆರು ಗಂಟೆಗಳ ನಂತರ ನೀರಿನಿಂದ ತೊಳೆಯಿರಿ. ಸಬ್ಬಸಿಗೆಯನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ, ಸಬ್ಬಸಿಗೆ ಪೇಸ್ಟ್ ಮಾಡಿ ಸ್ವಲ್ಪ ನಿಂಬೆ ರಸದೊಂದಿಗೆ ಕೂದಲಿಗೆ ಹಚ್ಚಿ. ಅರ್ಧ ಘಂಟೆಯ ನಂತರ ತಲೆಸ್ನಾನ ಮಾಡಿದರೆ ಉತ್ತಮವಾದ ರಿಸಲ್ಟ್ ಕೊಡುತ್ತದೆ.
ಕಂಡೀಷನರ್ ಗಳ ಬಳಕೆ
ಚಳಿಗಾಲದಲ್ಲಿ, ಹೆಚ್ಚಿನ ಜನರು ಸಾಮಾನ್ಯವಾಗಿ ಕೂದಲು ಮತ್ತು ನೆತ್ತಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಇದರಿಂದ ನೆತ್ತಿಯ ರಂಧ್ರಗಳು ಮತ್ತು ಕೂದಲು ಕಿರುಚೀಲಗಳ ಅಡಚಣೆಗೆ ಕಾರಣವಾಗಬಹುದು. ನೆತ್ತಿಯ ಮೇಲೆ ಕೊಳಕು, ಧೂಳು ಮತ್ತು ಎಣ್ಣೆಯು ನೆತ್ತಿಯ ಕಿರಿಕಿರಿ, ತುರಿಕೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಪ್ರತಿ ಬಾರಿ ಶಾಂಪೂ ಮಾಡಿದ ನಂತರ ಕಂಡಿಷನರ್ ಗಳ ಅಗತ್ಯವಿರುತ್ತದೆ. ಕಂಡಿಷನರ್ ಕೂದಲು ಕಳೆದುಕೊಂಡ ತೇವಾಂಶವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಫ್ರಿಜ್ ಮುಕ್ತವಾಗಿ, ಮೃದುವಾಗಿ ಮತ್ತು ನಯವಾಗಿ ಇರಿಸುತ್ತದೆ. ಈ ಮೇಲೆ ತಿಳಿಸಿರುವ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುವುದರಲ್ಲಿ ಸಂಶಯವೇ ಇಲ್ಲ.