ಬೆಂಗಳೂರು(ನ.9 ): ಚಳಿಗಾಲದಲ್ಲಿ ತ್ವಚೆ ಕಾಪಾಡಿಕೊಳ್ಳುವುದು ಬಹು ಮುಖ್ಯ. ಬಿಸಿಲಿಗೆ ನಮ್ಮ ಚರ್ಮದ ಕಾಂತಿ ಕಪ್ಪಾದರೆ, ಚಳಿಗಾಲದಲ್ಲಿ ಚರ್ಮ ಒಡೆದು ಹೋಗಲು ಶುರುವಾಗುತ್ತದೆ. ಮುಖ್ಯವಾಗಿ ಮಾಯಿಶ್ಚರೈಸರ್ ಬಳಸದೇ ಇದ್ದರೆ, ಚರ್ಮ ತನ್ನಷ್ಟಕ್ಕೆ ಡಲ್ ಆಗೋಕೆ ಶುರುವಾಗಿ, ಚರ್ಮ ಒಡೆದು ಹೋಗುತ್ತದೆ. ಇದರಿಂದ ನಮ್ಮ ಸೌಂದರ್ಯ ಸುಕ್ಕು ಗಟ್ಟುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆ ಮುಖ್ಯ. ದುಬಾರಿ ಖರ್ಚು ವೆಚ್ಚ ವಿಲ್ಲದೆ ಸಿಂಪಲ್ ಆಗಿ ಮನೆಯಲ್ಲೇ ಕುಳಿತು ಸೌಂದರ್ಯ ಮತ್ತು ಯೌವ್ವನವನ್ನು ಉಳಿಸಿಕೊಳ್ಳುವ ಸ್ಪೆಷಲ್ ಟಿಪ್ಸ್ ತಿಳಿಸಿಕೊಳ್ತೀವಿ.
ಸಿರಮ್ ಬಳಸಿ
ಪ್ರತಿದಿನ ಮುಖಕ್ಕೆ ಮಾಯಿಶ್ಚರೈಸರ್ ಕ್ರೀಮ್ ಬಳಸಿ. ಪ್ರತೀ ದಿನವು 3 ವಿಧದ ಮಾಯಿಶ್ಚರೈಸರ್ ಕ್ರೀಮ್ ಬಳಸುವುದು ಉತ್ತಮ , ಬೆಳಗಿನ ವೇಳೆ , 1 ರಾತ್ರಿ ಮಲಗುವುದಕ್ಕೂ ಮುನ್ನ ಅದರ ಜೊತೆಗೆ ಮುಲಾಮನ್ನು ಬಳಸುವ ಮೂಲಕ ಚರ್ಮದ ಕಾತಿಯನ್ನು ಹೆಚ್ಚಿಸಬಹುದು. ಅಲೋವೆರಾ ಅಥವಾ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ ವಿಟಮಿನ್ ಇ ಕ್ಯಾಪ್ಸುಲ್ ಬೆರೆಸಿ ಮುಖವನ್ನು ಚೆನ್ನಾಗಿ ವಾಶ್ ಮಾಡಿ ಈಸಿರಮ್ ಬಳಸಿದರೆ ಸೂಪರ್ ಆಗಿ ಚರ್ಮ ಪಳ ಪಳ ಹೊಳೆಯುತ್ತದೆ. ಚಳಿಗಾಲದಲ್ಲಿ ಚರ್ಮದ ರಕ್ಷಣೆಗಾಗಿ ಸೋಪ್, ಡಿಟರ್ಜೆಂಟ್, ಲೋಷನ್, ಕ್ರೀಮ್ ಲಭ್ಯವಿದ್ರು, ಮನೆಯಲ್ಲಿಯೇ ಸುಲಭವಾಗಿ ಸಿಗುವ ಈ 5ಪದಾರ್ಥಗಳು ನಮ್ಮ ಚರ್ಮವನ್ನು ಸದಾ ಕಾಲಕ್ಕೂ ಹೊಳೆಯುವಂತೆ ಮಾಡುತ್ತದೆ.
ಯೋಗದಿಂದ ಸೌಂದರ್ಯ ವೃದ್ಧಿ
ನಿಮ್ಮ ಚರ್ಮವನ್ನು ಉತ್ತಮವಾಗಿಡಲು ವ್ಯಾಯಾಮವು ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಇದು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಅನಿವಾರ್ಯವಾಗಿ ರಕ್ತದ ಆಮ್ಲಜನಕೀಕರಣವನ್ನು ಸುಧಾರಿಸುತ್ತದೆ. ಸಾಕಷ್ಟು ಆಮ್ಲಜನಕಯುಕ್ತ ರಕ್ತವು ಚರ್ಮದ ನೋಟ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ, ಇದು ಅಗತ್ಯವಾದ ಪೋಷಕಾಂಶಗಳೊಂದಿಗೆ ಚರ್ಮದ ಕೋಶಗಳನ್ನು ಬಲಪಡಿಸುತ್ತದೆ. ಯೋಗ, ಓಟ ಅಥವಾ ದೈಹಿಕವಾಗಿ ಸವಾಲಿನ ಯಾವುದೇ ಕ್ರೀಡೆಯನ್ನು ದಿನಚರಿಯಾಗಿ ಮಾಡಿದರೂ ಒಳ್ಳೆಯದು. ಇದರಿಂದ ಬೆಳಗ್ಗಿನ ಹೊತ್ತು ವ್ಯಾಯಾಮ ಮಾಡಿದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ. ವ್ಯಾಯಾಮ ಮಾಡಿದ ಬಳಿಕ ಮುಖ ತೊಳೆದುಕೊಂಡು ಬೆಳಗ್ಗಿನ ಉಪಹಾರ ಸೇವಿಸಿದರೆ ಒಳ್ಳೆಯದು.
ಜೇನುತುಪ್ಪ, ಹಾಲಿನ ಕೆನೆಯ ಮಾಸ್ಕ್ ಬಳಸಿ
ಜೇನುತುಪ್ಪ ಮತ್ತು ಹಾಲಿನ ಕೆನೆಯಿಂದ ತಯಾರಿಸಿದ ಮಿಶ್ರಣದಲ್ಲಿ ಫೇಸ್‌ಮಾಸ್ಕ್ ಅನ್ನು ತಯಾರಿಸಬಹುದು. ಇದು ಅತ್ಯುತ್ತಮ ನೈಸರ್ಗಿಕ ಕ್ರೀಮ್‌ಗಳಲ್ಲಿ ಒಂದಾಗಿದೆ. ಇದು ನಿಮ್ಮ ಚರ್ಮವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ನಿಮ್ಮ ಮುಖದ ಮೇಲೆ ಮೊಡವೆಗಳು ಮತ್ತು ಮೊಡವೆಗಳ ಬೆಳವಣಿಗೆಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಜೇನುತುಪ್ಪವು ಸಹಾಯ ಮಾಡುತ್ತದೆ. ತ್ವಚೆಯ ಆರೈಕೆಯನ್ನು ಬಾಹ್ಯವಾಗಿ ಮಾಡುವುದಕ್ಕಿಂತಲೂ ನಾವು ಸೇವಿಸುವ ಆಹಾರದ ಮೂಲಕವೂ ಕಂಡುಕೊಳ್ಳಬಹುದಾಗಿದೆ. ಆರೋಗ್ಯಕರ ತ್ವಚೆ ಎಂದರೆ ಕೇವಲ ಹೊರನೋಟಕ್ಕೆ ಕಾಣುವ ಹೊರ ಪದರವೊಂದೇ ಅಲ್ಲ. ಇದರಿಂದ ಸರಿಯಾದ ಆಹಾರ ಸೇವನೆಯೂ ಅತಿ ಮುಖ್ಯ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಹವ್ಯಾಸ ಬೆಳೆಸಿಕೊಳ್ಳುವುದು ನೆನಪಿರಲಿ.
ಇದನ್ನೂ ಓದಿ: ಸಾನ್ಯಾ ಅಯ್ಯರ್ ಔಟ್; ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ ….!