ಬೆಂಗಳೂರು (ನ. 7): ಈ ಚಳಿಗಾಲ ಬಂತೆಂದರೆ ಸಾಕು ಚರ್ಮದ ಕಾಯಿಲೆಗಳು ಒಂದಲ್ಲಾ ಒಂದು ಶುರುವಾಗುತ್ತದೆ. ಚರ್ಮದ ಕಾಂತಿ ಹೆಚ್ಚಾಗಲು ಈ ಚಳಿಗಾಲದಲ್ಲಿ ನಾವು ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಲೇಬೇಕು. ಇದರಲ್ಲಿ ಕಾಲಿನ ಹಿಮ್ಮಡಿ ಸವೆತವೂ ಒಂದು. ತ್ವಚೆ ತುಂಬಾ ಒಣಗಿದಾಗ ಹಿಮ್ಮಡಿಯು ಒಣಗಿ, ಸಿಪ್ಪೆ ಏಳುತ್ತದೆ. ಹಿಮ್ಮಡಿ ಬಿರಿಯುತ್ತದೆ. ಇದು ಕೆಲವೊಮ್ಮೆ ತುಂಬಾ ನೋವು ಉಂಟು ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗಲೂ ಹಿಮ್ಮಡಿ ಬಿರಿಯುತ್ತದೆ. ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಹಿಮ್ಮಡಿ ಸಮಸ್ಯೆ ಹೆಚ್ಚಾಗುತ್ತದೆ. ಅಂತಹ ಸ್ಥಿತಿಯಲ್ಲಿ, ಕಣಕಾಲುಗಳ ಬಿರುಕು ಸಮಸ್ಯೆ ಹಾಗೂ ಹಿಮ್ಮಡಿ ಬಿರಿಯುವುದು ತುಂಬಾ ಕಾಡುತ್ತದೆ.
ಈ ಹಿಮ್ಮಡಿ ಯಾಕೆ ಬಿರುಕು ಬೀಳುತ್ತದೆ?
ದೇಹದಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಬಿ-3 ಕೊರತೆ ಉಂಟಾದಾಗಲೂ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಅದೇ ವೇಳೆ ಶುಷ್ಕತೆ ಮತ್ತು ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ, ಹಿಮ್ಮಡಿಗಳು ಬಿರಿಯುತ್ತವೆ. ಬೇಸಿಗೆಯಲ್ಲಿ ಶುಷ್ಕತೆಯಿಂದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಇದಕ್ಕಾಗಿ, ದಿನದಲ್ಲಿ ಸಾಕಷ್ಟು ನೀರು ಕುಡಿದರೆ ಉತ್ತಮ. ಬೇಸಿಗೆಯಲ್ಲಿ, ನೀರಿನಂಶವಿರುವ ಹಣ್ಣುಗಳು ಮತ್ತು ಜ್ಯೂಸ್, ತೆಂಗಿನ ನೀರು, ನಿಂಬೆ ಪಾನಕದಂತಹ ದ್ರವಗಳ ಸೇವನೆ ಹೆಚ್ಚು ಮಾಡಿ. ಇದರಿಂದ ಚರ್ಮ ಮೃದುವಾಗುತ್ತದೆ.
ದೇಹದ ತೂಕ ನಿಯಂತ್ರಿಸಿ
ರಾತ್ರಿಯಲ್ಲಿ ಮಲಗುವಾಗ ನೀವು ಹಿಮ್ಮಡಿಗೆ ಮುಲಾಮು ಹಚ್ಚಿದರೆ ಸೂಕ್ತ. ಹೆಚ್ಚಿನವರು ರಾತ್ರಿ ಹಾಗೆಯೇ ಮಲಗುತ್ತಾರೆ, ತಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಚರ್ಮದ ಕಾಂತಿಯ ಜೊತೆ ಕಾಲಿನ ಪಾದಗಳನ್ನು ರಕ್ಷಿಸುವುದು ಮುಖ್ಯ. ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಗೂ ನಿಂಬೆರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ , ನಿಂಬೆ ಹಣ್ಣು ಕೊಳೆಯನ್ನು ತೊಳೆಯುತ್ತದೆ. ಈ ರೀತಿಯಲ್ಲಿ ಹಿಮ್ಮಡಿಯನ್ನು ರಕ್ಷಣೆ ಮಾಡಿಕೊಳ್ಳಬಹುದು. ಅತಿ ಹೈಹೀಲ್ಡ್ ಚಪ್ಪಲಿ ಅಥವಾ ಗಟ್ಟಿಯಾದ ಚಪ್ಪಲಿ ಒಳ್ಳೆಯದಲ್ಲ. ಹಾಕಲೇಬೇಕಾದ ಅಗತ್ಯವಿದ್ದಲ್ಲಿ ಆದಾಗೆಲ್ಲ ಕಾಲನ್ನು ಹೊರತೆಗೆದು ಕಾಲಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು. ದೇಹದ ತೂಕ ನಿಯಂತ್ರಿಸಿಕೊಂಡರೂ ಹಿಮ್ಮಡಿಯ ನೋವು ಕಡಿಮೆಯಾಗಿಸಿಕೊಳ್ಳಬಹುದು.
ಇದನ್ನೂ ಓದಿ: ವಿಜಯಾನಂದ ಆಡಿಯೋ ಬಿಡುಗಡೆ: ಡಾ. ವಿಜಯ ಸಂಕೇಶ್ವರರ ಜೀವನಾಧಾರಿತ ಸಿನಿಮಾ