ಪಪ್ಪಾಯಿಯ ಪ್ರಯೋಜನಗಳು ಮತ್ತು ಅಡ್ಡ ಪರಿಣಾಮಗಳು: ಆರೋಗ್ಯವಾಗಿರಲು ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಅನೇಕ ರೋಗಗಳಿಂದ ಮುಕ್ತರಾಗಬಹುದು. ಪೌಷ್ಠಿಕ ಆಹಾರದ ವಿಷಯಕ್ಕೆ ಬಂದಾಗ, ತರಕಾರಿಗಳು ಮತ್ತು ಹಣ್ಣುಗಳು ಮುಖ್ಯ ಪಾತ್ರವಹಿಸುತ್ತವೆ. ಅದ್ರಲ್ಲಿ ಪಪ್ಪಾಯ(Papaya ) ಎಲ್ಲಾ ಹಣ್ಣಿಗಿಂತಲೂ ವಿಭಿನ್ನ ವಿಶೇಷತೆ ಹೊಂದಿದ್ದು, ಹಲವು ಆರೋಗ್ಯ ಲಾಭವನ್ನು ಪಪ್ಪಾಯದಿಂದ ಪಡೆದುಕೊಳ್ಳಬಹುದು.
ಪಪ್ಪಾಯವು ವಿಟಮಿನ್ ಎ, (vitamin A) ವಿಟಮಿನ್ ಸಿ (Vitamin C) ಅಂಶವನ್ನು ಅಗಾಧವಾಗಿ ಹೊಂದಿದೆ. ಪಪ್ಪಾಯಿ ಹೆಚ್ಚಿನ ಪ್ರಮಾಣದ ನೀರು, ಪ್ರೋಟೀನ್, ಕಾರ್ಬೋಹೈಡ್ರೇಟ್(carbohydrate), ಕ್ಯಾಲ್ಸಿಯಂ(calcium), ರಂಜಕ, ಕಬ್ಬಿಣ, ಸಕ್ಕರೆ (sugar)ಇತ್ಯಾದಿ ಅಂಶವನ್ನು ಹೊಂದಿದೆ. ಪಪ್ಪಾಯ ನೈಸರ್ಗಿಕವಾಗಿ ಫೈಬರ್, ಕ್ಯಾರೋಟಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು ತಜ್ಷರು ಪ್ರತಿನಿತ್ಯ ಪಪ್ಪಾಯ ತಿನ್ನಲು ಸಲಹೆ ನೀಡುತ್ತಾರೆ. ಇದನ್ನೂ ಓದಿ: https://seculartvkannada.com/2022/11/05/radhika-narayan-entry-for-the-film-cause-of-left-hand-accident/

ಪಪ್ಪಾಯಿ ಯಾಕೆ ತಿನ್ನಬೇಕು?
*ಪಪ್ಪಾಯಿ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳಿಂದ (heart disease) ರಕ್ಷಿಸುತ್ತದೆ
*ಪಪ್ಪಾಯಿ ಬೀಜಗಳನ್ನು ಬಳಸುವುದರಿಂದ ಜೀರ್ಣಕ್ರಿಯೆ (digestion) ಸುಧಾರಿಸಬಹುದು.
*ಪಪ್ಪಾಯಿಯಲ್ಲಿರುವ ಔಷಧೀಯ ಗುಣಗಳು ಕಣ್ಣಿನ (Eye) ರಕ್ಷಣೆಗೆ ಪ್ರಯೋಜನಕಾರಿ.
*ಸಂಧಿವಾತ ರೋಗಿಗಳು ಹೆಚ್ಚಾಗಿ ಪಪ್ಪಾಯಿ ಸೇವಿಸಿದರೆ, ಸಂಧಿವಾತ ಕಡಿಮೆಯಾಗುತ್ತದೆ.
*ಪಪ್ಪಾಯಿಯು ಚರ್ಮದ (Skin Health) ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.

*ಪಪ್ಪಾಯಿ ಎಲೆಗಳ ರಸವನ್ನು ಕೂದಲಿಗೆ ತಿಂಗಳಿಗೊಮ್ಮೆ ಹಚ್ಚಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿದರೆ, ಕೂದಲು ಬಲಗೊಳ್ಳತ್ತವೆ.
*ತಜ್ಞರ ಪ್ರಕಾರ, ಪಪ್ಪಾಯಿ ಬೀಜಗಳು ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿದೆ.
*ಜನರು ಅಧಿಕ ತೂಕ ಹೊಂದಿದ್ದರೆ ಬೊಜ್ಜು ಕಡಿಮೆ ಮಾಡಲು ಪಪ್ಪಾಯಿಯನ್ನು ಬಳಸಬಹುದು.
*ಅಧಿಕ ರಕ್ತದೊತ್ತಡದ (BP) ಚಿಕಿತ್ಸೆಯಲ್ಲಿ ಹಸಿ ಪಪ್ಪಾಯಿ ಪ್ರಯೋಜನಕಾರಿಯಾಗಿದೆ. .
*ಪಪ್ಪಾಯಿಯ ಸೇವನೆಯು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ಪಪ್ಪಾಯಿಯಿಂದಾಗುವ ಅನಾನುಕೂಲಗಳು
ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ, ಕೆಲ ಸಂಧರ್ಭಗಳ ಅದ್ರಿಂದ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇದೆ. ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ಸೇವಿಸಬಾರದು. ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಅಂಶದಿಂದ ಗರ್ಭಪಾತ, ಹೆರಿಗೆ ನೋವು, ಮಗುವಿನಲ್ಲಿ ಆರೋಗ್ಯದ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಪಪ್ಪಾಯಿ ಸೇವನೆಯಿಂದ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ, ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಜಾಂಡೀಸ್ ಸಮಸ್ಯೆ ಕಾಣಿಸಿಕೊಳ್ಳಬಹುದು.