ನವದೆಹಲಿ : ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು(Nobel Prize in Physics-2022) ಮೂವರು ವಿಜ್ಞಾನಿಗಳಿಗೆ ಇಂದು ಘೋಷಿಸಲಾಗಿದೆ. ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ 2022ರ ನೊಬೆಲ್ ಭೌತಶಾಸ್ತ್ರ ಪ್ರಶಸ್ತಿ (NobelPrize in Physics) ಲಭಿಸಿದೆ. ಒಟ್ಟಿಗೆ ತಳಕು ಹಾಕಿಕೊಂಡಿರುವ ಫೋಟಾನ್‌ಗಳೊಂದಿಗಿನ ಪ್ರಯೋಗ ಹಾಗೂ ಕ್ವಾಂಟಮ್ ಮಾಹಿತಿ ವಿಜ್ಞಾನದ ವಿಷಯದಲ್ಲಿನ ಸಂಶೋಧನೆಗಾಗಿ ಮೂವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ಹೌದು, ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ. ಭೌತವಿಜ್ಞಾನಿಗಳ ಕ್ವಾಂಟಮ್ ಮಾಹಿತಿ ವಿಜ್ಞಾನದಲ್ಲಿನ ಕೆಲಸಕ್ಕಾಗಿ ಜಂಟಿಯಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ : Nobel Prize for Medicine: ಸ್ವೀಡನ್ ನ ಸ್ವಾಂಟೆ ಪಾಬೊಗೆ ನೊಬೆಲ್ ಪ್ರಶಸ್ತಿ : ಪ್ರಶಸ್ತಿ ಮೌಲ್ಯ ಎಷ್ಟು ಗೊತ್ತಾ?
Nobel Prize in Physics 2022 awarded to Alain Aspect (France), John F. Clauser (USA) and Anton Zeilinger (Austria).#NobelPrize | #NobelPrize2022 pic.twitter.com/9PaoQC5ei8
— All India Radio News (@airnewsalerts) October 4, 2022
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ (The Royal Swedish Academy of Sciences) ಅವರು ಮಂಗಳವಾರ ಸ್ಟಾಕ್‌ಹೋಮ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜೇತರನ್ನು ಘೋಷಿಸಿದ್ದಾರೆ. ಒಟ್ಟಿಗೆ ತಳಕು ಹಾಕಿಕೊಂಡಿರುವ ಫೋಟಾನ್‌ಗಳೊಂದಿಗಿನ ಪ್ರಯೋಗ ಹಾಗೂ ಕ್ವಾಂಟಮ್ ಮಾಹಿತಿ ವಿಜ್ಞಾನದ ವಿಷಯದಲ್ಲಿನ ಸಂಶೋಧನೆಗಾಗಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಮೂವರಿಂದ ವಿನೂತನ ಪ್ರಯೋಗ
ಎರಡು ಕಣಗಳು ಪ್ರತ್ಯೇಕಗೊಂಡಾಗಲೂ ಒಂದೇ ಘಟಕದಂತೆ ವರ್ತಿಸುವ ಕ್ವಾಂಟಮ್ ಮಾಹಿತಿ ವಿಜ್ಞಾನದ ಸ್ಥಿತಿಗಳನ್ನು ಬಳಸಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಮೂವರೂ ಪ್ರತ್ಯೇಕವಾಗಿ ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಅವರ ಫಲಿತಾಂಶಗಳು ಕ್ವಾಂಟಮ್ ಮಾಹಿತಿಯ ಆಧಾರದ ಮೇಲೆ ಹೊಸ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿವೆ.
ಇದನ್ನೂ ಓದಿ : Diamond Rain: ಆ ಗ್ರಹದಲ್ಲಿ ಬೀಳುತ್ತೆ ವಜ್ರದ ಮಳೆ! ಖಚಿತ ಪಡಿಸಿದ ವಿಜ್ಞಾನಿಗಳು
ಸಂಶೋಧನೆಯ ದೊಡ್ಡ ಕ್ಷೇತ್ರ
ಕ್ವಾಂಟಮ್ ಮೆಕ್ಯಾನಿಕ್ಸ್‌ನ ವಿವರಿಸಲಾಗದ ಪರಿಣಾಮಗಳು ಅನ್ವಯಗಳನ್ನು ಹುಡುಕಲು ಪ್ರಾರಂಭಿಸುತ್ತಿವೆ. ಕ್ವಾಂಟಮ್ ಕಂಪ್ಯೂಟರ್‌ಗಳು, ಕ್ವಾಂಟಮ್ ನೆಟ್‌ವರ್ಕ್‌ಗಳು ಮತ್ತು ಸುರಕ್ಷಿತ ಕ್ವಾಂಟಮ್ ಎನ್‌ಕ್ರಿಪ್ಟ್ ಮಾಡಿದ ಸಂವಹನವನ್ನು ಒಳಗೊಂಡಿರುವ ಸಂಶೋಧನೆಯ ದೊಡ್ಡ ಕ್ಷೇತ್ರ ಈಗ ಇದೆ.
BREAKING NEWS:
— The Nobel Prize (@NobelPrize) October 4, 2022
The Royal Swedish Academy of Sciences has decided to award the 2022 #NobelPrize in Physics to Alain Aspect, John F. Clauser and Anton Zeilinger. pic.twitter.com/RI4CJv6JhZ
ಬಹುಮಾನದ ಮೌಲ್ಯ ಎಷ್ಟು?
ಬಹುಮಾನವು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 900,000 ರೂ) ನಗದು ಪ್ರಶಸ್ತಿಯನ್ನು ಹೊಂದಿದೆ. ಇದೇ ಡಿಸೆಂಬರ್ 10 ರಂದು ಪ್ರಶಸ್ತಿಯನ್ನು ಹಸ್ತಾಂತರಿಸಲಾಗುವುದು. ನೊಬೆಲ್ ಸಂಸ್ಥಾಪಕ ಹಾಗೂ ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು 1895 ರಲ್ಲಿ ಬರೆದ ಉಯಿಲಿನ (ವಿಲ್) ಪ್ರಕಾರ ಈ ಬಹುಮಾನ ನೀಡಲಾಗುತ್ತದೆ.