ಬೆಂಗಳೂರು : ಕೇಂದ್ರ ಸರ್ಕಾರವು (Central Government) ತಕ್ಷಣದಿಂದಲೇ ಜಾರಿಗೆ ಬರುವಂತೆ PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಅಂಗಸಂಸ್ಥೆಗಳಿಗೆ ಅಂಕುಶ ಹಾಕಿದೆ. ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಸರ್ಕಾರ (PFI Ban by Central government) ಮಹತ್ವದ ಆದೇಶ ಹೊರಡಿಸಿದೆ. ಪಿಎಫ್ಐ ಸಂಘಟನೆ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ (Sri Rama Sene founder) ಪ್ರಮೋದ್ ಮುತಾಲಿಕ್ (Sri Rama Sene founder Pramod Muthalik) ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಭಾರತದ ಸುರಕ್ಷತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದು ಆನಂದದಾಯಕ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಖುಷ್
ಕೇಂದ್ರ ಸರ್ಕಾರವು (Central Government) ಇಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ ಅಂಗಸಂಸ್ಥೆಗಳನ್ನು (PFI Ban by Central government) ನಿಷೇಧಿಸಿದೆ. ಈ ಬಗ್ಗೆ ಪ್ರಮೋದ್ ಮುತಾಲಿಕ್ ಫುಲ್ ಖುಷ್ ಆಗಿದ್ದಾರೆ. ‘ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು. ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : Police Raid : Hubli PFI Workers Arrest : ಹುಬ್ಬಳ್ಳಿಯಲ್ಲಿ ಎಸ್‌ಡಿಪಿಐ, ಪಿಎಫ್‌ಐ ಮುಖಂಡರು ಪೊಲೀಸ್ ವಶ
ಕೇಂದ್ರ ತಡವಾಗಿ ಬ್ಯಾನ್ ಮಾಡಿದ್ರೂ..!
ಕಳೆದ 15 ವರ್ಷಗಳ ನಮ್ಮ ಬೇಡಿಕೆ ಈಡೇರಿದೆ. ಪಿಎಫ್‌ಐನಂತಹ ದೇಶದ್ರೋಹಿ, ಸಮಾಜ ಕಂಟಕ, ಆತಂಕಕಾರಿಯಾದ ಈ ಸಂಘಟನೆಯನ್ನು ಮೊದಲೇ ಬ್ಯಾನ್ ಮಾಡಬೇಕಿತ್ತು. ತಡವಾಗಿ ಬ್ಯಾನ್ ಮಾಡಿದರೂ, ಈ ದೇಶಕ್ಕಾಗುವ ಗಂಡಾಂತರವನ್ನು ತಡೆಯುವ ಕೆಲಸ ಮಾಡಿದಂತಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಲಿ
ತಮ್ಮ ಸಮಾಜದ ಯುವಕರು ಯಾವ ದಿಕ್ಕಿನತ್ತ ಹೋಗುತ್ತಿದ್ದಾರೆ ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯರು ತಿಳಿದುಕೊಳ್ಳಬೇಕು. ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕು. ದೇಶದ್ರೋಹಿ ಚಟುವಟಿಕೆ ಮಾಡಿದಾಗ ಸರ್ಕಾರ, ಪೊಲೀಸರ ಗಮನಕ್ಕೆ ತರಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಪರೋಕ್ಷವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ : ಎನ್ಐಎ ತಲಾಶ್ : PFI ಕಚೇರಿಗಳ ಮೇಲೆ NIA ದಾಳಿ ; 100ಕ್ಕೂ ಅಧಿಕ ಕಾರ್ಯಕರ್ತರು ವಶಕ್ಕೆ ; ಮಂಗಳೂರಿನಲ್ಲಿ ಪ್ರತಿಭಟನೆ
ಮುಸ್ಲಿಂ ಮುಖಂಡರ ಬಗ್ಗೆ ಸಾಫ್ ಕಾರ್ನರ್
ಮುಮದುವರಿದು ಮಾತನಾಡಿರುವ ಮುತಾಲಿಕ್ ಮುಸ್ಲಿಂ ಮುಖಂಡರಿಗೆ ಕೆಲವು ಸಲಹೆ ನೀಡಿದ್ದಾರೆ. ‘ಈ ದೇಶಕ್ಕೆ ಇವರು(ಮುಸ್ಲಿಂ ಸಮುದಾಯ) ಬದ್ಧರಾಗಿರಬೇಕು. ದೇಶದ್ರೋಹ ಮಾಡುವಂತ ವಿಕೃತ ಮನಸ್ಸುಳ್ಳ ಯುವಕರನ್ನು ತಡೆಯಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು. ಮುಸ್ಲಿಂರು ಮಾನಸಿಕತೆ ಬದಲಾವಣೆ ಮಾಡುವ ಪ್ರಕ್ರಿಯೆ ಮದರಸಾಗಳಲ್ಲೂ ಆಗಬೇಕು’ ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಪಿಎಫ್ಐನ ಅಂಗ ಸಂಸ್ಥೆಗಳಿಗೂ ಶಾಕ್..
ಪಿಎಫ್ಐನ ಅಂಗ ಸಂಸ್ಥೆಗಳಿಗೂ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಪಿಎಫ್‌ಐ (PFI)ನ ಕೆಲವು ಸಂಸ್ಥಾಪಕ ಸದಸ್ಯರು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನಾಯಕರು ಮತ್ತು PFI ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (JMB) ನೊಂದಿಗೆ ಸಂಪರ್ಕವನ್ನು ಹೊಂದಿದೆ. ಇವೆರಡೂ ನಿಷೇಧಿತ ಸಂಘಟನೆಗಳಾಗಿವೆ ಎಂದು ಕೇಂದ್ರವು ತನ್ನ ಅಧಿಸೂಚನೆಯಲ್ಲಿ ಹೇಳಿದೆ.