ಶಿವಮೊಗ್ಗ : ಪಿಎಫ್ಐ ಬ್ಯಾನ್ (Central Govt bans PFI) ಮಾಡಿ ಎಂದು ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಕೇಳಿದ್ವಿ. ಆದರೆ, ಅವರು ನಿಮ್ಮದೇ ಕೇಂದ್ರ ಸರ್ಕಾರ (Central Government) ಇದೆ ಮಾಡಿಸಿ ಎಂದು ಹೇಳಿದ್ರು. ಇದೀಗ ನಮ್ಮ ಕೇಂದ್ರ ಸರ್ಕಾರವು (Central Govt bans Popular Front of India) ತಕ್ಷಣದಿಂದಲೇ ಜಾರಿಗೆ ಬರುವಂತೆ PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (EX Minister KS Eswarappa) ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸಿರಲಿಲ್ಲ. ಆದರೆ, ಆಗ ರಾಜ್ಯದಿಂದ ಕೇಂದ್ರಕ್ಕೆ ಯಾವುದೇ ವರದಿ ನೀಡಿರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಬಳಿಕ ಕೇಂದ್ರಕ್ಕೆ ವರದಿ ಕಳುಹಿಸಿದೆ. ಪಿಎಫ್ಐ ಮತ್ತೆ ಬೇರೆ ಹೆಸರಿನಲ್ಲಿ ಬಂದ್ರೆ ‘ನಮ್ಮ ಸಿಂಹ ಅಮಿತ್ ಶಾ’ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದ್ರೋಹಿಗಳಿಗೆ ಅಮಿತ್ ಶಾ ಬಿಸಿ
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು ಪಿಎಫ್ಐ ನಿಷೇಧ ಮಾಡಲಾಗಿದೆ. ಪಿಎಫ್ಐ ದೇಶದ್ರೋಹ ಚಟುವಟಿಕೆ ನಡೆಸುತ್ತಿತ್ತು. ದೇಶದ್ರೋಹಿಗಳಿಗೆ ಅಮಿತ್ ಶಾ ಸರಿಯಾದ ಬಿಸಿ ಮುಟ್ಟಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ : PFI Ban : ಪಿಎಫ್ಐ ನಿಷೇಧ : ಸಿಟಿ ರವಿ ಈ ರೀತಿ ಹೇಳಿದ್ದೇಕೆ ; ಈ ಸುದ್ದಿ ಓದಿ
ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ

ಕೇಂದ್ರ ಸರ್ಕಾರದ ಪಿಎಫ್ಐ ನಿಷೇಧ ತೀರ್ಮಾನವು ದೇಶದ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ. ಭಗತ್ ಸಿಂಗ್ ಜನ್ಮ ದಿನದಂದು ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಆ ಮೂಲಕ ಭಗತ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗುವ ಕಾರ್ಯವಾಗಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ನಗು ನಗುತ್ತ ಪಾಕಿಸ್ತಾನ ಪಡೆದುಕೊಂಡ್ವಿ..!
ಪಿಎಫ್ಐ ವಿದೇಶದಿಂದ ಹಣ ಪಡೆದು ದ್ರೋಹ ಎಸಗುತ್ತಿತ್ತು. ದೇಶದ್ರೋಹ ಚಟುವಟಿಕೆ ನಡೆಸುತ್ತಿತ್ತು. ‘ನಗು ನಗುತ್ತ ಪಾಕಿಸ್ತಾನ ಪಡೆದುಕೊಂಡ್ವಿ, ಹೋರಾಟ ಮಾಡಿ ಹಿಂದೂಸ್ಥಾನ್ ಪಡೆಯುತ್ತೇವೆ’ ಎಂಬ ಘೋಷಣೆಯನ್ನು ಅವರು ಹಾಕುತ್ತಿದ್ದರು. ದೇಶದ್ರೋಹಿಗಳಿಗೆ ಅಮಿತ್ ಶಾ ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ಅಮಿತ್ ಶಾ ಅವರು ರಾಷ್ಟ್ರದ್ರೋಹವನ್ನ ಸಹಿಸಲ್ಲ, ಪಿಎಫ್ಐ ನಿಷೇಧಕ್ಕೆ ರಾಜಕೀಯ ತರಬಾರದು ಎಂದರು.
ಇದನ್ನೂ ಓದಿ : Central Govt bans PFI : ಪಿಎಫ್ಐ ನಿಷೇಧ : ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ..!
ಹರ್ಷ ಕೊಲೆ ಪ್ರಕರಣ ಹಾಗೂ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕ ಇರುವುದು ಪತ್ತೆಯಾಗಿತ್ತು. ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶವಿಲ್ಲ. ಮುಸಲ್ಮಾನ ಹಿರಿಯರಿಗೆ ಮನವಿ ಮಾಡುತ್ತೇನೆ. ನಿಮ್ಮ ಯುವಕರಿಗೆ ದೇಶದ್ರೋಹ ಚಟುವಟಿಕೆ ನಡೆಸದಂತೆ ತಿಳಿಸಿ. ನೀವೆಲ್ಲಾ ದೇಶ ಭಕ್ತರಿಗೆ ಪ್ರೇರಣೆ ನೀಡಬೇಕು ಎಂದರು.
ಗೂಂಡಾಗಳಿಗೆ ಮೋದಿ ಬ್ರೇಕ್ ಹಾಕಿದ್ದಾರೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ 22 ಹಿಂದೂ ಯುವಕರ ಕೊಲೆಯಾಗಿತ್ತು. ಮಸಲ್ಮಾನರನ್ನು, ಗೂಂಡಾಗಳನ್ನು ಕಾಂಗ್ರೆಸ್ನವರು ಬೆಳೆಸಿಕೊಂಡು ಬಂದರು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಡಿವಾಣ ಹಾಕಿದ್ದಾರೆ ಎಂದು ಪರೋಕ್ಷವಾಗಿ ಸಿದ್ರಾಮಯ್ಯರಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನಿ ಮೋದಿಗೆ ಧನ್ಯವಾದ..!

vಪಿಎಫ್ಐ ನಿಷೇಧಿಸಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬಸವರಾಜ್ ಎಸ್. ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ನಿಷೇಧಿತ ಕೆ.ಎಫ್.ಡಿ ಮತ್ತು ಸಿಮಿ ಸಂಘಟನೆಗಳ ರೂಪಾಂತರಿಯೇ ಈ ಪಿ.ಎಫ್.ಐ. ಈ ದೇಶದ ಕಾನೂನು ಹಾಗೂ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಈ ಸಂಘಟನೆ, ವಿದೇಶಗಳಿಂದ ಬರುವ ಆಜ್ಞೆಯ ಪ್ರಕಾರ ಹಲವಾರು ವಿಧ್ವಂಸಕ ಚಟುವಟಿಕೆಯಲ್ಲಿ ಭಾಗಿಯಾಗಿದೆ. ಈ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಈ ಮಹತ್ವದ ಕ್ರಮವನ್ನು ಕೈಗೊಂಡ ಪ್ರಧಾನಿ Narendra Modi, ಕೇಂದ್ರ ಗೃಹ ಸಚಿವ Amit Shah ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.