ನವದೆಹಲಿ : ಜುಲೈ 8 (July 8). ಅಂದು ಇಡ ವಿಶ್ವವೇ ಮೌನಕ್ಕೆ ಜಾರಿದ ದಿನವದು. ವಿಶ್ವದ ಬಲಿಷ್ಠ ಜಪಾನ್ ದೇಶದ ಮಾಜಿ ಪ್ರಧಾನಿ (Japanese Ex Prime Minister) ಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ದಾಳಿಕೋರನ ಗುಂಡೇಟಿಗೆ ಬಲಿಯಾದ ದಿನ. ಈ ಘಟನೆ ನಡೆದು ಇಂದಿಗೆ ಬರೋಬ್ಬರಿ ಎರಡು ವರ್ಷ ಉರುಳಿತು. ಇಂದು ಮತ್ತೆ ಆ ಮಾಜಿ ಪ್ರಧಾನಿಯ (Ex Prime Minister) ಅಂತಿಮ ಸಂಸ್ಕಾರ (Japanese Ex PM funeral). ಈ ಕ್ಷಣ ಐತಿಹಾಸಿಕ ಬೆಸುಗೆಗೆ ಸಾಕ್ಷಿಯಾಗಿದೆ.
Prime Minister Narendra Modi pays respect to former Japanese PM Shinzo Abe at the latter's State funeral in Tokyo
— ANI (@ANI) September 27, 2022
"India is missing former Japanese PM Shinzo Abe," said PM Modi earlier today
(Source: DD) pic.twitter.com/cO5SnswgGQ
ಹೌದು, ಇಂದು ಜಪಾನ್ ಮಾಜಿ ಪ್ರಾಧನಿ ಶಿಂಜೊ ಅಬೆ (Japanese Ex Prime Minister Shinzo Abe) ಅಂತ್ಯಕ್ರಿಯೆ (Shinzo Abe funeral). ಅಗಲಿದ ಸ್ನೇಹಿತನಿಗೆ ಭಾರತದ ಪ್ರಧಾನಿ (Prime Minister) ನರೇಂದ್ರ ಮೋದಿ (PM Narendra Modi) ಅವರು ಹೃದಯಪೂರ್ವಕ ಸಂತಾಪ ಸಲ್ಲಿಸಿದ್ದಾರೆ. ಆ ಮೂಲಕ ಸಹೋದರತೆಯ ಸಂದೇಶವನ್ನು ಸಾರಿದ್ದಾರೆ.
ಭಾರತ ಅಬೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ
ಮಾಜಿ ಪ್ರಾಧನಿ ಶಿಂಜೊ ಅಬೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಭಾರತೀಯರು ಅಬೆ ಹಾಗೂ ಜಪಾನ್ ಇಬ್ಬರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ’ ಎಂದು ಜಪಾನ್ ಪ್ರಧಾನಿಯೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Landed in Tokyo. pic.twitter.com/8L4VNNVOUL
— Narendra Modi (@narendramodi) September 26, 2022
ಅಬೆ ಅಗಲಿಕೆಯಿಂದ ವೈಯಕ್ತಿಕ ನಷ್ಟ
ತಮ್ಮ ಆತ್ಮೀಯ ಗೆಳೆಯ, ಜಪಾನಿನ ದಿವಂಗತ ಪ್ರಧಾನಿ ಶಿಂಜೊ ಅಬೆ (Japanese Prime Minister Shinzo Abe) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಸಂತಾಪ ಸೂಚಿಸಿದ್ದಾರೆ. ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ (Fumio Kishida) ಅವರನ್ನು ಭೇಟಿ ಮಾಡಿದ ಮೋದಿ, ಅಬೆ ತಮ್ಮ ಆತ್ಮೀಯ ಗೆಳೆಯರಾಗಿದ್ದು ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಫುಮಿಯೊ ಕಿಶಿಡಾ ಭೇಟಿ
Had a fruitful meeting with PM Kishida. We discussed various bilateral subjects. I conveyed my condolences on the tragic demise of former PM Shinzo Abe. @kishida230 pic.twitter.com/B46HQ4tbca
— Narendra Modi (@narendramodi) September 27, 2022
ಇಂದು ನಾವು ದುಃಖದ ಸಮಯದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರನ್ನು ಪ್ರಧಾನಿ ನರೇಮದ್ರ ಮೋದಿ ಅವರು ಭೇಟಿಯಾಗಿದ್ದಾರೆ. ಈ ವೇಳೆ, ಕಳೆದ ಬಾರಿ ನಾನಿಲ್ಲಿಗೆ ಬಂದಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೆ. ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಭಾರತೀಯರು ಅಬೆ ಹಾಗೂ ಜಪಾನ್ ಇಬ್ಬರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಜಪಾನ್ ಪ್ರಧಾನಿಯೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಪ್ರಧಾನಿ ನರೇಮದ್ರ ಮೋದಿ ಅವರು ಸ್ಮರಿಸಿದ್ದಾರೆ.
ಇದನ್ನೂ ಓದಿ : Prime Minister Narendra Modi : ಪ್ರಪಂಚದ ಆರ್ಥಿಕತೆಗೆ ಭಾರತ ಸೆಡ್ಡು ಹೊಡೆಯುತ್ತಿದೆ : ಪ್ರಧಾನಿ ನರೇಂದ್ರ ಮೋದಿ
PM Narendra Modi meets his Japanese counterpart Fumio Kishida in Tokyo
— ANI (@ANI) September 27, 2022
PM Modi to further attend the State funeral of former Japanese PM Shinzo Abe, today pic.twitter.com/3NdGi2J4H7
ಭಾರತ-ಜಪಾನ್ ಸಂಬಂಧ ಗಟ್ಟಿಯಾಗಲಿದೆ
ಶಿಂಬೋ ಅಬೆ ಭಾರತ ಮತ್ತು ಜಪಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅದನ್ನು ಇತರ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. ಜಾಗತಿಕ ದೃಷ್ಟಿಕೋನದ ಬೆಳವಣಿಗೆಯಲ್ಲಿ ನಮ್ಮ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ. ಅವರು ಮಾಡಿದ ಎಲ್ಲಾ ಉತ್ತಮ ಕೆಲಸಗಳಿಗಾಗಿ ಭಾರತದ ಜನರು ಅಬೆ ಸಾನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ನಿಮ್ಮ ನಾಯಕತ್ವದಲ್ಲಿ ಕೂಡ ಭಾರತ-ಜಪಾನ್ ಸಂಬಂಧಗಳು (India-Japan ties) ಬಲವಾಗಿ ಬೆಳೆದು ಹೊಸ ಎತ್ತರಕ್ಕೆ ತಲುಪಲಿವೆ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದು ಅವರು ಹೇಳಿದ್ದಾರೆ.
ಜುಲೈ 8, ಜಪಾನ್ ಜನತೆಗೆ ಕರಾಳ ದಿನ
ಜುಲೈ 8 ಜಪಾನ್ ದೇಶದ ಜನತೆಗೆ ಕರಾಳ ದಿನವೆಂದೇ ಹೇಳಬಹುದು. ಅಂದು ಜಪಾನ್‌ನ ನಾರಾ ನಗರದಲ್ಲಿ ಮಾಜಿ ಪ್ರಾಧನಿ ಶಿಂಜೊ ಅಬೆ ಬಗ್ಗೆ ಪ್ರಚಾರ ಭಾಷಣ ಮಾಡುತ್ತಿದ್ದರು. ಈ ವೇಳೆ ದಾಳಿಗೊಳಗಾದ ಅಬೆ ನಂತರ ಇಹಲೋಕ ತ್ಯಜಿಸಿದರು. ಇಂದು ಅಬೆ ಅವರ ಅಂತಿಮ ಸಂಸ್ಕಾರ ನಡೆದಿದ್ದು, ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.