ನವದೆಹಲಿ: ಭಾರತೀಯ ನೌಕಾಪಡೆಯು (India’s Naval Revolution) 2047ರ ವೇಳೆಗೆ ಸಂಪೂರ್ಣ ಸ್ವಾವಲಂಬಿಯಾಗಲಿದೆ ಎಂದು ನೌಕಾಪಡೆಯ ಮುಖ್ಯಸ್ಥ ( Navy Chief) ಅಡ್ಮಿರಲ್ ಆರ್.ಹರಿಕುಮಾರ್ (Navy Chief Admiral R Hari Kumar) ಹೇಳಿದ್ದಾರೆ.

(‘We have combat-ready units deployed on specific missions. The Navy’s footprints have expanded to where our interests lie. In the past seven years, 29 ships have been constructed in India. The aim is to become fully atmanirbhar (self-reliant) by 2047’, the Navy Chief said.)
ರಕ್ಷಣಾ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿರುವ, ಆರ್.ಹರಿಕುಮಾರ್ (R Hari Kumar) ಅವರು, ಸಂಘರ್ಷದಿಂದ ತನ್ನ ದೇಶವನ್ನು ರಕ್ಷಿಸಲು ಆತ್ಮನಿರ್ಭರವಾಗಿರುವುದು ಅಗತ್ಯವಾಗಿದೆ. ಹಡಗುಗಳು, ಜಲಾಂತರ್ಗಾಮಿ, ವಿಮಾನ, ಮಾನವರಹಿತ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಒಳಗೊಂಡಂತೆ ಕೆಲವೇ ವರ್ಷಗಳಲ್ಲಿ ನಾವು ಸಂಪೂರ್ಣ ಸ್ವಾವಲಂಬಿ ನೌಕಾಪಡೆ ಹೊಂದಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Prime Minister Narendra Modi : ಪ್ರಪಂಚದ ಆರ್ಥಿಕತೆಗೆ ಭಾರತ ಸೆಡ್ಡು ಹೊಡೆಯುತ್ತಿದೆ : ಪ್ರಧಾನಿ ನರೇಂದ್ರ ಮೋದಿ
ಚೀನಾ ಈಗಲೂ ಅಸಾಧಾರಣ ಸವಾಲು
ಗಡಿಯಲ್ಲಿ ಭಾರತಕ್ಕೆ ಚೀನಾ ಈಗಲೂ ಅಸಾಧಾರಣ ಸವಾಲಾಗಿದೆ. ಜೊತೆಗೆ, ಭಯೋತ್ಪಾದನೆಯು ದೇಶಕ್ಕೆ ಪ್ರಮುಖ ಭದ್ರತಾ ಬೆದರಿಕೆಯಾಗಿದೆ ಎಂದು ಇದೇ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ತಿಳಿಸಿದ್ದಾರೆ.
ಸಶಸ್ತ್ರ ಕಾರ್ಯಾಚರಣೆ ಇಲ್ಲದೆಯೇ ಯುದ್ಧ

ಚೀನಾ ಅಸಾಧಾರಣ ಸವಾಲಾಗಿ ಉಳಿದಿದೆ ಮತ್ತು ಭೂಮಿಯ ಮೇಲೆ ಮಾತ್ರವಲ್ಲದೇ ಸಮುದ್ರದ ಗಡಿಗಳಲ್ಲಿಯೂ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ಸಂಭಾವ್ಯ ಎದುರಾಳಿಗಳೊಂದಿಗಿನ ಯುದ್ಧವನ್ನು ತಳ್ಳಿಹಾಕಲಾಗುವುದಿಲ್ಲ. ಆದರೆ, ಸಶಸ್ತ್ರ ಕಾರ್ಯಾಚರಣೆ ಇಲ್ಲದೆಯೇ ಯುದ್ಧವಾಗಬಹುದು ಎಂದು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : Chandra Arya : ಹಿಂದೂ ದೇವಾಲಯಗಳ ಮೇಲೆ ದಾಳಿ ; ಮತ್ತೆ ಸಂಸತ್ತಿನಲ್ಲಿ ಘರ್ಜಿಸಿದ ಚಂದ್ರ..!
ಸವಾಲುಗಳ ಮಧ್ಯೆ ಭಯೋತ್ಪಾದನೆ..!
ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟಿನ ನಡುವೆಯೂ ತನ್ನ ಮಿಲಿಟರಿ ಆಧುನೀಕರಣ (On Pakistan, he said despite facing an economic crisis) ಮುಂದುವರೆಸಿದೆ. ಸಾಂಪ್ರದಾಯಿಕ ಮಿಲಿಟರಿ ಸವಾಲುಗಳ ಮಧ್ಯೆ ಭಯೋತ್ಪಾದನೆಯು ಒಂದು ಪ್ರಮುಖ ಭದ್ರತಾ ಬೆದರಿಕೆಯಾಗಿ ಉಳಿದಿದೆ. ಅದು ಆಕಾರ, ಪ್ರಮಾಣ ಮತ್ತು ಗಾತ್ರದಲ್ಲಿ ವಿಕಸನಗೊಳ್ಳುತ್ತಲೇ ಇದೆ. ಇಂಥ ಅದೃಶ್ಯ ಶತ್ರುಗಳಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕಾಗುತ್ತದೆ ಎಂದು ಆರ್. ಹರಿಕುಮಾರ್ ತಿಳಿಸಿದ್ದಾರೆ.