ನವದೆಹಲಿ : ಕಿಂಗ್ ಕೊಹ್ಲಿ (King Kohli) ಅಂದ್ರೆ ಸುಮ್ಮೆನಾ ಗುರೂ. ಫಾರ್ಮ್‌ನಲ್ಲಿ ಇದ್ರೂ, ಇಲ್ಲದೇ ಇದ್ರೂ ಮಾರ್ಕೆಟ್‌ನಲ್ಲಿ ಡೆಲ್ಲಿ ಭಾಯ್ ದರ್ಬಾರ್ ಜೋರಾಗಿಯೇ ಇರುತ್ತೆ. ಅಂದರಂತೆಯೇ ಇದೀಗ ತಮ್ಮ ವಿಭಿನ್ನ ಹೇರ್‌ಸ್ಟೈಲ್ (Virat Kohli New Haircut) ಮೂಲಕ ವಿರಾಟ್ ಕೊಹ್ಲಿ (Virat Kohli) ಹುಡುಗಿಯರ ದಿಲ್ ಕದ್ದಿದ್ದಾರೆ.

ಹೌದು, ಟೀಂ ಇಂಡಿಯಾ ಮಾಜಿ ನಾಯಕ (Team india Ex Captain) ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಫ್ಯಾಷನ್ ಕ್ರಿಕೆಟಿಗ. ಕಿಂಗ್ ಕೊಹ್ಲಿ ಡ್ರೆಸ್ (ಉಡುಗೆ ತೊಡುಗೆ) ಹೇರ್‌ಸ್ಟೈಲ್ ಎಲ್ಲವೂ ವಿಭಿನ್ನವಾಗಿಯೇ ಇರುತ್ತದೆ. ಇದನ್ನೇ ಫ್ಯಾನ್ಸ್ ಕೂಡ ಫಾಲೋ ಮಾಡ್ತಾರೆ. ಇದೀಗ ಆಗಿರುವುದು ಇದೇ ನೋಡಿ.
ಮುಂಬರುವ ಇಂಡಿಯಾ (ಭಾರತ) ಆಸ್ಟ್ರೇಲಿಯಾ ಸರಣಿಗಾಗಿ ವಿರಾಟ್ ಕೊಹ್ಲಿ ಪಂಜಾಬ್ಗೆ ಬಂದಿಳಿದಿದ್ದಾರೆ. ಈ ವೇಳೆ ಕೊಹ್ಲಿ ಕೂದಲ ಹೊಸ ವಿನ್ಯಾಸ ಅಭಿಮಾನಿಗಳ ಗಮನ ಸೆಳೆದಿದೆ. ಪತ್ನಿ ಅನುಷ್ಕಾ ಶರ್ಮಾ ಸಹ ಪತಿಯ ನ್ಯೂ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಇದನ್ನೂ ಓದಿ : IND vs PAK : ಬದ್ಧ ವೈರಿಗಳ ಕಾಳಗ ನೋಡಲು ಕ್ಷಣಗಣನೆ ; ಟಿಕೆಟ್‌ಗಳು ಸೋಲ್ಡ್ ಔಟ್..!
ಹೇರ್‌ಸ್ಟೈಲ್‌ಗೆ ಫ್ಯಾನ್ಸ್ ಫಿದಾ..!
ಟೆಸ್ಟ್ ಇರಲಿ, ಏಕದಿನ ಇರಲಿ, ಟಿ-20 ಇರಲಿ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್. ಬ್ಯಾಟ್ ಬೀಸಿದ್ರೂ ಸುದ್ದಿ, ಸೊನ್ನೆ ಸುತ್ತಿದ್ರೂ ಸುದ್ದಿಯಲ್ಲಿರುತ್ತಾರೆ. ಏಷ್ಯಾ ಕಪ್ನಲ್ಲಿ ಭರ್ಜರಿ ಶತಕದ ಮೂಲಕ ಫಾರ್ಮ್ಗೆ ಮರಳಿರುವ ವಿರಾಟ್ ವಿಶ್ವಕಪ್ ಸಿದ್ಧತೆಯಲ್ಲಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಾಡಿದ್ದಿನಿಂದ ಸ್ಟಾರ್ಟ್ ಆಗಲಿರುವ ಟಿ-20 ಸರಣಿಯನ್ನು ಎದುರಿಸಲಿದ್ದಾರೆ.
ನ್ಯೂ ಹೇರ್‌ಸ್ಟೈಲ್‌ನಲ್ಲಿ ರನ್ ಮಷಿನ್

ಕಾಂಗರೂ (ಆಸ್ಟ್ರೇಲಿಯಾ) ಸರಣಿಯ ಮೊದಲ ಟಿ-20 ಪಂದ್ಯ ಪಂಜಾಬ್ನ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊಹಾಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿರಾಟ್ ಕೊಹ್ಲಿ ತಮ್ಮದೇ ಫ್ಯಾಷನ್ನಿಂದಾಗಿ ಗಮನ ಸೆಳೆದಿದ್ದಾರೆ. ರನ್ ಮಷಿನ್ ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದಾರೆ. ವಿಶ್ವಕಪ್ಗೂ ಮೊದಲು ವಿರಾಟ್ರ ಹೊಸ ಹೇರ್ಸ್ಟ್ರೈಲ್ ಅಭಿಮಾನಿಗಳ ಗಮನ ಸೆಳೆದಿದೆ.
ಇದನ್ನೂ ಓದಿ : Virat Kohli : ಧೋನಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟು ಫ್ಯಾನ್ಸ ದಿಲ್ ಕದ್ದ ಕಿಂಗ್ ಕೊಹ್ಲಿ..!
Wakhri jehi tor ae.. 🤩 @imVkohli #IndvsAus #ViratKohli pic.twitter.com/HWSGaTwwT0
— Punjab Cricket Association (@pcacricket) September 18, 2022
ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಹವಾ..!
ಮೊಹಾಲಿ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಬಂದಿಳಿದ ವಿಡಿಯೋವನ್ನು ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ನ್ಯೂ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಕಿಂಗ್ ಕೊಹ್ಲಿ ದಿಲ್ ಕದ್ದಿದ್ದು ಇವರೇ..!

ನ್ಯೂ ಹೇರ್‌ಸ್ಟೈಲ್‌ನಿಂದ ವಿರಾಟ್ ಫ್ಯಾನ್ಸ್ ಮೆಚ್ಚುಗೆ ಪಡೆದಿದ್ದಾರೆ. ಆದ್ರೆ, ವಿರಾಟ್ ಯಾರ ದಿಲ್ ಕದ್ದ ಹೇರ್ ಸ್ಟೈಲಿಸ್ಟ್ ಯಾರು ಗೊತ್ತಾ? ಅವರೇ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ರಶೀದ್ ಸಲ್ಮಾನಿ. ವಿರಾಟ್ ಕೊಹ್ಲಿಯ ಕೂದಲಿಗೆ ನ್ಯೂ ಲುಕ್ ತಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಶೀದ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿಯಾಗಿ ಕಮೆಂಟ್ ಮಾಡಿದ್ದು, ಮೆಚ್ಚಿಕೊಂಡಿದ್ದಾರೆ.
ಭರ್ಜರಿ ಫಾರ್ಮ್‌ನಲ್ಲಿರುವ ಡೆಲ್ಲಿ ಟೈಗರ್
ಇನ್ನೂ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ 3 ವರ್ಷಗಳ ಬಳಿಕ ಅಂದರೆ 1,020 ದಿನಗಳ ನಂತರ ಶತಕ ಬಾರಿಸಿದ್ದಾರೆ. ಇದೀಗ ಕಾಂಗರೂ ನಾಡಿನಲ್ಲಿ ನಡೆಯುವ ಟಿ-20 ವಿಶ್ವಕಪ್ಗೆ ತಾವು ರೆಡಿ ಎಂಬ ಎಚ್ಚರಿಕೆಯ ಮೆಸೇಜ್ ಪಾಸ್ ಮಾಡಿದ್ದಾರೆ.