ನವದೆಹಲಿ : ಚಂಡೀಗಡದಲ್ಲಿ (incident of Chandigarh University) ಹಾಸ್ಟೆಲ್ ವಿದ್ಯಾರ್ಥಿನಿಯರ (Hostel Students) ಖಾಸಗಿ ವಿಡಿಯೋಗಳು (Videos) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, (Viral Videos) ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪಂಜಾಬ್ ಮುಖ್ಯಮಂತ್ರಿ (Chief Minister of Punjab) ಭಗವಂತ್ ಮಾನ್ (CM Bhagwant Mann)ಆದೇಶಿಸಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಸಿಎಂ ಭಗವಂತ್ ಮಾನ್ ಅವರು, ‘ಈ ಅಹಿತಕರ ಘಟನೆಯ ಬಗ್ಗೆ ಕೇಳಿ ಬೇಸರವಾಗಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದುವರಿದು, ಘಟನೆ ಸಂಬಂಧ ತಪ್ಪಿತಸ್ಥರು ಯಾರೇ ಆಗಿದ್ದರೂ ನಾವು ಬಿಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.
चंडीगढ़ यूनिवर्सिटी की घटना सुनकर दुख हुआ…हमारी बेटियां हमारी शान हैं…घटना की उच्च स्तरीय जांच के आदेश दे दिए हैं..जो भी दोषी होगा सख्त कार्रवाई करेंगे…
— Bhagwant Mann (@BhagwantMann) September 18, 2022
मैं लगातार प्रशासन के संपर्क में हूं…मैं आप सब से अपील करता हूं कि अफवाहों से बचें… https://t.co/kgEGszUhAq
ಇದನ್ನೂ ಓದಿ : DK Shivakumar ED Case : ಡಿಕೆಶಿಗೆ ಮತ್ತೆ ಸಂಕಷ್ಟ ; ಇ.ಡಿ ಸಮನ್ಸ್ ಬಗ್ಗೆ ಶಿವಕುಮಾರ್ ಕಿಡಿ
ದೃಶ್ಯ ಲೀಕ್ ಮಾಡಿದ್ದು ಈ ನೀಚ ಹುಡುಗಿಯೇ..!
We Respect Women as Mata AdiPara Shakti & we worship them as Mahakali.
— #BoycottBrahmastra (@ArnabGoswamy_1) September 18, 2022
It's such a derogatory incident to Punjab.I strongly Condemning this & we want justice to Innocent Victims in Chandigarh University. @Chandigarh_uni #ChandigarhUniversity #Punjab #BoycottChandigarhUniversity pic.twitter.com/x8x4NXd5Ff
ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ 60 ಹುಡುಗಿಯರ ಸ್ನಾನದ ವಿಡಿಯೋ ಸೋರಿಕೆಯಾಗಿದೆ. ಈಗಾಗಲೇ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸರು, ವಿಡಿಯೋ ತೆಗೆದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಸಿಎಂ ಕೇಜ್ರಿವಾಲ್ ಬೇಸರ..!
ತನ್ನ ಸಹಪಾಠಿಗಳ ವಿಡಿಯೋ ಸಂಗ್ರಹಿಸಿರುವ ನೀಚ ಹುಡುಗಿಯ ವಿಚಾರಣೆ ನಡೆಸುತ್ತಿದ್ದು, ಧರಣಿ ನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸುತ್ತಿದ್ದಾರೆ. ಈ ಘಟನೆ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ‘ಇದೊಂದು ಅತ್ಯಂತ ಗಂಭೀರ ಘಟನೆ ಎಂದು ಅರವಿಂದ ಕೇಜ್ರಿವಾಲ್ ಬೇಸರ ವ್ಯಕ್ತಪಡಿದ್ದಾರೆ.
ಇದನ್ನೂ ಓದಿ : Murugha Shree Case : ಮುರುಘಾ ಶ್ರೀಗಳಿಗೆ ಜೈಲಾ? ಬೇಲಾ? ; ಇಂದೇ ಭವಿಷ್ಯ ನಿರ್ಧಾರ..!
ಚಂಡೀಗಢ ವಿವಿಯಲ್ಲಿ ಪ್ರತಿಭಟನೆ
ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ, ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿದ್ದಾರೆ. ಹಾಸ್ಟೆಲ್‌ನಲ್ಲಿ ಸುಮಾರು 60 ಹುಡುಗಿಯರು ಸ್ನಾನ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ, ರಾತ್ರಿ ಪ್ರತಿಭಟನೆ ಪ್ರಾರಂಭವಾಗಿತ್ತು. ಘಟನೆಯ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಹೇಳಿಕೆಯನ್ನು ಪೊಲೀಸರು & ಮತ್ತು ವಿಶ್ವವಿದ್ಯಾಲಯದ ಆಡಳಿತ ತಳ್ಳಿಹಾಕಿದೆ.
ಶಿಕ್ಷಣ ಸಚಿವ ಏನಂದ್ರು ಗೊತ್ತಾ?
ಹಾಸ್ಟೆಲ್‌ನಲ್ಲಿ 60 ಹುಡುಗಿಯರ ಸ್ನಾನದ ವಿಡಿಯೋ ಸೋರಿಕೆಯಾದ ಬಗ್ಗೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಈ ಬಗ್ಗೆ ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಶಿಕ್ಷಣ ಸಚಿವರು, ‘ಯಾವ ತಪ್ಪಿತಸ್ಥರನ್ನು ಬಿಡುವುದಿಲ್ಲ. ವಿವಿಯ ಎಲ್ಲಾ ವಿದ್ಯಾರ್ಥಿಗಳನ್ನು ಶಾಂತವಾಗಿರಲು ನಾನು ವಿನಂತಿಸುತ್ತೇನೆ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಗೆ ಸಂಬಂಧಿಸಿದೆ’ ಎಂದು ಹೇಳಿದ್ದಾರೆ.