ಬೆಂಗಳೂರು( ಸೆ. 16): ಸ್ವಾರ್ಥ ಎಂಬ ಪದ ಎಷ್ಟು ಮೌಲ್ಯಯುತವಾಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಸ್ವಾರ್ಥ ಎಂಬುವುದು ಎಂಬುವುದು ತನ್ನದೇ ಆದ ಅರ್ಥ ಪಡೆದುಕೊಳ್ಳುತ್ತಿರುತ್ತದೆ. ಅದೇನೇ ಇದ್ದರೂ ಕೆಲವೊಮ್ಮೆ ಪಡೆದುಕೊಳ್ಳುವ ಹಂಬಲವಿದ್ದರೆ ಸ್ವಾರ್ಥ ಎಂಬುವುದು ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ. ಕೆಲವೊಮ್ಮೆ ಈ ಜಗತ್ತೇ ಸ್ವಾರ್ಥ ತುಂಬಿದ ಜಗತ್ತು ಎಂದು ಅನಿಸಲು ಶುರುವಾಗುತ್ತದೆ. ಸರಿಯಾಗಿ ನೋಡಿದರೆ, ಸ್ವಾರ್ಥ ಎನ್ನುವುದು ಮನುಷ್ಯರಾದ ನಮಗೆ ಇರಲೇಬೇಕಾದ ಗುಣಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಯೋಗಿ ಆದಿತ್ಯನಾಥ್ | ದಸರಾದಲ್ಲಿ ಪುನೀತ್ ರಾಜ್‍ಕುಮಾರ್ ಸ್ತಬ್ಧಚಿತ್ರ | ಪ್ರಧಾನಿ ಮ್ಯಾಗ್ಡಲೀನಾ ರಾಜೀನಾಮೆ..!
ನಾನ್ಯಾಕೆ ಸಹಾಯ ಮಾಡ್ಲಿ..?
ಪ್ರತಿಯೊಬ್ಬರಿಗೂ ತಾನು ಜೀವನದಲ್ಲಿ ಮುಂದೆ ಬರಬೇಕು ಎಂಬ ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತದೆ. ಇದ್ಕಕಾಗಿ ಪಡದ ಕಷ್ಟಗಳಿಲ್ಲ ಅಂತ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಎಲ್ಲವೂ ತನಗೇ ಬೇಕು ಅನ್ನೋ ಸ್ವಾರ್ಥದ ಬದುಕು ಅದೆಷ್ಟೇ ಮುಂದುವರೆದರೂ ಮುಂದಿನ ದಿನಗಳಲ್ಲಿ ಏನೂ ಮಾಡಲಾಗದ ಸ್ಥಿತಿ ಬಂದರೂ ಬರಬಹುದು. ಕೆಲವೊಮ್ಮೆ ಸ್ವಾರ್ಥಗಳು ನೋವೇ ಕೊಡಲು ಶುರುವಾಗುತ್ತದೆ.ಈ ಸಂದರ್ಭದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಇರುವ ಜನರೇ ಹೆಚ್ಚಾಗಿದ್ದಾರೆ. ಕೆಲವೊಬ್ಬರು ಇನ್ನೊಬ್ಬರ ಕಷ್ಟಗಳಿಗೆ ಅವರೇ ಹೊಣೆ ನಾನೇಕೆ ಸಹಾಯ ಮಾಡಬೇಕು ಎಂಬ ಮನೋಭಾವ ಇಟ್ಟುಕೊಂಡಿರುತ್ತಾರೆ.
ಸ್ವಲ್ಪ ಸ್ವಾರ್ಥ ಬದಿಗಿಟ್ಟು ಪ್ರಪಂಚ ನೋಡೋದಾದ್ರೆ…?
ನನಗೇನೂ ತೊಂದರೆಯಾಗದಿದ್ದರೆ ಸಾಕು, ಬೇರೆಯವರಿಗೆ ಏನು ಬೇಕಾದರೂ ಆಗಲಿ. ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೆಲವರು ವರ್ತಿಸುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರಿಗೆ ಅಗತ್ಯ ಸಂದರ್ಭದಲ್ಲಿ ನೆರವು ನೀಡುತ್ತಾರೆ, ಆದರೆ ಅದಕ್ಕೆ ಪ್ರತಿಯಾಗಿ ಅವರಿಂದ ಬೇರೇನಾದರೂ ನಿರೀಕ್ಷಿಸುತ್ತಾರೆ. ಇಂಥ ವರ್ತನೆಗಳಿಗೆ ಮೂಲ ಕಾರಣ ಸ್ವಾರ್ಥ. ಎಷ್ಟೋ ಬಾರಿ ನಮಗೆ ತಿಳಿಯದಂತೆ ನಮ್ಮೊಳಗೆ ಅಡಗಿ ಕುಳಿತಿರುವ ಸ್ವಾರ್ಥಿಯೊಬ್ಬ ಎದ್ದು ನಿಲ್ಲುತ್ತಾನೆ ಇದು ನಮಗೆ ಗೊತ್ತಾಗದೇ ಇದ್ದರೂ ಸತ್ಯ. ನನ್ನದು ಎಂಬ ಸ್ವಾರ್ಥ ನಮ್ಮೊಳಗಿನ ಪ್ರೀತಿ, ಸಹಕಾರ, ಕರುಣೆ ಎಂಬ ಭಾವನೆಗಳನ್ನು ಕೊಂದು ಹಾಕುತ್ತದೆ. ಅಷ್ಟೇ ಅಲ್ಲ, ಸ್ವಾರ್ಥ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಕೂಡ.
ಸ್ವಾರ್ಥ ದೂರ ಮಾಡೋದು ಹೇಗೆ..?
ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ ನಮ್ಮ ಗುರಿ ತಲುಪಬಹುದು. ತನ್ನದೇ ನೋವು ಸಾವಿರ ಅಂತ ಅಂದುಕೊಂಡು ಜೀವನದ ನಡೆಸಿಕೊಂಡು ಹೋಗುತ್ತಿರುವುದಕ್ಕಿಂತ ತನಗಿಂತ ಇನ್ನೂ ಕಷ್ಟದ ಬದುಕು ಸಾಗಿಸುವ ಜನ ಇದ್ದಾರೆ ಎಂದು ಅಂದುಕೊಂಡು ಜನ ಸೇವೆಯಲ್ಲಿ ತೊಡಗಿದರೆ ಯಶಸ್ಸಿಗಿಂತ ದುಪ್ಪಟ್ಟು ಜೀವನದಲ್ಲಿ ಖುಷಿ ಕಾಣಬಹುದು. ಇನ್ನೊಬ್ಬರ ಮುಖದಲ್ಲಿ ನಗು ತರುವ ಭಾಗ್ಯ ಯಾರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಕೆಲವರು ಎಷ್ಟೊಂದು ಸ್ವಾರ್ಥಿಗಳೆಂದರೆ, ತನ್ನ ಜೊತೆಯಿರುವವರನ್ನೂ ಕೂಡ ತನ್ನದೇ ಸೂಚನೆಯಂತೆ ನಡೆಯುವಂತೆ ನೋಡಿಕೊಳ್ಳುತ್ತಾರೆ, ಇಂತವರನ್ನು ನೋಡಿದರೆ ಅಬ್ಬಾ ಇಂತಹ ಮನಸ್ಸುಗಳೂ ಇದಾವ ಅಂತ ಪ್ರಶ್ನೆ ಮೂಡಲು ಶುರುವಾಗುತ್ತದೆ. ಅಲ್ವಾ..ಇದೊಂಥರಾ ಸ್ವಾರ್ಥನಾ..?
ಇದನ್ನೂ ಓದಿ: ಕೈಗಾರಿಕಾ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯ : ಸಿಎಂ ಬೊಮ್ಮಾಯಿ