ಬೆಂಗಳೂರು : ‘ನಾವು ಯಾರು ಯಾರನ್ನೋ ಕರೆದುಕೊಂಡು ಬಂದು ಸರ್ಕಾರ (BJP Government) ರಚಿಸಿದ್ದೇವೆ. ಜಸ್ಟ್ ಎಂಟು (8 ಎಂಎಲ್‌ಎ) ಮಂದಿ ಶಾಸಕರು (8 MLAs) ರಾಜೀನಾಮೆ ಕೊಟ್ರೆ ಸಾಕು ಸರ್ಕಾರ (Karnataka State BJP Government) ಬಿದ್ದು ಹೋಗುತ್ತೆ ಎಂದು ಬಿಜೆಪಿ ಸಂಸದ (BJP MP) ಡಾ.ಜಿ.ಎಂ ಸಿದ್ದೇಶ್ವರ್ (Dr. GM Siddeshwara) ಅಚ್ಚರಿ ಹೇಳಿಕೆ ನೀಡಿದ್ದಾರೆ.

ಹೌದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತವಿಲ್ಲದೆ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದೆ. ಈ ಬಗ್ಗೆಯೇ ಸಂಸದ ಸಿದ್ದೇಶ್ವರ್ ಅವರು ಹೇಳಿಕೆ ನೀಡಿದ್ದು, ಬಿಜೆಪಿ ಅಂಡ್ ಟೀಂಗೆ ಮುಜುಗರ ತರಿಸಿದೆ.
ದಾವಣಗೆರೆ ಜಿಲ್ಲೆಯ ಆನೆಗೋಡು ಗ್ರಾಮದಲ್ಲಿನ ‘ರೈತ ಹುತಾತ್ಮರ ಸ್ಮಾರಕ’ದಲ್ಲಿ ಹುತಾತ್ಮ ರೈತರ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ : Goa Politics Crisis : 8 Goa Congress MLAs join BJP : ‘ಕೈ’ ಕೊಟ್ಟ ಎಂಟು ಶಾಸಕರು ; ಗೋವಾದಲ್ಲಿ ಕಾಂಗ್ರೆಸ್ ವಿಲವಿಲ..!
ಸಂಸದ ಸಿದ್ದೇಶ್ವರ್ ಹೇಳಿದ್ದಿಷ್ಟು..!

ಸಂಸದ ಜಿ.ಎಂ ಸಿದ್ದೇಶ್ವರ್ ಅವರ ಹೇಳಿಕೆಯಿಂದ ಸ್ವಪಕ್ಷದವರೇ ಶಾಕ್‌ಗೆ ಒಳಗಾಗಿದ್ದಾರೆ. ‘ಯಾರ್ಯಾರನ್ನೋ ಕರ್ಕೊಂಡು ಸರ್ಕಾರ ಮಾಡಿದ್ದೇವೆ. ಎಂಡು ಮಂದಿ ಶಾಸಕರು ರಾಜೀನಾಮೆ ನೀಡಿದ್ರೆ ಸರ್ಕಾರ ಬಿದ್ದು ಹೋಗುತ್ತೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ’ ಎಂದು ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಭಾಷಣದ ವೇಳೆ ಹೇಳಿದ್ದಾರೆ.
ಬಹುಮತ ಬಂದಿದ್ರೆ ನಮ್ಮ ಸರ್ಕಾರಕ್ಕೇ..!
ಮುಂದುವರಿದು ಮಾತನಾಡಿರುವ ಅವರು, ‘ಪೂರ್ಣ ಬಹುಮತ ಬಂದಿದ್ದರೆ ನಮ್ಮ ಸರ್ಕಾರಕ್ಕೆ ಬೆಲೆ ಮತ್ತು ಗೌರವ ಇರುತ್ತದೆ. ಇದೀಗ 120 ಶಾಸಕರಲ್ಲಿ 8 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಬಿದ್ದು ಹೋಗುತ್ತದೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ’ ಮತ್ತೆ ಈ ವಿಷಯವನ್ನೇ ಸಂಸದ ಜಿಎಂ ಸಿದ್ದೇಶ್ವರ್ ಒತ್ತಿ ಹೇಳಿದ್ದಾರೆ.
ಬಿಎಸ್‌ವೈ ಸಿಎಂ ಆದ್ರೂ ಬಹುಮತ ಬರಲಿಲ್ಲ
ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಎರಡು ಬಾರಿ ಮುಖ್ಯಮಂತ್ರಿ ಆದರೂ ಪಕ್ಷಕ್ಕೆ ಸಂಪೂರ್ಣ ಬಹುಮತವಿರಲಿಲ್ಲ. ಆದರೆ ಈಗಲೂ ನಾವು ಬೇರೆ ಬೇರೆ ಶಾಸಕರನ್ನು ಕರೆದುಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಪೂರ್ಣ ಬೆಂಬಲದೊಂದಿಗೆ ಸರ್ಕಾರ ಮಾಡಿದರೆ ಗೌರವ ಹಾಗೂ ಬೆಲೆ ಇರುತ್ತದೆ ಎಂದು ಪರೋಕ್ಷವಾಗಿ ಬಿ.ಎಸ್ ಯಡಿಯೂರಪ್ಪ ಅವರನ್ನು ವಿವಾದದಲ್ಲಿ ಸಿಲುಕಿಸಿದ್ದಾರೆ.
ಇದನ್ನೂ ಓದಿ : Sudhakar Singh : ಕೃಷಿ ಇಲಾಖೆ ಕಳ್ಳರಿಗೆ ‘ನಾನೇ ನಾಯಕ’..!

ಅನುದಾನ ನೀಡಲು ಬೊಕ್ಕಸ ಖಾಲಿ..!
ಇನ್ನೂ ರೈತರ ಸಮುದಾಯ ಭವನಕ್ಕೆ ಅನುದಾನ ಕೊಡಿಸುವ ವಿಚಾರ ಕುರಿತು ಮಾತನಾಡಿರುವ ಅವರು, ಕೊರೊನಾ ಹಾಗೂ ನೆರೆ ಹಾವಳಿಯಿಂದ ಸರ್ಕಾರದ ಬಳಿ ಅನುದಾನ ನೀಡಲು ಬೊಕ್ಕಸ ಖಾಲಿಯಾಗಿದೆ. ಆದರೂ ಕೂಡ ರೈತರಿಗೆ ಬೇಕಾದ ಸಮುದಾಯ ಭವನ ಕಟ್ಟಲು ಅನುದಾನ ಕೊಡಿಸಲು ಪ್ರಯತ್ನಿಸುವೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದ್ದಾರೆ.
ಒಟ್ನಲ್ಲಿ, ರಾಜ್ಯ ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಸಕಾರ ರಚನೆ ಮಾಡಿದ್ದು, ವಿರೋಧ ಪಕ್ಷಗಳು ಸದಾ ಇದನ್ನೇ ಪುನರುಚ್ಚರಿಸುತ್ತಾ ಸಿಎಂ ಬೊಮ್ಮಾಯಿ ಅಂಡ್ ಟೀಂಗೆ ಟಾಂಗ್ ಕೊಡ್ತಿವೆ. ಈ ಮಧ್ಯೆಯೇ ಸಂಸದ ಹಾಗೂ ಹಿರಿಯ ನಾಯಕ ಜಿ.ಎಂ ಸಿದ್ದೇಶ್ವರ್ ಅವರ ಈ ಹೇಳಿಕೆ ವಿರೋಧ ಪಕ್ಷಗಳ ಬಾಯಿಗೆ ಆಹಾರವಾದಂತಾಗಿದೆ.
ಆನಗೋಡು ಹತ್ತಿರ ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ಧನೂರು ನಾಗರಾಜಚಾರ್ ರವರ 30ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಲಾಯಿತು.
— Dr. GM Siddeshwara (@GMSBJP) September 13, 2022
ಈ ಸಂದರ್ಭದಲ್ಲಿ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಬಸವರಾಜ್ ನಾಯ್ಕ್ ಇತರರು ಇದ್ದರು. pic.twitter.com/lUUpyTwRwn