ಮೈಸೂರು : (ಆಗಸ್ಟ್ 24) : ಮಾವನೇ (Father in law) ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಸಂತ್ರಸ್ತ ಮಹಿಳೆ ಪತಿ (Husband) ಸೇರಿದಂತೆ ಎಂಟು ಮಂದಿಯ ಮೇಲೆ ಪ್ರಕರಣ (Case) ದಾಖಲಿಸಿದ್ದಾಳೆ.
ಹೌದು, ಹುಣಸೂರು (Hunsur) ನಗರದ ಗೋಕುಲ ರಸ್ತೆ (Gokula Road) ಎನ್.ಎಸ್ ಕ್ವಾಟ್ರರ್ಸ್‌ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಾವನೇ ಸೊಸೆ ಮೇಲೆ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದು ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಮಾವನ ಈ ನೀಚ ಕೃತ್ಯ ಕಂಡ ಗಂಡ ಅದನ್ನು ತಡೆಯಲು ಪ್ರಯತ್ನಿಸಿಲ್ಲ ಎಂದು ಸಂತ್ರಸ್ತೆ ಗಂಡನ ವಿರುದ್ಧ ಆರೋಪ ಮಾಡಿದ್ದಾಳೆ.


ಇದನ್ನೂ ಓದಿ: Crime News: ಶಾಪಿಂಗ್ ಕರೆದುಕೊಂಡು ಹೋಗದಿದ್ದಕ್ಕೆ ನೇಣಿಗೆ ಶರಣಾದ ಬಾಲಕಿ..!
ಎಂಟು ಜನರ ಮೇಲೆ ಪ್ರಕರಣ
ಹುಣಸೂರಿನ ಕಟ್ ನೋಟ್ ವ್ಯಾಪಾರಿ ಇಕ್ಬಾಲ್ ಅಹ್ಮದ್, ತಾಲೂಕಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಸಾಯನ ಶಾಸ್ತ್ರ ಅತಿಥಿ ಉಪನ್ಯಾಸಕ ಹಾಗೂ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ರಶೀದ್ ಅಹ್ಮದ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ.
ಮಹಿಳೆ ಮೇಲೆ ದೈಹಿಕ ಹಲ್ಲೆ


ಒಂದು ವರ್ಷದ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ನೇರಳೆ ಗ್ರಾಮದ ಯುವತಿಯ ಜೊತೆಗೆ ರಶೀದ್ ಅಹ್ಮದ್ ಜೊತೆಗೆ ಮದುವೆಯಾಗಿತ್ತು. ಮದುವೆಯ ಆರು ತಿಂಗಳ ಬಳಿಕ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ, ಅತ್ಯಾಚಾರಕ್ಕೆ ಪ್ರಯತ್ನ ನಡೆಸಲಾಗಿದ್ದು, ಸಹಕರಿಸದ ಹಿನ್ನಲೆ ದೈಹಿಕ ಹಲ್ಲೆ ಸಹ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೊಸೆ ಅತ್ಯಾಚಾರಕ್ಕೆ ಸೊಸೆ ಸುಫಾರಿ?
ಮಾವ ಇಕ್ಬಾಲ್ ಅಹ್ಮದ್ ಎರಡು ಬಾರಿ ಅತ್ಯಾಚಾರಕ್ಕೆ ಪ್ರಯತ್ನಪಟ್ಟಿದ್ದಾನೆ. ಇದಕ್ಕೆ ಅತ್ತೆ ಪರ್ವಿನ್ ತಾಜ್, ನಾದಿನಿ ರಜಿಯಾ ಮತ್ತೊಬ್ಬ ನಾದಿನಿ ಹಸೀನಾ ಆಕೆಯ ಗಂಡ ಕುಶಾಲನಗರ ದನಿನಾ ಪೇಟೆ ಮುಸ್ಲಿಂ ಜಮಾತ್ ಮಸೀದಿ ಸೆಕ್ರೆಟರಿ ಇರ್ಫಾನ್, ಗಂಡನ ಅಣ್ಣಾ ಮೆಕ್ಯಾನಿಕ್ ಮುಕ್ತರ್, ವಾರಗಿತ್ತಿ ಹೂರ್ ಬಾನು ಕುಮ್ಮಕ್ಕು ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಇದನ್ನೂ ಓದಿ: Bus Cruiser Accident : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ; ಸ್ಥಳದಲ್ಲಿಯೇ ಇಬ್ಬರು ಮೃತ


ಕೈಲಾಗದ ಗಂಡ ಎಂದ ಮಹಿಳೆ
ಮನೆಯವರ ಕುಮ್ಮಕ್ಕುನಿಂದ ಮಾವ ಇಕ್ಬಾಲ್ ಅಹ್ಮದ್ ಪದೇ ಪದೆ ತನ್ನ ಮೇಲೆ ಅತ್ಯಚಾರಕ್ಕೆ ಪ್ರಯತ್ನಿಸಿದ್ದಾನೆ. ಇದನ್ನು ಪತಿ ರಶೀದ್ ಅಹ್ಮದ್ ಮುಂದೆ ಹೇಳಿಕೊಂಡರು ಈ ಭೂಪ ಸ್ಪಂದಿಸಿಲ್ಲ. ಪತಿ ಮನೆಯವರ ನೀಚ ವರ್ತನೆ ಕಂಡು ಸಂತ್ರಸ್ತ ಮಹಿಳೆ ತವರು ಮನೆಗೆ ವಿಷಯ ತಿಳಿಸಿದ್ದಾಳೆ. ಇದಾದ ಬಳಿಕ ಟ್ಯಾಲೆಂಟ್ ಸಂಸ್ಥೆ ಮಾಲೀಕರಳ್ಳಿ ಒಬ್ಬರಾದ ನವೀನ್ ರೈ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಇದಕ್ಕೂ ಯಾವುದೇ ಕಿಮ್ಮತ್ತು ಕೊಡದೇ ಮತ್ತೊಮ್ಮೆ ಅತ್ಯಾಚಾರಕ್ಕೆ ಪ್ರಚೊದನೆ ನೀಡುವ ವರ್ತನೆ ಕುಟುಂಬಸ್ಥರು ನೀಡಿದ್ದಾರೆ.
ಜೈಲಿಗೆ ಹೋಗುತ್ತ ಇಡೀ ಕುಟುಂಬ
ಈ ಸಂಬಂಧ ಸಂತ್ರಸ್ತ ಮಹಿಳೆ ಹಲ್ಲೆಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಹುಣಸೂರು ಪಟ್ಟಣ ಠಾಣೆಯಲ್ಲಿ 498A, 354, 504,506, 323,149 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಪ್ರಭಾವ ಬಳಸಿ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಹುರ್ ಬಾನು ಪ್ರಕರಣ ದಾಖಲಾಗುವ ಮುನ್ಸೂಚನೆ ಅರಿತು ದುಬೈಗೆ ಪರಾರಿಯಾಗಿದ್ದಾಳೆ. ಪೊಲೀಸರು ತಲಾಶ್ ಶುರು ಮಾಡಿದ್ದಾರೆ.