ಚಿಕ್ಕಮಗಳೂರು: (ಆ. 05):Accident:ರಾಜ್ಯದಲ್ಲಿ ಮಳೆಯ ಅಲರ್ಟ್ (Rain Alert) ಘೋಷಣೆ ಮಾಡಲಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು (Red ALert)ಭಾಗದಲ್ಲಿ ರೆಡ್ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಜನರು ಎಚ್ಚರಿಕೆಯಿಂದಿರಬೇಕು. ಅನಾವಶ್ಯಕವಾಗಿ ಘಟ್ಟ ಪ್ರದೇಶ ಮತ್ತು ನದಿ ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.
ಇನ್ನು ಅತಿಯಾದ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ತೆರೆಯ ಹಿಂದೆ ಸರಿದಿದ್ದಾನೆ. ಮಳೆ ಮತ್ತು ಮಂಜಿನಿಂದಾಗಿ ರಸ್ತೆಗಳು ಸಹ ಗೋಚರ ಆಗುತ್ತಿಲ್ಲ. ಇದರಿಂದ (Accident)ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಪುರದ ಬಳಿಯ (National Highway) ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರ್, ಪಲ್ಸರ್ ಬೈಕಿಗೆ ರಸ್ತೆ ಪಕ್ಕದಲ್ಲಿರುವ ಮನೆಗೆ ನುಗ್ಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮನೆಯ ಗೋಡೆ ಧರೆಗೆ ಉರುಳಿದ್ದು, ಒಳಗಡೆ ಇದ್ದ ಜನರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಕೆಎ 09 ಎಂಎಲ್ 3955 ಅಪಘಾತಕ್ಕೊಳಗಾದ ಕಾರ್. ಅಪಘಾತಕ್ಕೆ ಕಾರ್ ಚಾಲಕನ ಅತಿ ವೇಗವೇ ಕಾರಣ ಎಂದು ತಿಳಿದು ಬಂದಿದೆ. ಕಾರ್ ಚಾಲಕನ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದಿನ ಮೂರು ರಾಜ್ಯದಲ್ಲಿ ಮಳೆ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತದೆ. ದಕ್ಷಿಣ ಒಳನಾಡು ಕೇರಳ ಲಕ್ಷ ದ್ವೀಪ ತೆಲಂಗಾಣ ತಮಿಳುನಾಡು ರಾಜ್ಯಗಳಲ್ಲಿ ಮಳೆಯಾಗಿದೆ.ಆಂಧ್ರ ಕರಾವಳಿ ದಕ್ಷಿಣ ಮತ್ತು ತಮಿಳುನಾಡು ಕರಾವಳಿಯ ಉತ್ತರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ಇದರಿಂದ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆ ಇದೆ
ಇದನ್ನೂ ಓದಿ: Lumpy Virus: ಲಿಂಪಿ ವೈರಸ್‌ಗೆ ಸಾವಿರಾರು ಹಸುಗಳ ಮಾರಣ ಹೋಮ – ಹೆದರಿ ಊರೇ ಖಾಲಿ ಮಾಡ್ತಿದ್ದಾರೆ ಜನ