Tips for Men: (ಆ. 05): ಇಂದು ಮದುವೆ ಫಿಕ್ಸ್ ಆಗ್ತಿದ್ದಂತೆ ಹುಡುಗರು ಜಿಮ್ ಸೇರಿಕೊಳ್ಳುತ್ತಾರೆ. ಇತ್ತ ಹುಡುಗಿಯರು ಮದುವೆ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಡಯಟ್ ಶುರು ಮಾಡ್ತಾರೆ. ಆದ್ರೆ ಆಧುನಿಕ ಜೀವನ ಶೈಲಿಯಿಂದಾಗಿ ಇಂದಿನ ಯುವಕರಲ್ಲಿ ಬಂಜೆತನದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ವೀರ್ಯ ಉತ್ಪತ್ತಿ ಕ್ಷೀಣವಾಗ್ತಿದೆ. ಇತ್ತ ಲೈಂಗಿಕ ಸಾಮಾರ್ಥ್ಯ ಸಹ ಕುಂದುತ್ತದೆ.
ಮದುವೆ ಆಗುತ್ತಿರುವ ಅಥವಾ ಆಗಿರುವ ಪುರುಷರು ದಿನನಿತ್ಯದ ಆಹಾರದಲ್ಲಿ ಒಂದಷ್ಟು ತರಕಾರಿ ಸೇವನೆ ಮಾಡೋದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಟೆಸ್ಟೋಸ್ಟೆರಾನ್ ಹೆಚ್ಚಳಕ್ಕಾಗಿ ಈ ಕೆಳಗಿನ ತರಕಾರಿ ಸೇವಿಸಿ.
1.ಪುರುಷರು ನಿಯಮಿತವಾಗಿ ಹಸಿರು ತರಕಾರಿ ಸೇವನೆ ಮಾಡೋದು ಉತ್ತಮ. ಹಸಿರು ಎಲೆಗಳ ತರಕಾರಿ ಹೆಚ್ಚಿನ ಪ್ರಮಾಣದ ಮೆಗ್ನೇಷಿಯಂ ಹೊಂದಿರುತ್ತವೆ. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟ ಉತ್ತಮವಾಗಿರಲಿದೆ. ಪಾಲಕ್ ಸೊಪ್ಪು ಅತಿ ಹೆಚ್ಚು ಮೆಗ್ನಿಷಿಯಂ ಅಂಶ ಹೊಂದಿದೆ.
2.ಪುರುಷರ ಆರೋಗ್ಯಕ್ಕೆ ಈರುಳ್ಳಿ ತುಂಬಾನೇ ಉಪಯೋಗಕಾರಿ. ಟೆಸ್ಟೋಸ್ಟೆರಾನ್ ಹೆಚ್ಚಿಸಲು ಈರುಳ್ಳಿ ಉತ್ತಮ ತರಕಾರಿಯಾಗಿದೆ.
3.ಬೆಳ್ಳುಳ್ಳಿ ಮತ್ತು ಈರುಳ್ಳಿ ಡಯಾಲಿಸಿಸ್ ಡೈಸಲೈಡ್ ಎಂಬ ರಸಾಯನಿಕವನ್ನು ಹೊಂದಿರುತ್ತವೆ. ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಟೆಸ್ಟೋಸ್ಟೆರಾನ್ ಹೆಚ್ಚಳ ಮಾಡುವಲ್ಲಿ ಸಹಾಯ ಮಾಡುತ್ತವೆ. ಕಾರ್ಟಿಸೋಲ್ ಅಂಶವನ್ನು ಹೊರ ಹಾಕಿ, ಟೆಸ್ಟೋಸ್ಟೆರಾನ್ ಹೆಚ್ಚಳಕ್ಕೆ ಸ್ಥಳಾವಕಾಶ ಮಾಡಿಕೊಡಲಿದೆ.
4.ಇನ್ನು ಶುಂಠಿ ಸಹ ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಪುರುಷರ ಬಂಜೆತನ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
5.ಕಾಮ ಕಸ್ತೂರಿ ವೀರ್ಯದ ಸಂಖ್ಯೆ ಮತ್ತು ಪುರುಷರ ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಪುರುಷರಲ್ಲಿ ಪೋಷಕಾಂಶದ ಕೊರತೆ ಉಂಟಾದಾ ಹೈಪೊಗೊನಾಡಿಸಮ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸತುವಿನ ಅಂಶವನ್ನು ಹೇರಳವಾಗಿ ಹೊಂದಿರುವ ಕಾಮ ಕಸ್ತೂರಿ ಸೇವನೆ ಈ ಸಮಸ್ಯೆ ನಿವಾರಿಸುತ್ತದೆ.
ಇದನ್ನೂ ಓದಿ : Relationship : ಗಂಡಂದಿರು ಪತ್ನಿಗೆ ಬಿಟ್ಟುಕೊಡದ ಗುಟ್ಟುಗಳ ಪಟ್ಟಿ ಇಲ್ಲಿದೆ