ಬೆಂಗಳೂರು: (ಆ. 05):Cruel Mother: ಹೆತ್ತ ತಾಯಿಯೇ ಮಗುವನ್ನು ನಾಲ್ಕನೇ (Cruel Mother) ಮಹಡಿಯಿಂದ ಬೀಳಿಸಿ ಸಾವಿಗೆ ಕಾರಣರಾಗಿರುವ ಹೃದಯ (Banaglore) ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಗಸ್ಟ್ 4 ರಂದು ಸಂಪಂಗಿರಾನಗರ ({Sampangira Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಐದು ವರ್ಷದ ರಿಷಿ ಸಾವಿಗೆ (RIshi)ಒಳಗಾದ ನತದೃಷ್ಟ ಮಗುವಾಗಿದೆ.ಹೆತ್ತ ತಾಯಿ ಸುಷ್ಮಾ ತನ್ನ ಮಗುವನ್ನು ಸಾಯಿಸಿ ತಾನು ಸಹ (Suicide Attempt)ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿರುವುದು ಗೊತ್ತಾಗಿದೆ. ಪತಿ ಕಿರಣ್ ನೀಡಿದ ದೂರಿನ ಮೇರೆಗೆ ಪತ್ನಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಸಂಪಂಗಿರಾಮನಗರದ ಆದಿತ್ಯ ಅಪಾರ್ಟ್ ಮೆಂಟ್ (Apartment)ನಾಲ್ಕನೇ ಮಹಡಿಯ ಮನೆಯೊಂದರಲ್ಲಿ ಕಿರಣ್ ದಂಪತಿ ವಾಸವಾಗಿದ್ದರು. ಕಿರಣ್ ಸಾಫ್ಟ್ ವೇರ್ ಇಂಜಿನಿಯರ್ ಆದರೆ ಸುಷ್ಮಾ ಡೆಂಟಿಸ್ಟ್ ಪ್ಯಾಕ್ಟಿಸ್ ಮಾಡುತ್ತಿದ್ದಳು. ಈ ದಂಪತಿಗೆ ಐದು ವರ್ಷದ ರಿಷಿ (Rishi)ಎಂಬ ಗಂಡು ಮಗುವಿತ್ತು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಮಗು ಬಳಲುತಿತ್ತು. ಬುದ್ಧಿಮಾಂದ್ಯ ಮಗು ಎಂದು ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು ತಾಯಿ ಸುಷ್ಮಾ. ತಂದೆ ಕಿರಣ್ (Kiran) ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು.
ನಿನ್ನೆ ನಾಲ್ಕನೇ ಮಹಡಿಯಿಂದ ವಸ್ತು ಬಿಸಾಕುವ ಹಾಗೇ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಗುವನ್ನು (throw)ಎಸೆದಿದ್ದಾಳೆ. ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುಷ್ಮಾನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ :Karnataka Rain: ಕರ್ನಾಟಕದಲ್ಲಿ ಮಳೆಯ ಅಬ್ಬರ : ಹಲವೆಡೆ ಮನೆಗೆ ನುಗ್ಗಿದ ನೀರು!