ಬೆಂಗಳೂರು: (ಆ. 04): No Parking: ನೋ ಪಾರ್ಕಿಂಗ್‍ನಲ್ಲಿ (No Parking)ವಾಹನಗಳನ್ನು ಪಾರ್ಕ್ ಮಾಡಿ ಹೋಗುವ ವಾಹನ ಸವಾರರಿಗೆ ಶಾಕ್ ಕೊಡಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ಹೌದು ಬೆಂಗಳೂರಿನಲ್ಲಿ ಟೋಯಿಂಗ್ ಸ್ಟಾಫ್ ಆದ ಬೆನ್ನಲ್ಲೇ ನೋ ಪಾರ್ಕಿಂಗ್‍ನಲ್ಲಿ ಕಾರು, ಬೈಕ್‍ಗಳನ್ನ ನಿಲ್ಲಿಸಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ.ವಾಹನಗಳನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡುವುದರಿಂದ ನಗರದಲ್ಲಿ ಟ್ರಾಫಿಕ್ ಕಿರಿಕಿರಿ (Traffic) ಹೆಚ್ಚಾಗುತ್ತಿದೆ. ಹಾಗಾಗಿ, ಸಂಚಾರಿ ಪೊಲೀಸರು ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡುವವರ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ (No Parking)ಮಾಡಿ ಹೋಗುವ ವಾಹನ ಸವಾರರಿಗೆ ದಡಂ ದಶಗುಣಂ ಪ್ರಯೋಗ ಮಾಡಲಾಗುತ್ತಿದೆ. ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿ ಹೋಗಿರುವ ವಾಹನಗಳ ವ್ಹೀಲ್ ಲಾಕ್ ಮಾಡಿ, ಬಿಸಿ ಮುಟ್ಟಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.ನೋ ಪಾರ್ಕಿಂಗ್ ನಲ್ಲಿ ಎಲ್ಲೆ ವೆಹಿಕಲ್ (Vehicle Parking) ನಿಲ್ಲಿಸಿದ್ರು ನಿಮ್ಮ ವಾಹನಕ್ಕೆ ಬೀಳಲಿದೆ ವೀಲ್ ಲಾಕ್. ವೀಲ್ ಲಾಕ್ ಮಾಡಿ ದಂಡಾಸ್ತ್ರ ಪ್ರಯೋಗ ಮಾಡ್ತಿದ್ದು ನೋ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡೋ ಸವಾರರಿಗೆ ನಗರದಾದ್ಯಂತ ಬಿಸಿ ಮುಟ್ಟಿಸೋ ಕೆಲಸ ಟ್ರಾಫಿಕ್ ಪೊಲೀಸರು ಮಾಡ್ತಿದ್ದಾರೆ.
ಇದನ್ನೂ ಓದಿ: Deportation Notice: ಪೊಲೀಸರಿಂದ ಗಡಿಪಾರು ಬೆದರಿಕೆ ಪತ್ರ – ಹಿಂದೂ ಸಂಘಟನೆ ಯುವಕರಿಗೆ ಹೆಚ್ಚಿದ ಆತಂಕ