ಕೊಪ್ಪಳ: (ಆ. 04):Inhumanity: ಹೆತ್ತ ತಾಯಿಯನ್ನ ದೇವರಗೆ ಸಮಾನವಾಗಿ ನೋಡುತ್ತೇವೆ ಆದರೆ ಮಗನೇ ತಾಯಿಯನ್ನ ನಡು ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕೊಪ್ಪಳ ತಾಲೂಕಿನ ಹುಲಗಿ ಎಂಬಲ್ಲಿ ಪ್ರಸಿದ್ಧ ಹುಲಿಗೀಮ್ಮ ದೇವಸ್ಥಾನ ಸಮೀಪದಲ್ಲಿ ಮಗನೊಬ್ಬ ತಾಯಿಯನ್ನ ಬಿಟ್ಟು ಹೋಗಿದ್ದಾನೆ.ದೇವಸ್ಥಾನಕ್ಕೆ ಕಳೆದ ಎರಡು ದಿನಗಳ ಹಿಂದೆ ತಾಯಿಯನ್ನ ಕರೆದುಕೊಂಡು ಬಂದಿದ್ದಾನೆ ಜೊತೆಗೆ ದೇವಿಯ ದರ್ಶನ ಕೂಡ ಮಾಡಿಸಿ ಬಳಿಕ ಅಮ್ಮನನ್ನ ಒಂಟಿಯಾಗಿ ಬಿಟ್ಟು ಅಲ್ಲಿಂದ ತೆರಳಿದ್ದಾನೆ.
ತಾಯಿಗೆ 80 ವರ್ಷ ವಯಸ್ಸಾಗಿದ್ದು ಉಜ್ಜನೀಯ ಗ್ರಾಮದ ಖಾಸಿಂ ಬಿ ಎಂದು ಗುರುತಿಸಲಾಗಿದೆ. ಇನ್ನೊಂದು ವಿಷಯ ಏನೆಂದರೆ ಮಗನನ್ನ ಬಿಟ್ಟುಹೋದ ಕೂಡಲೇ ಕಂಗಾಲದ ತಾಯಿಯ ನೆರವಿಗೆ ಸ್ಥಳೀಯರು ಧಾವಿಸಿದ್ದಾರೆ ನಂತರ ವೃದ್ಧೆಗೆ ಊಟವನ್ನು ನೀಡಿ, ಅವರ ಬಳಿ ಇದ್ದ ಚೀಲವನ್ನು ಪರಿಶೀಲನೆ ಮಾಡಿದಾಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ಕೊಟ್ಟು ಅಲ್ಲಿಂದ ತೆರಳಿದ್ದಾನೆ.
ಸ್ಥಳೀಯರು ಹಿರಿಯರ ನಾಗರೀಕರ ಸಹಾಯವಾಣಿಗೆ ಮಾಹಿತಿ ನೀಡಿದ್ದು. ದೇವಸ್ಥಾನದ ಬಳಿ ಬಂದು ವೃದ್ಧೆಯನ್ನ ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.ಆದರೆ ವೃದ್ಧೆಎಲ್ಲಿಂದ ಬಂದಿದ್ದು ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಚಿಕ್ಕ ವಯಸ್ಸಿನಿಂದ ಸಾಕಿ ಸಲಹಿದ ತಾಯಿಯನ್ನೇ ಮಗ ಬಿಟ್ಟು ಹೋಗಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಇಂತಹ ಘಟನೆಗಳು ಪ್ರಪಂಚದಲ್ಲಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ ಆದರೆ ನಮ್ಮ ಕಣ್ಣಿಗೆ ಕಾಣಿಸೋದು ಮಾತ್ರ ಕೆಲವೇ ಕೆಲವು ಅಷ್ಟೇ.
ಇದನ್ನೂ ಓದಿ : New Rules: ಬೈಕ್ ಸವಾರರೇ ಗಮನಿಸಿ.. ಡಬಲ್ ರೈಡ್ ಗೆ ಅವಕಾಶವಿಲ್ಲ!