ಬೆಂಗಳೂರು: (ಆ. 04):Karnataka Rain:ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತದೆ. ದಕ್ಷಿಣ ಒಳನಾಡು ಕೇರಳ ಲಕ್ಷ ದ್ವೀಪ ತೆಲಂಗಾಣ ತಮಿಳುನಾಡು ರಾಜ್ಯಗಳಲ್ಲಿ ಮಳೆಯಾಗಿದೆ.ಆಂಧ್ರ ಕರಾವಳಿ ದಕ್ಷಿಣ ಮತ್ತು ತಮಿಳುನಾಡು ಕರಾವಳಿಯ ಉತ್ತರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ಇದರಿಂದ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆ ಇದೆ.
ಆಗಸ್ಟ್ 7ರ ವರೆಗೆ ಕೇರಳ, ಕರ್ನಾಟಕ, ತೆಲಂಗಾಣ ,ಆಂಧ್ರಪ್ರದೇಶ, ಹಾಗೂ ಪುದುಚೇರಿಯಲ್ಲಿ ಮಳೆಯಾಗಲಿದೆ.ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು
ಆಗಸ್ಟ್ ತಿಂಗಳ ಮೊದಲ ಮೂರು ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 162.7 ಮಿ. ಮೀ ಮಳೆಯಾಗಿದೆ.ಇನ್ನೂ ಕಳೆದ ಜೂನ್ ಹಾಗೂ ಜುಲೈ ತಿಂಗಳಲ್ಲೂ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದ್ದ ವರದಿಯಾಗಿತ್ತು. ಇನ್ನು ಎರಡು ದಿನಗಳ ಕಾಲ ನಗರದಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆಗಳು ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಕೊಡಗಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಭಾರಿ ಮಳೆಗೆ ಡಬ್ಬಡ್ಕ ಗ್ರಾಮದ ಎರಡು ಸಂಪರ್ಕ ಸೇತುವೆಗಳು ನಾಶವಾಗಿದ್ದು ಜನರ ಸಂಪರ್ಕ ಕಡಿತಗೊಂಡಿದೆ.