Break-Up: (ಆ. 03):ಮದುವೆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಇದ್ದರೂ ಸಣ್ಣ ಸಣ್ಣ ವಿಚಾರಗಳಿಗೂ ಗಲಾಟೆ ಆಗುತ್ತಿರುತ್ತವೆ. ಪುರುಷರಿಗೆ ಇವುಗಳೆಲ್ಲವೂ ಸಣ್ಣ ಸಣ್ಣ ವಿಷಯಗಳು ಆಗಿರಬಹುದು. ಆದ್ರೆ ಈ ಪುಟ್ಟ ಮಾತು ಅಥವಾ ನಡವಳಿಕೆ ಮಹಿಳೆಗೆ ತನ್ನ ಸ್ವಾಭಿಮಾನ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತೆ. ಇದೇ ಕಾರಣಗಳಿಂದ ಇಂದಿನ ಮಹಿಳೆಯರು ದೂರವಾಗುವ ದೃಢ ನಿರ್ಧಾಕ್ಕೆ ಬರುತ್ತಾರೆ.
ಪತ್ನಿಯ ದೂರಕ್ಕೆ ಕಾರಣಗಳು
- ಪತಿಯ ಯಾವುದೇ ಕೆಟ್ಟ ಚಟಗಳನ್ನು ಮಹಿಳೆ ಒಪ್ಪಿಕೊಂಡು ಜೀವನ ನಡೆಸಬಹುದು. ಆದರೆ ಪತಿ ಅನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದ್ರೆ ಮಹಿಳೆ ಗಂಡನನ್ನು ಒಪ್ಪಿಕೊಳ್ಳಲ್ಲ.
- ಆತ್ಮಗೌರವದ ವಿಚಾರಕ್ಕೆ ಬಂದಾಗ ಮಹಿಳೆ ಯಾವ ವಿಷಯದಲ್ಲಿಯೂ ರಾಜಿ ಮಾಡಿಕೊಳ್ಳಲ್ಲ. ಆತ್ಮಗೌರವಕ್ಕೆ ಧಕ್ಕೆ ಉಂಟಾದಾಗ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಹುದು.
- ಪ್ರತಿಯೊಂದು ಹೆಣ್ಣು ತನ್ನದೇ ಆದ ಕನಸಿನ ಲೋಕ ಕಟ್ಟಿಕೊಂಡಿರುತ್ತಾರೆ. ಎಲ್ಲಾ ಕನಸುಗಳನ್ನು ಈಡೇರಿಸಲು ಆಗದಿದ್ರೆ, ಕೆಲವೊಂದನ್ನು ಪೂರೈಸಬಹುದು. ಇದರ ಬಗ್ಗೆ ಯೋಚನೆ ಮಾಡದಿದ್ದರೆ ದಾಂಪತ್ಯದಲ್ಲಿ ವಿರಸ ಮೂಡಬಹುದು.
- ಮದುವೆ ಬಳಿಕ ಪತ್ನಿಗೂ ವೃತ್ತಿಜೀವನದ ಅಯ್ಕೆಗೆ ನಿರ್ಧರಿಸುವ ಹಕ್ಕು ನೀಡಬೇಕು. ಪತ್ನಿಯನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಬೇಡಿ.
- ಮದುವೆ ನಂತರ ಸಾಮಾನ್ಯವಾಗಿ ಮಹಿಳೆಯ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದರಿಂದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಗೆ ಸಾಥ್ ನೀಡಬೇಕು.