Relationship:(ಆ. 03): ಗಂಡ- ಹೆಂಡತಿ ಮಧ್ಯೆ ಯಾವುದೇ ಮುಚ್ಚುಮರೆ ಇರಬಾರದು ಅಂತ ಹೇಳ್ತಾರೆ. ಆದ್ರೆ ಈ ಮಾತನ್ನ ಎಷ್ಟು ಜನ ಪಾಲಿಸ್ತಾರೆ ಅನ್ನೋದರ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಕೆಲ ಅಧ್ಯಯನಗಳು ಸಹ ನಡೆದಿವೆ.
ಬಹುತೇಕ ಎಲ್ಲಾ ಪುರುಷರು ಒಂದಿಷ್ಟು ರಹಸ್ಯಗಳನ್ನು ರಟ್ಟು ಮಾಡಲು ಇಚ್ಛಿಸುವಲ್ಲ. ಇದರಿಂದ ಇಬ್ಬರ ನಡುವೆ ಜಗಳಗಳು ಉಂಟಾಗಬಹುದು ಅನ್ನೋದು ಅವರಿಗೆ ಇರೊ ಆತಂಕ. ಈ ಸತ್ಯಗಳನ್ನು ಹೇಳಿದ್ರೆ ಜೀವಕ್ಕಿಂತ ಹೆಚ್ಚಾಗುವ ಪ್ರೀತಿಸುವ ಪತ್ನಿ ತಮ್ಮಿಂದ ದೂರವಾದ್ರೆ ಹೇಗೆ ಅನ್ನೋ ಅತಂಕದಿಂದ ಈ ಗುಟ್ಟುಗಳನ್ನು ಅವರು ಹೇಳಲ್ವಂತೆ. ಹಾಗಾದ್ರೆ ಆ ಗುಟ್ಟುಗೇಳನು ಅಂತ ನೋಡೋದ್ರೆ
- ಪುರುಷರು ಮದುವೆ ಮೊದಲು ಹೊಂದಿರುವ ಸಂಬಂಧ ಮತ್ತು ವಿವಾಹದ ನಂತರವೂ ಕೆಲದಿನ ಮುಂದುವರಿಸೋದಿರುವ ವಿಷಯವನ್ನು ಪತ್ನಿ ಜೊತೆ ಯಾವ ಸಮಯದಲ್ಲಿಯೂ ಹಂಚಿಕೊಳ್ಳಲ್ಲ.
- ಕೆಲ ಪುರುಷರು ತಾವು ಸಲಿಂಗಕಾಮಿ ಎಂಬ ವಿಷಯವನ್ನು ಹೇಳದೇ ಸಂಸಾರ ನಡೆಸುತ್ತಿರುತ್ತಾರೆ. ತನಗೆ ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಆಸಕ್ತಿ ಎಂಬ ವಿಷಯವನ್ನು ಮರೆ ಮಾಡಿರುತ್ತಾರೆ.
- ವಿವಾಹದ ಬಳಿಕವೂ ಕೆಲ ಪುರುಷರು ವಿವಾಹಿತೆ ಅಥವ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿರುತ್ತಾರೆ. ಇದನ್ನ ಯಾವುದೇ ಕಾರಣಕ್ಕೂ ಹೇಳಲ್ಲ. ಹೇಳಿದರೆ ಮುಂದೆ ಏನು ಆಗುತ್ತೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.
- ಕೆಲವರು ಪೋಷಕರ ಒತ್ತಾಯಕ್ಕೆ ಮದುವೆ ಆಗಿರುವ ವಿಷಯವನ್ನು ಮುಚ್ಚಿಟ್ಟಿರುತ್ತಾರೆ.