Relationship: (ಆ. 01):ಯಾವುದೇ ಹುಡುಗ ಅಥವಾ ಹುಡುಗಿಗೆ ತಮ್ಮ ಸಂಗಾತಿ ವರ್ಜಿನ್ ಅಗಿರಬೇಕು ಅಂತ ಕನಸು ಕಂಡಿರುತ್ತಾರೆ. ಆದ್ರೆ ಇಂದು ಸಂಬಂಧ ಅನ್ನೋದು ಒಂದು ಟೈಮ್ ಪಾಸ್ ಅನ್ನೋ ರೀತಿ ಆಗಿದೆ. ಅದರಲ್ಲಿಯೂ ಡೇಟಿಂಗ್ ಆಪ್ ಬಂದ ನಂತರ ಪರಸ್ಪರ ಹೊಂದಾಣಿಕೆ ಮೂಲಕ ಅಪರಿಚಿತರ ಜೊತೆ ಡೇಟ್ ಮಾಡಲು ಹೋಗುತ್ತಾರೆ. ಕೆಲವೊಮ್ಮೆ ಈ ಸ್ನೇಹ ದೈಹಿಕ ಸಂಪರ್ಕದವರೆಗೂ ಹೋಗುವ ಸಾಧ್ಯತೆಗಳಿರುತ್ತವೆ.
ನೀವು ಮದುವೆಯಾಗುವ ಹುಡುಗ ವರ್ಜಿನ್ ಹೌದು ಅಥವಾ ಇಲ್ಲವಾ ಅನ್ನೋದನ್ನು ಮೊದಲ ರಾತ್ರಿಯೇ ತಿಳಿದುಕೊಳ್ಳಬಹುದು. ಆತ ನಿಮ್ಮೊಂದಿಗೆ ನಡೆದುಕೊಳ್ಳುವ ಅಥವಾ ಆತನ ವರ್ತನೆ ಮೇಲೆ ವರ್ಜಿನ್ ಇದಾನೋ.? ಇಲ್ಲವೋ ಅನ್ನೋದು ತಿಳಿದು ಬರುತ್ತದೆ.
ಮದುವೆಗೂ ಮುಂಚೆ ಹುಡುಗ ಅಥವಾ ಹುಡುಗಿ ಸೆಕ್ಸ್ ನಡೆಸಿದ್ದಾರೆ ಎಂಬುದನ್ನು ಅವರ ನಡವಳಿಕೆ ಮೇಲೆ ಕಂಡು ಹಿಡಿಯಬಹುದು. ಮೊದಲ ಬಾರಿಗೆ ಸಂಭೋಗ ಬೆಳೆಸುವ ಈ ಅಂಶಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ನಿಮ್ಮ ಸಂಗಾತಿಯ ವರ್ಜಿನ್ ರಹಸ್ಯ ತಿಳಿಯುತ್ತದೆ.
1.ಮೊದಲ ಬಾರಿ ಸೆಕ್ಸ್ ಮಾಡುತ್ತಿದ್ದರೆ ಹುಡುಗರಿಗೂ ನಾಚಿಕೆ ಇರುತ್ತದೆ. ಹೇಗೆ ಪ್ರಾರಂಭಿಸಬೇಕು ಅನ್ನೋ ಗೊಂದಲ ಅವರ ಹಾವಭಾವದಲ್ಲಿ ಕಂಡು ಹಿಡಿಯಬಹುದು.
2.ಇನ್ನೂ ಮದುವೆಗೆ ಮೊದಲು ಬಹುತೇಕ ಎಲ್ಲಾ ಹುಡುಗರು ಕಾಂಡೋಮ್ ಬಳಕೆ ಹೇಗೆ ಮಾಡಬೇಕು ಅನ್ನೋದರ ಕುರಿತ ವಿಡಿಯೋಗಳನ್ನು ನೋಡಿರುತ್ತಾರೆ. ಆದ್ರೆ ಅದನ್ನು ಪ್ರಾಯೋಗಿಕವಾಗಿ ಮಾಡಲು ಹೋದಾಗ ಅವರಲ್ಲಿ ಒಂದು ರೀತಿಯ ಆತಂಕ ಕಾಣಿಸಿಕೊಳ್ಳುತ್ತದೆ.
3.ಕೆಲವರು ಸೆಕ್ಸ್ ನಡೆಸುವ ಮುನ್ನ ಸಂಗಾತಿಯನ್ನು ಚುಂಬಿಸಬೇಕು ಅಂತ ಪ್ಲಾನ್ ಮಾಡಿರ್ತಾರೆ. ಸಾಕಷ್ಟು ಪೋರ್ನ್ ಸಿನಿಮಾ ನೋಡಿದರೂ ಇವರಲ್ಲಿ ಆತಂಕ ಮನೆ ಮಾಡಿರುತ್ತದೆ.
4.ಮೊದಲ ಬಾರಿಗೆ ಸೆಕ್ಸ್ ನಡೆಸುವ ಹುಡುಗನಿಗೆ ಬೇಗನೇ ಸ್ಕಲನ ಉಂಟಾಗುತ್ತದೆ. ಇದು ಉಂಟಾಗಿರುವ ಉದ್ವೇಗದಿಂದಲೂ ಆಗಿರುತ್ತದೆ. ಅಂದ್ರೆ ಹುಡುಗ ಅಸಮರ್ಥ ಎಂದರ್ಥ ಅಲ್ಲ. ಇಬ್ಬರ ನಡುವೆ ಹಾಸಿಗೆಯಲ್ಲಿ ಸಂಕೋಚ, ಭಯ ಮತ್ತು ನಾಚಿಕೆ ಕಡಿಮೆಯಾದಾಗ ದೀರ್ಘಕಾಲದವರೆಗೆ ಸೆಕ್ಸ್ ನಡೆಸಬಹುದಾಗಿದೆ.
5.ಇನ್ನೂ ಮೊದಲ ಬಾರಿಗೆ ಸಂಭೋಗ ನಡೆಸುವ ಹುಡುಗನಿಗೆ ಫೋರ್ ಪ್ಲೇ ಬಗ್ಗೆ ಕಡಿಮೆ ತಿಳುವಳಿಕೆ ಇರುತ್ತದೆ.
6.ಸೆಕ್ಸ್ ಸಿನಿಮಾಗಳನ್ನು ನೋಡಿದ್ರೂ ಹುಡುಗರಿಗೆ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಸಾಮಾನ್ಯವಾಗಿ ಯೋನಿಯ ಬಗ್ಗೆ ಗೊಂದಲ ಇರುತ್ತದೆ.
ಇದನ್ನೂ ಓದಿ: Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ