Breaking:(ಆ. 01): ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ NTR (Andra Pradesh Former CM) ಪುತ್ರಿ ಆತ್ಮಹತ್ಯೆ (NTR Daughter Suicide) ಮಾಡಿಕೊಂಡಿದ್ದಾರೆ.ಮಾಜಿ ಸಿಎಂ ಎನ್ ಟಿ ರಾಮರಾವ್ 4ನೇ ಪುತ್ರಿ ಕೆ. ಉಮಾಮಹೇಶ್ವರಿ (K Umamaheshwari) ಅವರು ಸೀಲಿಂಗ್ ಫ್ಯಾನ್ ಗೆ ನೇಣು (Committed Suicide)ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಜುಬಿಲಿ ಹಿಲ್ಸ್ ನಲ್ಲಿರುವ ನಿವಾಸದಲ್ಲಿ (Jubli Hills) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಮರಾವ್ ಅವರ(Andra Pradesh Former CM) 4ನೇ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಸ್ಥರಿಗೆ ಅಘಾತ ಉಂಟುಮಾಡಿದೆ. (Telegu Film Industry) ತೆಲುಗು ಚಿತ್ರರಂಗದ (Nandamuri Tarak Ramrao) ನಟರತ್ನ ದಿವಂಗತ ನಂದಮೂರಿ ತಾರಕ ರಾಮ್ ರಾವ್ ಅವರ ಕೊನೆಯ ಪುತ್ರಿ ಕಂಠ ಮನೇನಿ ಉಮಾ ಮಹೇಶ್ವರಿ ಅವರು ಇಂದು ಮಧ್ಯಾಹ್ನ (Hyderbad) ಹೈದರಾಬಾದ್ ಜುಬ್ಲಿ ಹಿಲ್ಸ್ ನಲ್ಲಿರುವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಮಾನಸಿಕ ಖಿನ್ನತೆ (Mentally Depression) ಅನಾರೋಗ್ಯಕ್ಕೆ ತುತ್ತಾಗಿದ್ದ ಉಮಾಮಹೇಶ್ವರಿ ಅವರು ಇತ್ತೀಚಿಗಷ್ಟೇ ತಮ್ಮ ಕಿರಿಯ ಮಗಳ ಮದುವೆ ಮಾಡಿದ್ದರು.ಇದಾದ ಬಳಿಕ ಆತ್ಮಹತ್ಯೆ ಶರಣಾಗಿರುವುದು ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ.ಸುದ್ದಿ ತಿಳಿದ ಬಳಿಕ ಉಮಾಮಹೇಶ್ವರಿ (Umamaheshwari) ಅವರ ನಿವಾಸಕ್ಕೆ ಎನ್‌ಟಿಆರ್ ಮಗ ಬಾಲಕೃಷ್ಣ, ಅಳಿಯ ಚಂದ್ರಬಾಬು ನಾಯ್ಡು, ಚಂದ್ರ ಬಾಬು ಅವರ ಪುತ್ರ ನಾರಾ ಲೋಕೇಶ್, ತೆಲುಗು ಚಿತ್ರ ನಿರ್ಮಾಪಕ ಡಿ ಸುರೇಶ್ ಬಾಬು ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಭೇಟಿ ನೀಡುತ್ತಿದ್ದಾರೆ.
ಉಮಾ ಮಹೇಶ್ವರಿ ಅವರ (Umamaheshwari) ಮರಣೋತ್ತರ ಪರೀಕ್ಷೆಯನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.ಉಮಾಮಹೇಶ್ವರಿ ಅವರ ದೊಡ್ಡ ಮಗಳು ವಿದೇಶದಲ್ಲಿ ನೆಲೆಸಿದ್ದು ಭಾರತಕ್ಕೆ ಬಂದ ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.ಉಮಾ ಮಹೇಶ್ವರಿ ಅವರು ನರೇಂದ್ರರಾಜನ್ ಎಂಬು ಅವರ ಜೊತೆ ಮದುವೆಯಾಗಿದ್ದರು, ಆದರೆ ನರೇಂದ್ರ ರಾಜು ಅವರ ಕಿರುಕುಳದಿಂದ ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗಿದ್ದರು ಎನ್ನಲಾಗಿದೆ.ಇತ್ತೀಚಿಗಷ್ಟೇ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಚಿಕಿತ್ಸೆಯನ್ನ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿದೆ.