Lifestyle: (ಜು.30): ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಯಾರ ಬಳಿಯೂ ಸಮಯ ಇಲ್ಲ. ಎಲ್ಲವೂ ಅವಸರವಾಗಿ ಆದಷ್ಟು ಬೇಗ ನಡೆಯಬೇಕು ಅನ್ನೋ ಮನಸ್ಥಿತಿಗೆ ಬಂದಿದ್ದಾರೆ. ಆದ್ರೆ ವೈಯಿಕ್ತಿಕ ಜೀವನಕ್ಕೆ ಒಂದಿಷ್ಟು ಸಮಯ ನೀಡಬೇಕು. ಇಲ್ಲವಾದ್ರೆ ಇದು ನಿಮ್ಮ ಸಂಸಾರದಲ್ಲಿನ ವೈಮನಸ್ಸಿಗೆ ಕಾರಣ ಆಗಬಹುದು. ಸಂಗಾತಿಗಾಗಿ ನೀವು ಕ್ವಾಲಿಟಿ ಸಮಯ ಕೊಡಲೇಬೇಕು.
ನೀವೂ ದಿನಕ್ಕೆ ಎಷ್ಟೇ ಸಮಯ ಕೆಲಸ ಮಾಡಿ ದಣಿದು ಬಂದರೂ ಸಂಗಾತಿ ಮೇಲೆ ಆ ಒತ್ತಡಗಳನ್ನು ಹಾಕಬಾರದು. ಆಕೆಗಾಗಿ ನೀವು ನೀಡುವ ಒಂದು ಮುಗಳ್ನಗೆ ಉಲ್ಲಾಸವನ್ನುಂಟು ಮಾಡುತ್ತದೆ. ಇದರ ಜೊತೆಗೆ ಸಂಗಾತಿಗಾಗಿ ಲೈಂಗಿಕ ತೃಪ್ತಿ ಅನ್ನೋ ಅನಂದದ ಜೀವನವನ್ನು ಕೊಡಬೇಕಾಗುತ್ತದೆ. ದಿನ ನಿತ್ಯದ ಜೀವನದಲ್ಲಿ ಒಂದಿಷ್ಟು ಟಿಪ್ಸ್ ಫಾಲೋ ಮಾಡಿದ್ರೆ ಸಂಗಾತಿ ಜೊತೆ ಸುಂದರ ರಾತ್ರಿಗಳನ್ನು ಕಳೆಯಬಹುದಾಗಿದೆ.
ಸುಂದರ ರಾತ್ರಿ ಕಳೆಯಲು ಫಾಲೋ ಮಾಡಬೇಕಾದ ಟಿಪ್ಸ್
1.ಪ್ರತಿದಿನ ಮಲಗುವ ಮತ್ತು ಬೆಳಗ್ಗೆ ಏಳುವ ಸಮಯವನ್ನು ಫಿಕ್ಸ್ ಮಾಡಿಕೊಳ್ಳಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೆಲ ದಿನಗಳ ಬಳಿಕ ಇದು ನಿಮ್ಮ ನಿದ್ದೆಯ ಮಾದರಿಯನ್ನು ನಿರ್ಧರಿಸುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ ಕಾಮಾಸಕ್ತಿ ಸಹ ಹೆಚ್ಚಾಗುತ್ತದೆ.
2.ಮಲಗುವ ಕೋಣೆ ಶಾಂತವಾಗಿ ಮತ್ತು ಸ್ವಚ್ಛ ಹಾಗೂ ತಂಪಾಗಿರುವಂತೆ ನೋಡಿಕೊಳ್ಳಿ. ಇದು ದೀರ್ಘಕಾಲ ಲೈಂಗಿಕ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕೋಣೆಯೊಳಗೆ ಕತ್ತಲು ಇರುವಂತಿರಬೇಕು.
3.ಹಗಲಿನಲ್ಲಿ ಅತಿಯಾಗಿ ನಿದ್ದೆ ಮಾಡುತ್ತಿದ್ದೆರೆ ಅದನ್ನು ಕಡಿಮೆ ಮಾಡಿಕೊಳ್ಳಿ.
4.ಸಂಗಾತಿಯ ಒಪ್ಪಿಗೆ ಪಡೆದು ಲೈಂಗಿಕ ಕ್ರಿಯೆ ನಡೆಸೋದು ಉತ್ತಮ. ಇದು ಇಬ್ಬರಿಗೂ ತೃಪ್ತಿ ನೀಡುತ್ತದೆ.
5.ಮಲಗುವ 30 ನಿಮಿಷಗಳ ಮೊದಲು ಅತಿಯಾದ ಭಾರವಾದ ಕೆಲಸ ಮಾಡಬೇಡಿ. ಊಟ ಮಾಡಿದ ಬಳಿಕ ಸಣ್ಣದಾದ ವಾಕ್ ಮಾಡಬಹುದು.
6.ದೈಹಿಕ ಮತ್ತು ಮಾನಸಿಕ ಒತ್ತಡ ಲೈಂಗಿಕ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ದ್ಯಾನ, ಒಳ್ಳೆಯ ನಿದ್ದೆ, ಯೋಗಾಸನ ಅಥವಾ ವರ್ಕೌಟ್ ಮಾಡೋದನ್ನು ಅಭ್ಯಾಸ ಮಾಡಿಕೊಳ್ಳಿ.