ನವದೆಹಲಿ:(ಜು.28):Monkey Pox:ಕೋವಿಡ್ ಬೆನ್ನಲ್ಲೇ ಜಗತ್ತಿನಾದ್ಯಂತ (Monkey Pox)ಮಂಕಿ ಪಾಕ್ಸ್ ಭೀತಿ ಎದುರಾಗಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ವರದಿಯಾಗುತ್ತಿದೆ. ಈ ಹಿನ್ನಲೆ (WHO)ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.ಮಂಕಿ ಪಾಕ್ಸ್ ಹೇಗೆ ಹರಡುತ್ತದೆ ಎಂಬುದರ ಬಗ್ಗೆ ವಿಜ್ಞಾನಿಗಳು ಆತಂಕಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಲೈಂಗಿಕ ಕ್ರಿಯೆ ನಡೆಸುವುದರ ಮೂಲಕವೂ ಮಂಕಿಪಾಕ್ಸ್ (Monkey Pox) ಹರಡುತ್ತದೆ. ಅದರಲ್ಲೂ ಸಲಿಂಗಿಗಳಲ್ಲಿ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗಿದೆ ಈ ಹಿನ್ನೆಲೆ ಪುರುಷರ ಜೊತೆ ಲೈಂಗಿಕ ಕ್ರಿಯೆ ನಡೆಸುವ (Sexual Activities)ಪುರುಷರು ಆದಷ್ಟು ಕಡಿಮೆ ಮಾಡಬೇಕು ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಅಪಾಯ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದೆ.
ಪುರುಷರೊಂದಿಗೆ ಸಂಭೋಗಿಸುವ ಪುರುಷರು ನಿಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಹೊಸ ಪಾರ್ಟ್ನರ್ ಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು ಎಂದು ತಿಳಿಸಿದ್ದಾರೆ ಆರೋಗ್ಯದ ಮಾಹಿತಿ, ನಂಬರ್,ವಿಳಾಸ ಇತ್ಯಾದಿಗಳನ್ನ ಪಡೆಯಬೇಕು ಎಂದು ಸೂಚನೆ ನೀಡಿದೆ.ಮಂಕಿ ಬಾಕ್ಸ್ ಯಾವುದೇ ರೀತಿಯ ದೈಹಿಕ ಸಂಪರ್ಕದ ಮೂಲಕ ಹರಡುವುದು (Body Touch)ಚುಂಬನ ,ಸ್ಪರ್ಶ, ಲೈಂಗಿಕ ಕ್ರಿಯೆ ಮಾಡುವ ಮೂಲಕ ಸಾಂಕ್ರಾಮಿಕ ರೋಗವನ್ನು ಹರಡಲು (Spread) ದಾರಿಯಾಗುತ್ತದೆ
ಮೈಯಲ್ಲಿ ಯಾವುದೇ ರೀತಿಯ ಹೊಸ ದದ್ದುಗಳನ್ನು ಮೂಡಿದಾಗ ನೀವು ಲೈಂಗಿಕ ಕ್ರಿಯೆಯಿಂದ ದೂರವಿರುವುದು ಒಳ್ಳೆಯದು.
- ಸೋಂಕಿಗೆ ಒಳಗಾದ ಸಂಗೀತ ಜನರೊಂದಿಗೆ ಚರ್ಮದ ಸಂಪರ್ಕ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.
- ಸೋಪು ಅಥವಾ ನೀರು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ನೊಂದಿಗೆ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಯನ್ನ ಚೆನ್ನಾಗಿ ತೊಳೆದುಕೊಳ್ಳಬೇಕು.
- ಅನಾರೋಗ್ಯ ಇರುವ ರೋಗಿಯ ಮೈಯಿಂದ ಹೊರಹೊಮ್ಮುವ ಯಾವುದೇ ದ್ರವ ಅಥವಾ ವಸ್ತುಗಳನ್ನ ಮುಟ್ಟಬೇಡಿ
- ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಹಾಕಿಕೊಳ್ಳಿ