ಪ್ರತಿನಿತ್ಯದ ಪ್ರಮುಖ ಸುದ್ದಿಗಳು ಯಾವುವು? ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ಪ್ರಮುಖ ಸುದ್ದಿಗಳು, ರಾಜಕೀಯ, ಕ್ರೀಡೆ, ಸಿನಿಮಾ ರಂಗದಲ್ಲಿ ಏನೇನು ಆಗ್ತಾ ಇದೆ. ಈ ಕುರಿತ ಟಾಪ್ ನ್ಯೂಸ್‌ಗಳು ಇಲ್ಲಿವೆ ನೋಡಿ.
ರಾಹುಲ್ ಗಾಂಧಿ ಯೂರೋಪ್ ಪ್ರವಾಸ
ಕಾಂಗ್ರೆಸ್ ಪಕ್ಷದ (Congress Party) ಮಹತ್ವದ ಸಭೆ ಇರುವಾಗಲೇ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ವಿದೇಶಕ್ಕೆ (Europe) ತೆರಳಿದ್ದಾರೆ. ಈ ಕುರಿತು ಬಿಜೆಪಿ (BJP) ಸೇರಿದಂತೆ ಅನೇಕರು ರಾಹುಲ್ ಗಾಂಧಿ (Congress leader Rahul Gandhi) ಅವರನ್ನು ಟೀಕಿಸಿದ್ದಾರೆ. ಅವರು ವೈಯಕ್ತಿಕವಾಗಿ ಯೂರೋಪ್ (Europe) ಪ್ರವಾಸ (Rahul Gandhi Leaves For Europe) ಕೈಗೊಂಡಿದ್ದು ಭಾನುವಾರ (Sunday) ಮರಳುವ ನಿರೀಕ್ಷೆ ಇದೆ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ (Presidential elections) ವಿರೋಧ ಪಕ್ಷಗಳ ಬೆಂಬಲಿತ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವ ಬಗ್ಗೆ ಹಾಗೂ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ‘ಭಾರತ್ ಜೋಡೊ’ ಯಾತ್ರೆಯ (Bharat Jodo Yatra) ಕುರಿತು ಬರುವ ಗುರುವಾರ ನವದೆಹಲಿಯಲ್ಲಿ ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ಸಭೆ ಆಯೋಜನೆಗೊಂಡಿದೆ.
ನಾಳೆಯಿಂದ ಐ2ಯು2 ಶೃಂಗಸಭೆ
ಜಂಟಿ ಹೂಡಿಕೆ ಮತ್ತು ಮೂಲ ಸೌಕರ್ಯ ಆಧುನೀಕರಣ ನಾಳೆಯಿಂದ ನಡೆಯಲಿರುವ ಐ2ಯು2 (I2U2) ಶೃಂಗಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕಾ ಮತ್ತು ಯುಎಇ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಯಾಯಿರ್ ಲಾಪಿಡ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ. ಆಹಾರ ಭದ್ರತೆ ಬಿಕ್ಕಟ್ಟು ಕುರಿತು ಜಾಗತಿಕ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದಾರೆ.
ಗೋವಾ ಕಾಂಗ್ರೆಸ್ ಭಿನ್ನಮತ ಶಮನ
ಗೋವಾ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿದ್ದ ಭಿನ್ನಮತ ಸದ್ಯಕ್ಕೆ ಶಮನಗೊಂಡಿದೆ. ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಗೆ ಮೈಕಲ್ ಲೋಬೊ ಸೇರಿದಂತೆ ಒಟ್ಟು 10 ಮಂದಿ ಶಾಸಕರು ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಲೋಬೊ ಹಾಗೂ ದಿಗಂಬರ ಕಾಮತ್ ಸೇರಿದಂತೆ ಒಟ್ಟು ಐವರು ಶಾಸಕರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇವರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯೂ ಹಬ್ಬಿತ್ತು. ಇನ್ನೂ, ಪಕ್ಷದ ಕೇಂದ್ರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ನಡೆದ ಸಭೆಯಲ್ಲಿ ಕಾಮತ್ ಅವರನ್ನು ಬಿಟ್ಟು ಉಳಿದೆಲ್ಲ ಶಾಸಕರು ಭಾಗಿಯಾಗಿದ್ದರು.
ಜುಬೈರ್‌ಗೆ ಮಧ್ಯಂತರ ಜಾಮೀನು ವಿಸ್ತರಣೆ
ಮೊಹಮ್ಮದ್ ಜುಬೈರ್ ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಮಧ್ಯಂತರ ಜಾಮೀನಿನ ಅವಧಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಉತ್ತರಪ್ರದೇಶ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಪ್ರಕರಣದಲ್ಲಿ ಜುಬೈರ್ ಅವರಿಗೆ ಜಾಮೀನು ದೊರೆತಿರುವುದರಿಂದ ಅವರ ವಿರುದ್ಧ ಪ್ರತಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್ 7ರಂದು ನಡೆಸುವುದಾಗಿ ನ್ಯಾಯಪೀಠವು ತಿಳಿಸಿದೆ.
ಮುರ್ಮುಗೆ ಶಿವಸೇನೆ ಬೆಂಬಲ?
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಶಿವಸೇನೆ ಬೆಂಬಲ ನೀಡಿದೆ. ಮಾಜಿ ಸಿಎಂ ಉದ್ದವ ಠಾಕ್ರೆ ನೇತೃತ್ವದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬುಡಕಟ್ಟು ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಶಿವಸೇನೆ ಬೆಂಬಲ ನೀಡಲಿದೆ. ರಾಜ್ಯದಲ್ಲಿ ಬಿಜೆಪಿಯೊಡನೆ ದ್ವೇಷವಿದ್ದರೂ, ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡಿರುವುದು ಅಚ್ಚರಿ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಶೇಕಡಾ 10ರಷ್ಟು ಬುಡಕಟ್ಟು ಜನಸಂಖ್ಯೆಯಿದ್ದು, ಬೆಂಬಲದ ಹಿಂದೆ ಚುನಾವಣಾ ಉದ್ದೇಶವಿದೆ ಎನ್ನಲಾಗುತ್ತಿದೆ.
ಸಚಿನ್ ಜೊತೆ ಆರ್ಯಾ ವಿವಾಹ
ಪಕ್ಕದ ಕೇರಳ ರಾಜ್ಯವು ವಿನೂತನ ಜನಪ್ರತಿನಿಧಿಗಳಿಬ್ಬರ ಮದುವೆಗೆ ಸಾಕ್ಷಿಯಾಗಲಿದೆ. 21 ವರ್ಷದ ದೇಶದ ಅತಿ ಕಿರಿಯ ಮೇಯರ್ ಖ್ಯಾತಿಯ ಆರ್ಯಾ ರಾಜೇಂದ್ರನ್ ಅವರು, ಅದೇ ರಾಜ್ಯದ ಅತಿ ಕಿರಿಯ ಶಾಸಕ 28 ವರ್ಷದ ಸಚಿನ್ ದೇವ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸೆಪ್ಟೆಂಬರ್ 4 ರಂದು ಬೆಳಗ್ಗೆ 11 ಗಂಟೆಗೆ ಅದ್ದೂರಿಯಾಗಿ ವಿವಾಹ ಸಮಾರಂಭ ನಡೆಯಲಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು.
ಹೊಸ ರಾಷ್ಟ್ರ ಲಾಂಛನ ವಿವಾದ
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೊಸ ಸಂಸತ್ ಭವನದ ಮೇಲೆ ಲೋಕಾರ್ಪಣೆ ಮಾಡಿದ್ದ ಅಶೋಕ ಸ್ತಂಭಕ್ಕೆ ವಿಪಕ್ಷಗಳಾದ ಕಾಂಗ್ರೆಸ್, ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿವೆ. ಉತ್ತರ ಪ್ರದೇಶದ ಸಾರನಾಥದ ಅಶೋಕ ಸ್ತಂಭದಲ್ಲಿರುವ ಸಿಂಹಗಳು ಶಾಂತ ಸ್ವರೂಪದಲ್ಲಿದ್ದು, ಶಾಂತಿ, ಘನತೆ ಮತ್ತು ಸುರಕ್ಷತೆ ಬಗ್ಗೆ ಗಮನ ಸೆಳೆಯುತ್ತವೆ. ಆದರೆ ಹೊಸ ಪ್ರತಿಮೆಯಲ್ಲಿ ಸಿಂಹಗಳು ಉಗ್ರವಾಗಿ, ಆಕ್ರಮಣಕಾರಿ ಮಾಡುವಂತೆ ಕಂಡುಬಂದಿದ್ದು, ಭಯ ಹುಟ್ಟಿಸುವಂತಿವೆ. ಹಾಗಾಗಿ ಈ ಸಿಂಹಗಳು ಮೂಲ ಸ್ತಂಭದಂತಿಲ್ಲ ಎಂದು ಕಿಡಿಕಾರಿವೆ.
ನಾಳೆಯಿಂದ ಮಳೆ ಕಡಿಮೆ
ಜುಲೈ ಮೊದಲ ವಾರದಿಂದ ಅಬ್ಬರಿಸುತ್ತಿರುವ ಮಳೆ ನಾಳೆಯಿಂದ ಕೊಂಚ ತಗ್ಗಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಜನರಿಗೆ ಕೊಂಚ ನೆಮ್ಮದಿ ಸಿಗಲಿದೆ. ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಗುರುವಾರದಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಮಳೆ ಕೊಂಚ ಬಿಡುವು ನೀಡಲಿದೆ.