ಬೆಂಗಳೂರು: (ಜು.12):Cm Bommai :ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yadiyurappa)ಅವಧಿಯಲ್ಲಿ ನೇಮಕಗೊಂಡಿದ್ದ 52 ನಿಗಮ ಮಂಡಳಿಯ ಅಧ್ಯಕ್ಷರ ನೇಮಕಾತಿ ಆದೇಶ ರದ್ದು ಪಡಿಸಿದ ಬೆನ್ನಲ್ಲೇ ಎಲ್ಲಾ ಹುದ್ದೆಗಳನ್ನ (Party Workers) ಕಾರ್ಯಕರ್ತರಿಗೆ ನೀಡಲು ಸರ್ಕಾರ ಮುಂದಾಗಿದೆ.ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವಧಿಯಲ್ಲಿ ನೇಮಕಗೊಂಡ ಪಕ್ಷದ ಶಾಸಕರು ಹಾಗೂ ಮಾಜಿ ಶಾಸಕರನ್ನ ಹೊರತುಪಡಿಸಿ ಕನಿಷ್ಠ ಒಂದು ವರೆ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರನ್ನ ಬದಲಾಯಿಸಲಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಎಸ್ ವೈ ಜೊತೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ 10 ತಿಂಗಳು ಬಾಕಿ ಇರುವಾಗಲೇ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 52 ನಿಗಮ ಮಂಡಳಿಯ ಅಧ್ಯಕ್ಷರನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ಹುದ್ದೆಯಿಂದ ಕೈಬಿಟ್ಟಿದೆ ಇನ್ನೆರಡು ದಿನಗಳಲ್ಲಿ ಹೊಸಬರನ್ನ ನೇಮಿಸಲು ಮಾಡಲು ನಿರ್ಧಾರ ಮಾಡಲಾಗಿದೆ.ಇನ್ನು ನಿಗಮದ ಮಂಡಳಿಯಿಂದ ಕೈ ಬಿಡಲಾಗುವ ಅಧ್ಯಕ್ಷರ ಇನ್ನೊಂದು ಪಟ್ಟಿಯು ಸಿದ್ಧಗೊಂಡಿದ್ದು ಪಟ್ಟಿಯಲ್ಲಿ ಒಂದುವರೆ ವರ್ಷ ಪೂರೈಸಿರುವ 10 ರಿಂದ 12 ನಿಗಮದ ಮಂಡಳಿಗಳ ಅಧ್ಯಕ್ಷರು ಇದ್ದಾರೆ ಇದನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಯಾರು ಸೇಫ್?
ಕೆ ಆರ್ ಐ ಡಿ ಎಲ್ ಅಧ್ಯಕ್ಷ ಎಂ ರುದ್ರೇಶ್, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ಕೆಎಸ್ಟಿಡಿಎಸ್ ಅಧ್ಯಕ್ಷ ಕಾಪು ಸಿದ್ದಲಿಂಗ ಸ್ವಾಮಿ, ದೇವರಾಜ ಅರಸು ನಿಗಮದ ಅಧ್ಯಕ್ಷ ಆರ್ ರಘು ಕೌಟಿಲ್ಯ, ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅವರನ್ನ ಮಂಡಳಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಕೈ ಬಿಡಲು ಕಾರಣವೇನು?
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧ್ಯಕ್ಷರನ್ನ ಬದಲಾಯಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಇದ್ದ ಬಹುತೇಕರು ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗರೇ ಆಗಿದ್ದರಿಂದ ಅವರನ್ನ ಬದಲಾಯಿಸಲು ಪಕ್ಷ ಹಿಂದೇಟು ಹಾಕಿತ್ತು ಎನ್ನಲಾಗಿದೆ
ಇದನ್ನೂ ಓದಿ: Chamarajanagar Rathostsava: ಗಡಿನಾಡಿನಲ್ಲಿ ರಥೋತ್ಸವ ! 5 ವರ್ಷಗಳ ಬಳಿಕ ಜಾತ್ರೆಯ ಉತ್ಸವ