ಚಾಮರಾಜನಗರ: (ಜು.13): Chamarajanagar Rathostsava: ಐತಿಹಾಸಿಕ ಚಾಮರಾಜನಗರದ (Chamarajeshwara Ratha) ಚಾಮರಾಜೇಶ್ವರ ಸ್ವಾಮಿ ದೇವಾಲಯದ ರಥೋತ್ಸವ ಇಂದು ನಡೆಯಲಿದೆ.ಐದು (5 Year) ವರ್ಷಗಳ ಬಳಿಕ (Kempananjamba)ಕೆಂಪನಂಜಾಂಬ ಸಮೇತ (Shri Chamajeshwara Swami)ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವಕ್ಕೆ (Chamarajeshwara swami Rathotsava) ಕ್ಷಣಗಣನೆ.ಆಷಾಢ ಮಾಸದಲ್ಲಿ (Ashadha)ನಡೆಯುವ ರಥೋತ್ಸವದಲ್ಲಿ ನೂತನ ವಧು ವರರು (New Couples)ಪಾಲ್ಗೊಂಡು ರಥೋತ್ಸವಕ್ಕೆ ಭಕ್ತಿಯಿಂದ ಹಣ್ಣು ಜವನ ಎಸೆದು ಪುನೀತರಾಗುತ್ತಾರೆ.
ಬೆಳಗ್ಗೆ 11 ರಿಂದ 11:30 ನಡುವಿನ ಕನ್ಯಾ ಲಗ್ನದಲ್ಲಿ (Kanya )ರಥೋತ್ಸವ ನಡೆಯಲಿದೆ. ರಥೋತ್ಸವದ ಅಂಗವಾಗಿ ಇಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಜಾತ್ರಾ ಮಹೋತ್ಸವ 17ರವರೆಗೂ ನಡೆಯಲಿದೆ.ಸಾವಿರಾರು ಸಂಖ್ಯೆಯಲ್ಲಿ ಭಕ್ತರು (Devotees)ಸೇರುವ ನಿರೀಕ್ಷೆಯಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆಷಾಢ ಮಾಸದಲ್ಲಿ ಯಾವುದೇ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯೋದಿಲ್ಲ ಆದರೆ ಇಲ್ಲಿ ಆಷಾಢ ಮಾಸದಲ್ಲೇ ತೇರು ನಡೆಯುವುದು ವಿಶೇಷ (Chamarajanagara)ಚಾಮರಾಜನಗರ ಸೇರಿದಂತೆ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.ದೇವರ ಒಳಾಂಗಣ ಮೂರ್ತಿಯ ಪ್ರದಕ್ಷಿಣೆ ಹಾಕಿದ ನಂತರ ಉತ್ಸವ ಮೂರ್ತಿಯನ್ನ ರಥದಲ್ಲಿ ಪ್ರತಿಷ್ಠಾಪಿಸಿ ಬಳಿಕ ಎಲ್ಲಾ ಕೋಮಿನ (All Religious)ಮುಖಂಡರು ತೇರು ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆ. (Chamarajanagar)ಚಾಮರಾಜನಗರದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ರಥವು ದೇವಸ್ಥಾನದ ಮುಂಭಾಗದಿಂದ ದಕ್ಷಿಣ ಅಭಿಮುಖವಾಗಿ ಚಲಿಸಿ ಎಸ್ ಬಿ ಎಂ ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರ ದೇವಾಲಯ ವೃತ್ತದಿಂದ ಮಾರಮ್ಮ ದೇವಸ್ಥಾನ ರಸ್ತೆ ಮೂಲಕ ಹಳೆ ತರಕಾರಿ ಮಾರುಕಟ್ಟೆಯ ರಸ್ತೆಯಲ್ಲಿ ಹಾದು ದೇವಸ್ಥಾನದ ಮೂಲ ಸ್ಥಾನ ತಲುಪಲಿದೆ.
ಘಟನೆ ಏನು?
2017ರಲ್ಲಿ ರಥಕ್ಕೆ ಕಿಡಿಗೇಡಿ ಒಬ್ಬ ಬೆಂಕಿ ಹಾಕಿದ(Fire) ಹಿನ್ನೆಲೆ ರಥೋತ್ಸವ ನಿಂತಿತ್ತು ಹೊಸ ರಥದ ನಿರ್ಮಾಣ ಕಾರ್ಯಾ ವಿಳಂಬವಾಗಿ ಐದು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಸುಮಾರು 1.20 ರೂ ಕೋಟಿ ವೆಚ್ಚದಲ್ಲಿ ಹೊಸ ರಥದ ನಿರ್ಮಾಣ ಆಗಿರುವುದರಿಂದ ಈ ಬಾರಿ ಅದ್ದೂರಿಯಾಗಿ ರಥೋತ್ಸವ ನಡೆಯಲಿದೆ.
ಇದನ್ನೂ ಓದಿ: S T Someshekhar : ಮಳೆ ಹಾನಿ ಪ್ರದೇಶಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ