ನವದೆಹಲಿ: (ಜು.12): Commonwealth Games 2022: ಜುಲೈ 28 ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನ ಮಹಿಳಾ ಟಿ20 ಟೂರ್ನಿಗೆ 15 ಮಂದಿಯ ತಂಡವನ್ನು ಬಿಸಿಸಿಐ ಪ್ರಕಟ ಮಾಡಿದೆ.
ತಂಡದಲ್ಲಿ ಕರ್ನಾಟಕ ಮೂಲದ ಪ್ರತಿಭೆ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಹೌದು ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ. ಮಹಿಳಾ ಭಾರತೀಯ ತಂಡವನ್ನು ಹರ್ಮನ್ ಪ್ರೀತ್ ಕೌರ್ ಅವರು ಮುನ್ನಡೆಸಲಿದ್ದು ಸ್ಮೃತಿ ಮಂದಾನ ಉಪನಾಯಕಿಯಾಗಿ ಇದ್ದಾರೆ.ಸ್ನೆಹ್ ರಾಣಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ ತಾನಿಯಾ ಭಾಟಿಯಾ ತಂಡವನ್ನು ಸೇರಿದ್ದಾರೆ. ಸಿಮ್ರಾನ್ ಬಹದೂರ್, ರಿಚಾ ಘೋಷ್, ಪೂನಂ ಯಾದವ್ ಮೀಸಲು ಆಟಗಾರ್ತಿಯರಾಗಿ ತಂಡದ ಜೊತೆ ಇದ್ದಾರೆ.ತಾನಿಯಾ ಭಾಟಿಯಾ 22 ಪಂದ್ಯಗಳಿಂದ ಕೇವಲ 9.72ರ ಬ್ಯಾಟಿಂಗ್ ಸರಾಸರಿಯಲ್ಲಿ 166 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ. ಆದರೆ 14 ಪಂದ್ಯಗಳಿಂದ 112ರ ಸ್ಟ್ರೈಕ್‌ರೇಟ್‌ನಲ್ಲಿ 191 ರನ್ ಚಚ್ಚಿರುವ ರಿಚಾ ಘೋಷ್ ಮೀಸಲು ಆಟಗಾರ್ತಿಯಾಗಿ ಸ್ಥಾನ ಗಳಿಸಿಕೊಂಡಿದ್ದಾರೆ.
ಜುಲೈ 29ಕ್ಕೆ ಆಸೀಸ್ ವಿರುದ್ಧ ಮೊದಲ ಪಂದ್ಯ ಭಾರತ ಎದುರಿಸಲಿದೆ. 31ಕ್ಕೆ ಪಾಕಿಸ್ತಾನ, ಆಗಸ್ಟ್ ಮೂರಕ್ಕೆ ಬಾರ್ಬಾಡೋಸ್, ಹಾಗೂ ಶ್ರೀಲಂಕಾ ಇಂಗ್ಲೆಂಡ್- ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿ ಇರಲಿದೆ.ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು ಬರ್ಮಿಂಗ್ ಹ್ಯಾಮ್ ನ ಏಜ್ ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ
🚨 NEWS 🚨: #TeamIndia (Senior Women) squad for Birmingham 2022 Commonwealth Games announced. #B2022 | @birminghamcg22 pic.twitter.com/lprQenpFJv
— BCCI Women (@BCCIWomen) July 11, 2022