ಭಾರತದಲ್ಲಿರೋ ಬಿಲಿಯನೇರ್‌ಗಳು ಯಾರು ಅಂತಾ ಯಾರಾದ್ರೂ ಪ್ರಶ್ನಿಸಿದ್ರೆ, ತಕ್ಷಣ ಎಲ್ಲರಿಗೂ ನೆನಪಾಗೋದೇ ಅಂಬಾನಿ (Adani) ಮತ್ತು ಅದಾನಿ(Ambani). ಇಬ್ಬರೂ ಸಹ ಗುಜರಾತ್ ಮೂಲದವರು. ಮುಖೇಶ್ ಅಂಬಾನಿ (Adani) ಅಪ್ಪ ಕಟ್ಟಿದ ಸಾಮ್ರಾಜ್ಯಕ್ಕೆ ಅಧಿಪತಿಯಾಗಿದ್ರೆ, ಗೌತಮ್ ಅದಾನಿ ತಮ್ಮದೇ ಸಾಮ್ರಾಜ್ಯವನ್ನ ಕಟ್ಟಿ, ಅದಕ್ಕೆ ಅಧಿಪತಿಯಾಗಿದ್ದಾರೆ. ಆದ್ರೆ, ಇದುವರೆಗೆ ಈ ಇಬ್ಬರೂ ಬಿಲಿಯನೇರ್‌ಗಳು ನೇರವಾಗಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿರಲಿಲ್ಲ. ಆದ್ರೆ, ಈಗ ಆ ಟೈಂ ಬಂದಿದೆ. ಅದರ ಕುರಿತು ಹೇಳ್ತೀವಿ.
ಭಾರತದಲ್ಲಿ ಒಂದು ಕಾಲಕ್ಕೆ ಅತ್ಯಂತ ಶ್ರೀಮಂತರು ಯಾರು ಅಂದ್ರೆ ಕೇಳಿ ಬರ್ತಾ ಇದ್ದಿದ್ದು ಟಾಟಾ-ಬಿರ್ಲಾ ಹೆಸರುಗಳು. ಅಲ್ದೆ, ತಮ್ಮೂರಿನ ಶ್ರೀಮಂತರನ್ನ ಜನ ಅವರೊಂತರಾ ಟಾಟಾ-ಬಿರ್ಲಾ ವಂಶದವರು ಅಂತಾ ಗುರುತಿಸಿದ್ರು. ಅಷ್ಟರ ಮಟ್ಟಿಗೆ ಜನರ ಬಾಯಲ್ಲಿ ಟಾಟಾ ಮತ್ತು ಬಿರ್ಲಾ ಹೆಸರುಗಳು ಫೇಮಸ್ ಆಗಿದ್ವು. ಟಾಟಾ ಈಗಲೂ ಹಾಗೆಯೇ ಉಳಿದುಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆ.
ಬಿರ್ಲಾ ಗ್ರೂಪ್ ಕೂಡ ಹಾಗೇ ಇದ್ರೂ, ಟಾಟಾದಷ್ಟು ಪ್ರಬಲವಾಗಿಲ್ಲ. ಇವರಿಬ್ಬರ ಹೆಸರು ಚಿರಪರಿಚಿತವಾದಷ್ಟೇ ಈಗಿರೋ ಶ್ರೀಮಂತರು ಅಂದ್ರೆ ಅದು ಅಂಬಾನಿ ಮತ್ತು ಅದಾನಿ(Adani). ಮುಖೇಶ್ ಅಂಬಾನಿಯ (Ambani) ತಂದೆ ಧೀರೂಭಾಯ್ ಅಂಬಾನಿ (Ambani) ರಿಲಯನ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದ್ರು. ಇದಾದ ಬಳಿಕ ಹಲವು ಕ್ಷೇತ್ರಗಳಿಗೆ ರಿಲಯನ್ಸ್ ಕಾಲಿಟ್ಟು, ಭರ್ಜರಿ ಸಕ್ಸಸ್ ಕಂಡಿದೆ. ಈ ಮೂಲಕ ಅಂಬಾನಿ (Ambani) ಅನ್ನೋ ಹೆಸರು ಭಾರಿ ಫೇಮಸ್ ಆಗಲು ಧೀರೂಭಾಯ್ ಅಂಬಾನಿ ಕಾರಣರಾಗಿದ್ರೆ, ಆ ಹೆಸರನ್ನು ಮತ್ತಷ್ಟು ಜನರಿಗೆ ತಲುಪುವಂತೆ ಮಾಡುವಲ್ಲಿ ಅವರ ಮಗ ಮುಖೇಶ್ ಅಂಬಾನಿ ಯಶಸ್ಸು ಕಂಡಿದ್ದಾರೆ.