ಮಹಾರಾಷ್ಟ್ರ: (ಜು.12):Droupadi Murmu: ರಾಷ್ಟ್ರಪತಿ ಹುದ್ದೆಗೆ NDA ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಕಣದಲ್ಲಿದ್ದು, ಇವರಿಗೆ ಉದ್ದವ್ ಠಾಕ್ರೆ ಅವರ ಶಿವಸಿನ ಬೆಂಬಲ ನೀಡಿದೆ ಎಂದು ಮೂಲಗಳು ತಿಳಿಸಿದೆ.
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಉದ್ದವ ಠಾಕ್ರೆ ಬಣದ ಸಂಸದರು ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಬೇಕು ಎಂದು ಉದ್ಭವ ಠಾಕ್ರೆ ಮತ್ತು ಸಂಸದರು ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಏಕನಾಥ ಶಿಂದೆ ಬಿಜೆಪಿ ಬೆಂಬಲದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಠಾಕ್ರೆ ಜೊತೆಗೆ 16 ಮಂದಿ ಸಂಸದರು ಸಭೆ ನಡೆಸಿ ಬುಡಕಟ್ಟು ಸಮುದಾಯದ ಮಹಿಳೆ ಯಾಗಿರುವ ದ್ರೌಪದಿ ಮುರುಮು ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದರು.ಸಭೆ ಬಳಿಕ ಒಂದು ದಿನದ ನಂತರ ಬೆಂಬಲ ನೀಡುವುದಾಗಿ ಎನ್ ಡಿ ಟಿವಿ ವರದಿ ಮಾಡಿದೆ.
ರಾಷ್ಟ್ರಪತಿ ಚುನಾವಣೆಗೆ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಲಾಗಿದೆ ಈಗಾಗಲೇ ಹಲವಾರು ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿದೆ. ಉಳಿದಂತೆ ಜೆಡಿಯು ಬೆಂಬಲ ನೀಡಿದ್ದು ಜೆಡಿಎಸ್ ಕೂಡ ಬೆಂಬಲ ನೀಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.