Dr. Shiva Rajkumar Birthday:(ಜು.11): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಆದರೆ ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು.ಆದರೆ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಂಭ್ರಮಿಸಲು ತೀರ್ಮಾನ ಮಾಡಿದ್ರು ಯಾಕೆಂದರೆ ಇದು 60ನೆಯ ಹುಟ್ಟುಹಬ್ಬ ಆದ್ರೆ ಶಿವರಾಜಕುಮಾರ್ ಅವರೇ ಬೇಡ ಎಂದು ಹೇಳಿರುವಾಗ ಇಂದು ಸರಳವಾಗಿ ಹುಟ್ಟುಹಬ್ಬ ಆಚರಣೆಯಾಗಲಿದೆ.
ಶಿವಣ್ಣನ ಬಾಲ್ಯ
ಶಿವರಾಜ್‍ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಙ್ನಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು.ಬಾಲ್ಯದಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಕಳೆದವರು ಅಲ್ಲಿಯ ನ್ಯೂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ್ರು.ಚೆನ್ನೈನಲ್ಲಿ ಇರುವಾಗಲೇ ನಿರ್ದೇಶಕಕ್ಕೆ ಬಾಲಚಂದ್ರ ಅವರ ಮಾರ್ಗದರ್ಶನದಂತೆ ಪದವಿ ವಿದ್ಯಾಭ್ಯಾಸ ಮಾಡಿ ಅಭಿನಯದ ತರಗತಿಗೆ ಸೇರಿಕೊಂಡಿದ್ದರು ಶಿವಣ್ಣ.

ಕುಚುಪುಡಿ ನೃತ್ಯದಲ್ಲೂ ಪರಿಣಿತಿಗಳಿಸಿದರು, ನಂತರ ತಮ್ಮ ಮೊದಲ ಚಿತ್ರ ಆನಂದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ರಥಸಪ್ತಮಿ ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅಭಿನಯಿಸಿ ಸೈನಿಸಿಕೊಂಡಿದ್ದರು.ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಓಂ ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರಿಗೆ ಸಾಕಷ್ಟು ಜನಪ್ರಿಯತೆ ಲಭಿಸಿತು. ಇಂದಿಗೂ ಓಂ ಚಿತ್ರ ರಿಲೀಸ್ ಆದರೆ ಚಿತ್ರಮಂದಿರ ಹೌಸ್ ಫುಲ್.
ಪ್ರಶಸ್ತಿಗಳು
ಇನ್ನು ಶಿವರಾಜ್ ಕುಮಾರ್ ಅವರಿಗೆ ಓಂ, ಹೃದಯ ಹೃದಯ, ಚಿಗುರಿದ ಕನಸು ಜೋಗಿ ಚಿತ್ರಗಳಲ್ಲಿ ನಟನೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿದೆ ಹಾಗೂ ನಾಲ್ಕು ಫಿಲಂ ಅವಾರ್ಡ್ ಗಳು, ಮೂರು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿಗಳು ಲಭಿಸಿದೆ ಇನ್ನೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
ನನ್ನ ಮುಂದಿನ ಚಿತ್ರ “45” !! ಪೋಸ್ಟರ್ ನಿಮಗಾಗಿ @ArjunJanyaMusic ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ.
— DrShivaRajkumar (@NimmaShivanna) July 12, 2022
ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ @iamnagarjuna @Siva_Kartikeyan @PrithviOfficial ಎಲ್ಲರಿಗೂ ಧನ್ಯವಾದಗಳು.
ಅಭಿಮಾನಿ ದೇವರುಗಳಿಗೆ ನನ್ನ 🙏🏼 pic.twitter.com/fd0ax4b8rg
60 ವರ್ಷವಾದರೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಶಿವಣ್ಣ ಅವರು 25 ರ ಹರೆಯದ ಹುಡುಗನಂತೆ ಕಾಣಿಸುತ್ತಾರೆ.ಇನ್ನೂ ಶಿವಣ್ಣ ಅವರ ನಾನ್ ಸ್ಟಾಪ್ ಸಿನಿಮಾಗಳ ಧಮಾಕ ಜೀ ಪಿಚ್ಚರ್ ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇದೆ.ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರ ಪೋಸ್ಟರ್ಗಳು ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಸಂದೇಶ್ ನಾಗರಾಜ್ ನಿರ್ಮಾಣದ ಹಾಗೂ ಆರ್ ಜೆ ಶ್ರೀನಿವಾಸ್ ನಿರ್ದೇಶನದ ಘೋಸ್ಟ್ ಪೋಸ್ಟರ್ ಹಾಗೂ ಸಚಿನ್ ನಿರ್ಮಾಣ, ನಿರ್ದೇಶನದ ಅಶ್ವಥಾಮ ಮತ್ತು ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 45 ಚಿತ್ರದ ಪೋಸ್ಟರ್ಗಳು ಬಿಡುಗಡೆ ಆಗುತ್ತಿದೆ.ಈ ಮೂರು ಚಿತ್ರಗಳನ್ನು ಸೇರಿ ಒಟ್ಟು ಶಿವರಾಜ್ ಕುಮಾರ್ ಕೈಯಲ್ಲಿ ಎಂಟು ಚಿತ್ರಗಳು ಇವೆ. ಈಗಾಗಲೇ ಶಿವರಾಜ್ ಕುಮಾರ್ ಅವರ 125ನೇ ಚಿತ್ರ ವೇದ ಶೂಟಿಂಗ್ ಬಹುತೇಕ ಮುಗಿದಿದೆ.