ಪಾಟ್ನಾ: (ಜು.12):Pm Modi Program: ಮತದಾನದ ವೇಳೆ ಕೆಲವೊಮ್ಮೆ ಮರಣ (Death Person)ಹೊಂದಿದವರು ಹೆಸರನ್ನು ಕೂಡ ಸೇರಿಸಲಾಗುತ್ತೆ. ಅದು ಗೊತ್ತಿಲ್ಲದೇ ಆಗಿಯೂ ಇರಬಹುದು ಆದರೆ ಇಲ್ಲಿ ಮರಣ ಹೊಂದಿ ನಾಲ್ಕು ವರ್ಷ ಆದರೂ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿರುವುದು ವಿಚಿತ್ರ.
ಹೌದು ಬಿಹಾರದ ರಾಜಧಾನಿ ಪಾಟ್ನಾಗೆ ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿನದ ಭೇಟಿಗಾಗಿ ಆಗಮಿಸುತ್ತಿದ್ದಾರೆ. ಇವಳೆ ವಿಧಾನಸಭೆಯ ಸಂಕೀರ್ಣದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬಿಹಾರ ವಿಧಾನಸಭೆಗೂ ಭೇಟಿ ನೀಡಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಿಹಾರದ ಶಾಸಕರು ಸಂಸದರು ಹಾಗೂ ಮಾಜಿ ಶಾಸಕರಿಗೂ ಆಹ್ವಾನ ನೀಡಲಾಗಿತ್ತು ಈ ನಡುವೆ ಅಧಿಕಾರಿಗಳು ಮೃತ ಶಾಸಕರು ಒಬ್ಬರಿಗೆ ಆಗಮಿಸಲು ಆಹ್ವಾನ ಪತ್ರ ಕಳುಹಿಸಲಾಗಿದೆ.
ಅಧಿಕಾರಿಗಳು ನಾಲ್ಕು ವರ್ಷ ಹಿಂದೆ ನಿಧನರಾಗಿದ್ದ ಉತ್ತರದ ಬಿಹಾರದ ಮಾಜಿ ಶಾಸಕ ಅಬ್ದುಲ್ ಪಯಾಮಿ ಅವರಿಗೆ ಆಹ್ವಾನ ಕಳಿಸಿದ್ದಾರೆ. ಆಫನ ಪತ್ರಿಕೆ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರು ಬೆಚ್ಚಿಬಿಟಿದ್ದಾರೆ ಈ ಬಗ್ಗೆ ಕಾಂಗ್ರೆಸ್ ಶಾಸಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಬ್ದುಲ್ ಅವರು 1980 ರಲ್ಲಿ ಮಧು ಬನಿಯ ಲೌಕಾಹ ವಿಧಾನಸಭಾ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಆದರೆ ಅವರು ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ ವಿಧಾನಸಭೆಯ ಅಧಿಕಾರಿಗಳು ನಮ್ಮ ನಡುವೆ ಇಲ್ಲ ಎಂಬುದನ್ನು ಕನಿಷ್ಠ ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೀತಲಾಂಬರ ಝ ಅವರು ಹೇಳಿದ್ದಾರೆ.ಏಜೆನ್ಸಿ ಮೂಲಗಳ ಪ್ರಕಾರ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಮೃತ ವ್ಯಕ್ತಿಯನ್ನು ಸೇರಿಸುವುದು ದೊಡ್ಡ ಲೋಪವಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ತಪ್ಪು ಒಪ್ಪಿಕೊಂಡಿದ್ದಾರೆ.