National Emblem: (ಜು.12): ಸರ್ಕಾರ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಆಪಾದನೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಸುಂದರ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಆಕ್ರಮಣಕಾರಿ ಭಂಗಿ ಹೊಂದಿರುವ ಸಿಂಹಗಳ ರೀತಿಯಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ. ಇದು ಪ್ರಸಿದ್ಧ ಸಾರಾನಾಥದಲ್ಲಿದ್ದ ಸಿಂಹದ ಲಾಂಛನಗಳೇ ಅಥವಾ ಗಿರ್ ಸಿಂಹದ ವಿಕೃತ ಆವೃತ್ತಿಯೇ? ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರಿಪಡಿಸಿ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ
ಗರ್ಜನೆ ಮಾಡುತ್ತಿರುವ, ಅನಗತ್ಯವಾಗಿ ಆಕ್ರಮಣಕಾರಿಯಾಗಿ ಅಸಮಂಜಸವಾಗಿರುವ ನಾಚಿಕೆಗೇಡಿನ ಆವೃತ್ತಿ ಇದಾಗಿದೆ. ಇದನ್ನು ತಕ್ಷಣವೇ ಬದಲಿಸಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಟ್ವಿಟರ್‌ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಈ ನಡುವೆ ಹೊಸ ಸಂಸತ್ ಭವನದ ಮೇಲಿರುವ ಲಾಂಛನವನ್ನು ನಿರ್ಮಾಣ ಮಾಡಿದ ಕಲಾವಿದ ಸುನೀಲ್ ದಿಯೋರ್ (Sunil Deore) ಮಾತನಾಡಿದ್ದು, ಸಾರಾನಾಥದ ಸ್ತಂಭದ ರೀತಿಯಲ್ಲಿಯೇ ಇದನ್ನು ಚಿತ್ರಿಸಲಾಗಿದೆ. 9 ತಿಂಗಳ ಕಾಲ ಶ್ರಮವಹಿಸಿ ಇದರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಾರಾನಾಥದಲ್ಲಿರುವ ಸ್ತಂಭದ ಸಿಂಹಗಳನ್ನೇ ಇಲ್ಲಿ ಚಿತ್ರಿಸಲಾಗಿದೆ ಎಂದಿದ್ದಾರೆ.
Sense of proportion & perspective.
— Hardeep Singh Puri (@HardeepSPuri) July 12, 2022
Beauty is famously regarded as lying in the eyes of the beholder.
So is the case with calm & anger.
The original #Sarnath #Emblem is 1.6 mtr high whereas the emblem on the top of the #NewParliamentBuilding is huge at 6.5 mtrs height. pic.twitter.com/JsAEUSrjtR