Single Movement: (ಜು.12):ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಹಲವಾರು ಯೋಜನೆಗಳನ್ನ ಜಾರಿ (World Population Day) ಮಾಡ್ತಾ ಇದ್ರು, ಜನಸಂಖ್ಯೆ ಮಾತ್ರ ಕಮ್ಮಿ ಆಗ್ತಾ ಇಲ್ಲ. ಹಾಗಾಗಿ ಇಲ್ಲೊಬ್ಬರು ಜನಸಂಖ್ಯೆ ಕಡಿಮೆ (Solution) ಮಾಡಲು ಸೊಲ್ಯೂಷನ್ ನೀಡಿದ್ದಾರೆ.ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವ (Nagaland) ನಾಗಾಲ್ಯಾಂಡ್ ಸಚಿವ ತೆಮ್ಜನ್ ಇಮ್ನಾ ಅಲೊಂಗ್ ದೇಶದಲ್ಲಿ ಏರುತ್ತಿರುವ ಜನಸಂಖ್ಯೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವ ಜನಸಂಖ್ಯೆ ದಿನದ ಸಂದರ್ಭ ಪ್ರತಿಕ್ರಿಯಿಸಿದ್ದ ಸಚಿವರು ಕುಟುಂಬ ಯೋಜನೆ (Family Planning) ಕುರಿತು ಮಾತನಾಡಿ ಒಂದು ಪರಿಹಾರವನ್ನು ಕೂಡ ಕೊಟ್ಟಿದ್ದಾರೆ.
ವಿಶ್ವ ಜನಸಂಖ್ಯಾ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಯೋಚನೆ ಮಾಡೋಣ ಮಕ್ಕಳು ಪಡೆಯುವ ಕುರಿತು ಯೋಚಿಸಿ ನಿರ್ಧರಿಸೋಣ (SIngles)ಅಥವಾ ನನ್ನಂತೆ ಒಂಟಿ ಜೀವನ ನಡೆಸಿ ಇದರಿಂದ ಸುಸ್ಥಿರ ಭವಿಷ್ಯಕ್ಕಾಗಿ ಶ್ರಮಿಸಬಹುದು.
ಬನ್ನಿ ಸಿಂಗಲ್ಸ್ ಆಂದೋಲನಕ್ಕೆ ನನ್ನ (Single’s Movement)ಜೊತೆ ಕೈಜೋಡಿಸಿ ಎಂದು ಬರೆದುಕೊಂಡಿದ್ದಾರೆ.ಈ ಬಗ್ಗೆ ಟ್ವಿಟ್ (Tweet) ಕೂಡ ಮಾಡಿದ್ದು ಇವರ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಸರ್ ನಿಮ್ಮ ಜನಪ್ರಿಯತೆ ಏರುತ್ತಿರುವ ರೀತಿ ನೋಡಿದರೆ ನೀವು ಕೂಡ ಬಹಳ ಕಾಲ ಒಂಟಿ ಜೀವನ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ತೋರುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಸಲ್ಮಾನ್ ಖಾನ್ ನಂತರ ಅತ್ಯಂತ ಅರ್ಹ ಬ್ಯಾಚುಲರ್ ಎಂದು ಟ್ವೀಟ್ ಮಾಡಿದ್ದಾರೆ.
On the occasion of #WorldPopulationDay, let us be sensible towards the issues of population growth and inculcate informed choices on child bearing.
— Temjen Imna Along (@AlongImna) July 11, 2022
Or #StaySingle like me and together we can contribute towards a sustainable future.
Come join the singles movement today. pic.twitter.com/geAKZ64bSr
ಈಶಾನ್ಯ ಭಾರತದ ಜನರ ಮುಖಚರ್ಯ ಕುರಿತ ಮಾತುಕತೆಗೆ ಪ್ರತಿಕ್ರಿ ಸಿದ್ದ ಸಚಿವರು,ಚಿಕ್ಕ ಕಣ್ಣುಗಳು ಪ್ರಯೋಜನವನ್ನು ವಿವರಿಸಿ ಎಲ್ಲರಿಗೂ ನಗೆ ಬರೆಸಿದರು. ಕಣ್ಣಿಗೆ ಬೀಳುವ ಕಸ ಕಡಿಮೆ ಮತ್ತೆ ದೀರ್ಘ ಕಾರ್ಯಕ್ರಮ ನಡೆಯುತ್ತಿರುವಾಗ ಸುಲಭವಾಗಿ ನಿದ್ದೆ ಮಾಡಬಹುದು ಎಂದು ಹಾಸ್ಯ ಮಾಡಿದ್ದರು.