ಮಹಾರಾಷ್ಟ್ರ ರಾಜಕೀಯ (Maharashtra Political Crisis) ಹೈಡ್ರಾಮಾ ಬಳಿಕ ಗೋವಾದಲ್ಲಿ (Goa Congress Crisis) ಕೂಡ ಕಾಂಗ್ರೆಸ್ (Congress) ಸಂಕಷ್ಟಕ್ಕೆ ಸಿಲುಕಿದೆ. ಗೋವಾದಲ್ಲಿ ಭಾರಿ ರಾಜಕೀಯ (Goa Congress) ಬೆಳವಣಿಗೆ ಶುರುವಾಗಿದೆ. ಶಾಸಕರ (MLA) ಬಂಡಾಯ ತಡೆಯಲು ಕಾಂಗ್ರೆಸ್ (Congress) ಹೈಕಮಾಂಡ್ ಸಕ್ರಿಯವಾಗಿದೆ. ಹಾಗಿದ್ರೆ, ದೇಶದ ಅತ್ಯಂತ ಪುಟ್ಟ ರಾಜ್ಯದ ಇತ್ತೀಚೆಗಿನ ರಾಜಕೀಯ ವಿದ್ಯಮಾನ ಏನು? ಇಲ್ಲಿದೆ ನೋಡಿ ಮಾಹಿತಿ.
ದೇಶದಲ್ಲಿ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ (Maharashtra Political Crisis) ಆಯ್ತು. ಇದೀಗ ಮಹಾರಾಷ್ಟ್ರದ ಸೋಂಕು ನೆರೆಯ ಗೋವಾಕ್ಕೂ (Goa) ಹಬ್ಬಿದೆ. ಯೆಸ್…. ಗೋವಾದಲ್ಲಿ (Goa) ಮತ್ತೆ ರಾಜಕೀಯ ಕ್ಷಿಪ್ರ ಬೆಳವಣಿಗೆ ನಡೆಯುವ ಲಕ್ಷಣ ಗೋಚರಿಸಿದೆ. ಕಾಂಗ್ರೆಸ್‌ನ (Congress) ಮೂವರು ಎಂಎಲ್ಎಗಳು (MLA) ಬಿಜೆಪಿ (BJP) ಟಚ್‌ನಲ್ಲಿ ಇದಾರೆ. ಆದಷ್ಟು ಬೇಗ ಬಿಜೆಪಿ (BJP Party) ಪಕ್ಷ ಸೇರಿಕೊಳ್ಳುವ ಸಾಧ್ಯತೆ ಇದೆ ಎಂಬ ಸ್ಫೋಟಕ ಸುದ್ದಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡ್ತಿದೆ.